ಇಂದಿನ ರಾಜಕೀಯ ವ್ಯವಸ್ಥೆ ತುಂಬಾ ವ್ಯತ್ಯಾಸ : ಕೆ.ಬಿ.ಕೋಳಿವಾಡ
Today's political system is very different: K.B. Koliwada
ರಾಣೆಬೆನ್ನೂರು 29 : ನನ್ನ ರಾಜಕೀಯ ಜೀವನದ ಅವಧಿಯು ಅತಿ ಅತ್ಯುತ್ತಮ ಪರ್ವಕಾಲವಾಗಿತ್ತು ಹಿಂದಿನ ಮತ್ತು ಇಂದಿನ ರಾಜಕೀಯ ವ್ಯವಸ್ಥೆ ತುಂಬಾ ವ್ಯತ್ಯಾಸವಿದೆ. ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ವಿಷಾದಿಸಿದರು. ರವಿವಾರ ಮುಂಜಾನೆ ಅವರ ಗ್ರಹ ಸಭಾದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ, ರಾಜಕಾರಣಿಗಳು ಜನರ ಸೇವಕರೇ ಹೊರತು, ಜನರನ್ನು ಆಳುವವರಲ್ಲ ಎನ್ನುವ ತತ್ವ ಸಿದ್ಧಾಂತವನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ರಾಣೆಬೆನ್ನೂರು ಮತ್ತು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಅಭಿವೃದ್ಧಿಪಡಿಸಿದ ಹೆಮ್ಮೆ ಮತ್ತು ಸಂತೋಷ ತಮಗಿದೆ ಇದರಿಂದ ನಾನು ಸಂತ್ರುಪ್ತನಾಗಿದ್ದೇನೆ ನನ್ನ ಜನ್ಮ ಸಾರ್ಥಕವಾಗಿದೆ ಎಂದರು.
ರಾಜ್ಯದಲ್ಲಿಯೇ ರಾಣೆಬೆನ್ನೂರು ನಗರ ಮತ್ತು ತಾಲೂಕು ಅತಿ ವೇಗವಾಗಿ ಬೆಳೆದಿದೆ, ಬೆಳೆಯುತ್ತಲೇ ಇದೆ. ಬೆಳವಣಿಗೆಗೆ ತಕ್ಕಂತೆ ಮೂಲಭೂತ ಸೌಲಭ್ಯ ಕಲ್ಪಿಸುವುದು ಆಡಳಿತದ ಎಲ್ಲರ ಕರ್ತವ್ಯ. ದೂರ ದೃಷ್ಟಿ ಇಟ್ಟುಕೊಂಡು ಮತ್ತಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಲಿ ಎನ್ನುವ ಆಶಯ ತಮ್ಮದಾಗಿದೆ ಎಂದರು. ಕಳೆದ 6 ತಿಂಗಳಿಂದ ರಾಣೆಬೆನ್ನೂರು ನಗರದಲ್ಲಿ ಕೆ.ಬಿ. ಕೋಳಿವಾಡ ಚಾರಿಟೇಬಲ್ ಟ್ರಸ್ಟ್ ಆರಂಭವಾಗಿದ್ದು, ಅದರ ಮೂಲಕ, ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಶವ ಸಾಗಿಸುವ ವಾಹನ ಉಚಿತವಾಗಿ ದೊರೆಯಲಿದೆ. ಮತ್ತು ಎಪಿಎಲ್ ಹೊಂದಿದ ಪ್ರತಿಯೊಬ್ಬರು ಚಾಲಕನ ಭತ್ತೆ 500, 10 ಲೀಟರ್ ಡೀಸೆಲ್ ಹಾಕಿ ಅದರ ಪ್ರಯೋಜನ ಪಡೆಯಬಹುದಾಗಿದೆ ಎಂದರು.
ಶಿಕ್ಷಣ ವಂಚಿತ ವಿದ್ಯಾರ್ಥಿಗಳು ಮತ್ತು ಹಸಿವಿನಿಂದ ಬಳಲುವವರಿಗಾಗಿ ವಿದ್ಯಾರ್ಥಿ ನಿಧಿ ಸ್ಥಾಪಿಸಲಾಗಿದೆ. ಅರ್ಹರು ಅದರ ಪ್ರಯೋಜನ ಪಡೆಯಬಹುದು ಅದಕ್ಕಾಗಿ ಗುರುತಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ನನ್ನ ರಾಜಕೀಯ ಬದುಕಿಗೆ ಕ್ಷೇತ್ರದ ಜನತೆ ನನ್ನ ಮೇಲೆ ಅಪಾರ ನಂಬಿಕೆ, ವಿಶ್ವಾಸವಿಟ್ಟು 5 ಭಾರಿ ಆರಿಸಿ ಕಳಿಸಿ, ಅನೇಕ ಹುದ್ದೆಗಳನ್ನು ಅಲಂಕರಿಸಿ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಅವರ ಋಣ ಎಷ್ಟು ತೀರಿಸಿದರು ಸಾಲದು ಎಂದರು.ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದು, ಸಮಾಜ ಸೇವೆಗಾಗಿ ಪ್ರತಿ ತಿಂಗಳು ಟ್ರಸ್ಟಿಗೆ ನನಗೆ ಬರುವ 75,000, ಸಾವಿರ ಹಣ ಜಮೆಯಾಗುತ್ತಿದೆ.
ಅಲ್ಲದೆ ಈಗಾಗಲೇ 25 ಲಕ್ಷ ಮೊತ್ತವಾಗಿ ದೀಪಾಸಿಟ್ ಇದೆ. ಶಾಸಕರು ತಮ್ಮ ಪಿಕೆಕೆ ಇಂದ ಶವ ವಾಹನ ದೇಣಿಗೆಯಾಗಿ ನೀಡಿದ್ದಾರೆ. ಇದರ ಸೇವೆ ಪಡೆಯಲು ಮುಂದಾಗಬೇಕು ಇದು ನನ್ನ ಸಮಾಜ ಸೇವೆಯ ಮುಖ್ಯ ಭಾಗವಾಗಿದೆ ಎಂದು ಹೇಳಿದ ಕೆ.ಬಿ. ಕೋಳಿವಾಡರು ಕ್ಷೇತ್ರದ ನಾಡಿನ ಜನತೆಗೆ ತಮ್ಮ ಕೃತಜ್ಞತೆ ಕಲ್ಲಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಂಜನಗೌಡ ಪಾಟೀಲ್, ಸಣ್ಣತಮ್ಮಪ್ಪ ಬಾರ್ಕಿ, ವೀರೇಶ ಮೋಟಗಿ, ಮತ್ತಿತರರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 