ಕೃಷ್ಣಾ ನದಿಯಲ್ಲಿ ಬಿದ್ದ ಟಿಪ್ಪರ್ ಮೇಲಕ್ಕೆ; ಚಾಲಕನ ಮೃತದೇಹ ಪತ್ತೆ

ಕೃಷ್ಣಾ ನದಿಯಲ್ಲಿ ಬಿದ್ದ ಟಿಪ್ಪರ್ ಮೇಲಕ್ಕೆ; ಚಾಲಕನ ಮೃತದೇಹ ಪತ್ತೆ  Tipper that fell into Krishna River retrieved; driver's body found

ಲೋಕದರ್ಶನ ವರದಿ 

ಕೊಲ್ಹಾರ   03: ಟಿಪ್ಪರ್ ಮತ್ತು ಕಾರಿನ ನಡುವೆ ಓವರ್‌ಟೇಕ್ ಮಾಡುವ ವೇಳೆ ಡಿಕ್ಕಿ ಸಂಭವಿಸಿ ನಿಯಂತ್ರಣ ತಪ್ಪಿದ ಟಿಪ್ಪರ್ ಕೊಲ್ಹಾರ ಸೇತುವೆ ಮೇಲಿಂದ ಜುಲೈ 1 ರಂದು ಕೃಷ್ಣಾ ನದಿಗೆ ಬಿದ್ದಿದ್ದ ಟಿಪ್ಪರನ್ನು ಶುಕ್ರವಾರ ಭಾರೀ ಸಾಮರ್ಥ್ಯದ  ಕ್ರೇನ್ ಸಹಾಯದಿಂದ ಮೇಲಕ್ಕೆತ್ತಲಾಯಿತು.ಮೂರು ದಿನಗಳ ಕಾಲ ನಿರಂತರ ಪೋಲಿಸರು ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಹಿರಿಯ ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ ಬಳಿಕ ಕೃಷ್ಣಾ ನದಿಗೆ ಬಿದ್ದಿದ್ದ ಟಿಪ್ಪರ್‌ನ್ನು ಭಾರೀ ಸಾಮರ್ಥ್ಯದ ಕ್ರೇನ್ ಸಹಾಯದಿಂದ ಮೇಲಕ್ಕೆತ್ತಲಾಯಿತು.  

ಈ ಅಪಘಾತದಲ್ಲಿ ಟಿಪ್ಪರ್ ಚಾಲಕ ಸಂತೋಷ್ ಕೋಟಿ ಮೃತಪಟ್ಟಿದ್ದು, ಅವರ ಶವ ಕೃಷ್ಣಾ ನದಿಯಲ್ಲಿ ಮುಳುಗಿದ್ದ ಟಿಪ್ಪರ್‌ನ ಒಳಭಾಗದಲ್ಲಿ ಪತ್ತೆಯಾಗಿದೆ. ಅಪಘಾತದ ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರೀಶೀಲನೆ ನಡೆಸಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡರು.ಬಳಿಕ ಕ್ರೇನ್ ನೆರವಿನಿಂದ ಟಿಪ್ಪರ್‌ನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿತು.

ಈ ಸಂದರ್ಭದಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು ಸಂಚಾರ ದಟ್ಟಣೆಯಿಂದ ಹಲವು ವಾಹನಗಳ ಚಾಲಕರು ತಮ್ಮ  ವಾಹನಗಳನ್ನು ಹಳೆಯ ಸೇತುವೆ ಮೇಲೆ  ಸಂಚಾರ ಮಾಡಿದರು ಕೃಷ್ಣಾ ನದಿಯಲ್ಲಿ ನೀರು ಸಂಪೂರ್ಣ ಕಡಿಮೆ ಆಗಿರುವುದರಿಂದ ವಾಹನಗಳಿಗೆ ಅನುಕೂಲ ಕಲ್ಪಿಸಲಾಗಿತ್ತು ಇನ್ನು ಈಘಟನೆ ಕುರಿತು ಪೊಲೀಸರು ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಘಟನೆಯ ಕುರಿತು ಸಂಬಂಧಪಟ್ಟ ಇಲಾಖೆ ಹೆಚ್ಚಿನ ತನಿಖೆಯನ್ನು ಮುಂದುವರಿಸಿದೆ.