ವಿಜಯಪುರ: 04; ಸರ್ಕಾರದ ನಿಯಮದಂತೆ ರೈತರಿಗೆ ಸಕಾಲದಲ್ಲಿ ಕಬ್ಬಿನ ಬಿಲ್ನ್ನು ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬಿನಿಂದ ಉತ್ಪಾದಿಸಲಾದ ಸಕ್ಕರೆ ಇಳುವರಿಯ ಆಧಾರದ ಮೇಲೆ 2019-20ನೇ ಸಾಲಿನ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆಯ ಕುರಿತು ಜಿಲ್ಲೆಯ ಸಕ್ಕರೆ ಕಾಖರ್ಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿದ ಅವರು, ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದ ಧ್ಯಾನಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಶುಗರ್ಸ್ ಲಿ. ಕಾಖರ್ಾನೆ 2018-19ನೇ ಸಾಲಿನ ಶೇ.9.20 ಸಕ್ಕರೆ ಇಳುವರಿ ಮಾಡಲಾಗಿದೆ.
ಅದರಂತೆ ಇಂಡಿಯನ್ ಶುಗರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಲಿ.ಹಾವಿನಾಳ ಶೇ.9.92, ಜಮಖಂಡಿ ಶುಗರ್ಸ್ ಲಿ. (ಘಟಕ-2) ನಾದ ಕೆ.ಡಿ. ಶೇ.10.46, ವಿಜಯಪುರ ತಾಲೂಕಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಕೃಷ್ಣಾ ನಗರ ಶೆ.12.43, ಸಿಂದಗಿ ತಾಲೂಕಿನ ಕೆಪಿಆರ್ ಶುಗರ್ಸ್ ಮಿಲ್ ಆಲಮೇಲ್ ಶೇ.10.40, ಮನಾಲಿ ಶುಗರ್ಸ್ ಲಿ. ಮಲಘಾಣ ಶೇ.9.3, ಬಸವನಬಾಗೇವಾಡಿ ತಾಲೂಕಿನ ಬಸವೇಶ್ವರ ಶುಗರ್ಸ್ ಲಿ.ಕಾರಜೋಳ ಶೇ.10.40, ಮುದ್ದೇಬಿಹಾಳ ತಾಲೂಕಿನ ಬಾಲಾಜಿ ಶುಗರ್ಸ್ ಮತ್ತು ಕೆಮಿಕಲ್ಸ್ ಪ್ರೈ.ಲಿ. ಯರಗಲ್ ಶೇ.10.75, ಇಂಡಿ ತಾಲೂಕಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮರಗೂರ ಶೇ.10.30, ಒಟ್ಟು ಜಿಲ್ಲೆಯ 9 ಕಾರ್ಖಾನೆಗಳ ಕಳೆದ ವರ್ಷದ ಇಳುವರಿ ಪ್ರಮಾಣ ಇದಾಗಿದೆ ಎಂದು ಹೇಳಿದರು.
2019-20 ಸಕ್ಕರೆ ಇಳುವರಿಗೆ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 2750 ರೂ. ನ್ಯಾಯ ಬೆಲೆಯನ್ನು ನಿಗದಿಪಡಿಸಿದೆ. ಶೇ.10ಕ್ಕಿಂತ ಹೆಚ್ಚು ಇಳುವರಿ ನಂತರದ 1 ರಷ್ಟು ಇಳುವರಿಗೆ ಪ್ರತಿ ಮೆಟ್ರಿಕ್ ಟನ್ಗೆ 275 ರೂ.ದಂತೆ ಹೆಚ್ಚುವರಿ ಬೆಲೆ ನಿಗದಿಪಡಿಸಿದೆ. ಶೇ.10ಕ್ಕಿಂಡ ಕಡಿಮೆ ಹಾಗೂ ಶೇ.9.5ಕ್ಕೆ ಮೇಲ್ಪಟ್ಟ ಇಳುವರಿ ಹೊಂದಿರುವ ಸಕ್ಕರೆ ಕಾರ್ಖಾನೆಗಳಿಗೆ ಶೇ.1 ರಷ್ಟು ಇಳುವರಿಗೆ ಪ್ರತಿ ಮೆಟ್ರಿಕ್ ಟನ್ಗೆ 275ರೂ. ಸರಾಸರಿಯಂತೆ ನ್ಯಾಯ8 ಮತ್ತು ಲಾಭದಾಯಕ ಬೆಲೆಯನ್ನು ಕಡಿಮೆ ಮಾಡುವುದಾಗಿದೆ. ಶೇ.9.5ಕ್ಕಿಂತ ಕಡಿಮೆ ಇಳುವರಿ ಹೊಂದಿರುವ ಕಾರ್ಖಾನೆಗಳಿಗೆ ಪ್ರತಿ ಮೆಟ್ರಿಕ್ ಟನ್ಗೆ ರೂ.2612.50 ಗಳ ನ್ಯಾಯ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸಲಾಗಿದೆ.
2019-20ನೇ ಸಾಲಿನ ರಾಜ್ಯದ ಸಕ್ಕರೆ ಕಾರ್ಖಾನೆಗಳು ಕರ್ನಾಟಕದ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) (ತಿದ್ದುಪಡಿ) ಅಧಿನಿಯಮ 2014ರ ಕಲಂ 9(1)ರ ಪ್ರಕಾರ ಮೊದಲ ಕಂತಿನ ರೂಪದಲ್ಲಿ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದ ಧ್ಯಾನಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಶುಗರ್ಸ್ ಲಿ. ಕಾಖರ್ಾನೆ 2613 ರೂ. ಪಾವತಿಸಬೇಕು.
ಅದರಂತೆ ಇಂಡಿಯನ್ ಶುಗರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಲಿ.ಹಾವಿನಾಳ 2728 ರೂ.,
ಜಮಖಂಡಿ ಶುಗರ್ಸ್ ಲಿ. (ಘಟಕ-2) ನಾದ ಕೆ.ಡಿ. 2877 ರೂ., ವಿಜಯಪುರ ತಾಲೂಕಿನ ನಂದಿ ಸಹಕಾರಿ ಸಕ್ಕರೆ ಕಾಖರ್ಾನೆ ನಿ. ಕೃಷ್ಣಾ ನಗರ 3418 ರೂ., ಸಿಂದಗಿ ತಾಲೂಕಿನ ಕೆಪಿಆರ್ ಶುಗರ್ಸ್ ಮಿಲ್ ಆಲಮೇಲ್ 2860 ರೂ., ಮನಾಲಿ ಶುಗರ್ಸ್ ಲಿ. ಮಲಘಾಣ 2613 ರೂ., ಬಸವನಬಾಗೇವಾಡಿ ತಾಲೂಕಿನ ಬಸವೇಶ್ವರ ಶುಗರ್ಸ್ ಲಿ.ಕಾರಜೋಳ 2860 ರೂ., ಮುದ್ದೇಬಿಹಾಳ ತಾಲೂಕಿನ ಬಾಲಾಜಿ ಶುಗರ್ಸ್ ಮತ್ತು ಕೆಮಿಕಲ್ಸ್ ಪ್ರೈ.ಲಿ. ಯರಗಲ್ 2956 ರೂ. ಹಾಗೂ ಇಂಡಿ ತಾಲೂಕಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾಖರ್ಾನೆ ಮರಗೂರ 2833 ರೂ. ಪಾವತಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀಮತಿ ಸುರೇಖಾ, ಸಹಾಯಕ ನಿರ್ದೇಶಕ ಕೆ.ಆರ್. ಕುಂಬಾರ, ಉಪತಹಶೀಲ್ದಾರ ಅಮರೇಶ ತಾಂಡೂರ ಸೇರಿದಂತೆ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕರು-ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.