ಬಸವಣ್ಣನವರ ಸಮ ಸಮಾಜ ನಿರ್ಮಾಣದ ಪರಿಕಲ್ಪನೆ ಈ ಸಮೀಕ್ಷಾ ಕಾರ್ಯವಾಗಿದೆ: ಪ್ರಕಾಶ್ ಕೋಳಿವಾಡ
This survey work is Basavanna's concept of building an equal society: Prakash Koliwad
ರಾಣೇಬೆನ್ನೂರು 22 : ರಾಜ್ಯದ ಮುಖ್ಯಮಂತ್ರಿಗಳು ತಮ್ಮ ದೂರ ದೃಷ್ಟಿಯಿಂದಾಗಿ, 12ನೇ ಶತಮಾನದ ಬಸವಾದಿ ಶರಣರ ಸಮ ಸಮಾಜ ನಿರ್ಮಾಣದ ಚಿಂತನೆಯ ಹಿನ್ನೆಲೆಯಲ್ಲಿ ಇದೀಗ ಪ್ರತಿಯೊಬ್ಬರು ಸಮಾನತೆಯ ಜೀವನ ಸಾಗಿಸಬೇಕು ಎನ್ನುವ ಪರಿಕಲ್ಪನೆಯಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷಾ ಕಾರ್ಯವು ರೂಪಿಸಿದ್ದಾರೆ. ಮನೆ ಬಾಗಿಲಿಗೆ ಬಂದಾಗ ಯಾವುದೇ ಸಂಕೋಚಿತ ಮನೋಭಾವನೆ ತೋರದೆ ಇದ್ದದ್ದು ಇದ್ದ ಹಾಗೆ ದಾಖಲಿಸಲು ಮುಂದಾಗಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
ಅವರು, ಸೋಮವಾರ ನಗರದ ಕುರುಬಗೇರಿ ಕನಕದಾಸ ನಗರದ, ಕುರುಬ ಸಮಾಜದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ ಅವರ ಗ್ರಹ ಸಭಾದಲ್ಲಿ ಇಂದಿನಿಂದ ಆರಂಭಗೊಂಡ ಸಮೀಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗಣತಿ ಕಾರ್ಯವು ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವುದು ಸಹಜ ಪ್ರಕ್ರಿಯೆ. ಈ ಬಾರಿ ನಡೆಯುತ್ತಿರುವುದು ವಿಶೇಷತೆಯಿಂದ ಕೂಡಿದೆ.
ಇಲ್ಲಿ ರಾಜ್ಯದಲ್ಲಿರುವ ಜನರ ವಾಸ್ತವಿಕ ಸ್ಥಿತಿಯ ಪರೀಶೀಲನೆ ಮಾಡಿ, ಅದರ ಆಧಾರದಲ್ಲಿ ಭವಿಷ್ಯದಲ್ಲಿ ಮಂಡಿಸಲಿರುವ 16ನೇ ಬಜೆಟ್ ನಲ್ಲಿ ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಪಡೆಯಲು ಸಮೀಕ್ಷೆ ಅತ್ಯಂತ ಸಹಕಾರಿಯಾಗಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ ಅವರು, ನಗರ ಮತ್ತು ತಾಲೂಕಿನಲ್ಲಿ ಏಕಕಾಲಕ್ಕೆ ಇಂದಿನಿಂದ ಆರಂಭಗೊಂಡಿರುವ ಸಮೀಕ್ಷಾ ಕಾರ್ಯವು ನಿರಂತರ ನಡೆಯಲಿದೆ. ಸಮೀಕ್ಷೆಯ ಪರಿಪೂರ್ಣತೆಗಾಗಿ, 807 ಗಣತಿ ದಾರರು ಮತ್ತು 44 ಮೇಲ್ವಿಚಾರಕರನ್ನು ನೇಮಿಸಲಾಗಿದೆ
ಗಣಿತಿದಾರರು ಬಂದಾಗ, ಯಾವುದೇ ಶಬೂಬ ನೀಡದೆ, ವಿಳಂಬ ಧೋರಣೆ ಅನುಸರಿಸದೇ ಮನೆಯ ಮುಖ್ಯಸ್ಥರು ಅಥವಾ ಮನೆಯಲ್ಲಿರುವವರು 60 ಪ್ರಶ್ನೆಗಳಿಗೆ ಉತ್ತರಿಸಿ, ಸಹಕರಿಸಬೇಕು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಮತಿ ಗಾಯಿತ್ರಿ, ತಹಸೀಲ್ದಾರ್ ಆರ್.ಎಚ್. ಭಗವಾನ್, ಕೃಷ್ಣಪ್ಪ ಕಂಬಳಿ, ಷಣ್ಮುಖಪ್ಪ ಕಂಬಳಿ, ಮೃತ್ಯುಂಜಯ ಗುದಗೇರ, ಆನಂದ್ ಹುಲಬನ್ನಿ, ಮಾಳಪ್ಪ ಪೂಜಾರ, ಮಂಜು ನಾಯಕ್, ಅಶೋಕ ಕೆಂಚರೆಡ್ಡಿ, ಮಹೇಶ್ ಕಂಬಳಿ, ಇರ್ಫಾನ್ ಡಿಡಗೂರ. ನಾಗರಾಜ ಮರಿಯಮ್ಮನವರ, ಸೇರಿದಂತೆ ಇಲಾಖಾ ಸಿಬ್ಬಂದಿ, ಮೇಲ್ವಿಚಾರಕರು ಹಾಗೂ ಗಣತಿದಾರರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 