ರೈಲ್ವೆ ಇಲಾಖೆಯಿಂದ ಇದೇ ಮೊದಲ ಬಾರಿಗೆ 'ಪ್ರೊಮೋಷನ್ ಆನ್ ವ್ಹೀಲ್ಸ್' ಕಾರ್ಯಕ್ರಮ
ನವದೆಹಲಿ, ಅ 10: ಕಲೆ, ಸಂಸ್ಕೃತಿ, ಸಿನೆಮಾ, ಕ್ರೀಡೆ ಮತ್ತಿತರರ ಕ್ಷೇತ್ರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ರೈಲ್ವೆ ಇಲಾಖೆ ಹೊಸ ಯೋಜನೆಯನ್ನು ಹೊರತಂದಿದೆ.
ಈ ಎಲ್ಲಾ ಕ್ಷೇತ್ರಗಳ ಕೊಡುಗೆಗಳಿಗೆ 'ಚಕ್ರಗಳ ಮೇಲೆ ಪ್ರಚಾರ' ('ಪ್ರೊಮೋಷನ್ ಆನ್ ವ್ಹೀಲ್ಸ್') ರೈಲುಗಳ ಮೂಲಕ ಪ್ರಚಾರ ನೀಡಲು ಇಲಾಖೆ ಮುಂದಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ರೈಲ್ವೆ ಇಲಾಖೆ, ಈ ಯೋಜನೆಯ ಆರಂಭಿಕ ಹಂತವಾಗಿ ಬಾಲಿವುಡ್ ಸಿನೆಮಾ 'ಹೌಸ್ ಫುಲ್ 4' ಚಿತ್ರಕ್ಕೆ ಪ್ರಚಾರ ನೀಡಲಾಗುವುದು. 'ಪ್ರೊಮೋಷನ್ ಆನ್ ವ್ಹೀಲ್ಸ್' ವಿಶೇಷ ರೈಲಿನಲ್ಲಿ ಚಿತ್ರದ ಕಲಾವಿದರು ಹಾಗೂ ಮಾಧ್ಯಮ ಪ್ರತಿನಿಧಿಗಳು ಪ್ರಯಾಣಿಸಲಿದ್ದಾರೆ. ಇದು ರೈಲ್ವೆ ಇಲಾಖೆಗೆ ಕೂಡ ಆದಾಯ ತಂದುಕೊಡಲಿದೆ ಎಂದು ಮಾಹಿತಿ ನೀಡಿದೆ.
ಭಾರತೀಯ ರೈಲ್ವೆ ಮತ್ತು ಪಶ್ಚಿಮ ರೈಲ್ವೆ ಇಲಾಖೆಗಳು ಹೌಸ್ ಫುಲ್ 4 ಚಿತ್ರ ತಂಡದೊಂದಿಗೆ ಈ ಪ್ರಚಾರ ಕಾರ್ಯ ಕೈಗೆತ್ತಿಕೊಳ್ಳಲಿದ್ದಾರೆ. ಸೆಲೆಬ್ರಿಟಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಬುಧವಾರ ಮುಂಬೈ ಸೆಂಟ್ರಲ್ ನಿಂದ 8 ಬೋಗಿಯ ವಿಶೇಷ ರೈಲಿನಲ್ಲಿ ಪ್ರಯಾಣಿಸಲಿದ್ದು, ಅ. 17ರಂದು ಹಿಂದಿರುಗಲಿದ್ದಾರೆ.
ಪಶ್ಚಿಮ ರೈಲ್ವೆ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿ ರವೀಂದ್ರ ಭಾಕರ್, ಈ ವಿಶೇಷ ರೈಲುಗಳು ಹಲವು ರಾಜ್ಯಗಳು ಹಾಗೂ ಸೂರತ್, ವಡೋದರ ಹಾಗೂ ಕೋಟಾದಂತಹ ಪ್ರಮುಖ ಜಿಲ್ಲೆಗಳಲ್ಲಿ ಸಾಗಲಿದೆ. ಮಾರ್ಗಮಧ್ಯದ ರೈಲ್ವೆ ನಿಲ್ದಾಣಗಳಲ್ಲಿ ಕಲಾವಿದರು ಚಿತ್ರದ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 