ಸರಕಾರಿ ಅವೈಜ್ಞಾನಿಕ ಆಲೋಚನೆಗಳಿಂದ ಉಳುವ ಭೂಮಿಯೇ ಇಲ್ಲದಂತಾಗಿದೆ : ವಾಲಿಕಾರ

ಸರಕಾರಿ ಅವೈಜ್ಞಾನಿಕ ಆಲೋಚನೆಗಳಿಂದ ಉಳುವ ಭೂಮಿಯೇ ಇಲ್ಲದಂತಾಗಿದೆ : ವಾಲಿಕಾರ  There is no land left to cultivate due to the government's unscientific thinking: Valikara

           ಕೊಪ್ಪಳ   31: : ಭಾರತೀಯ ಕಿಸಾನ್ ಸಭಾ ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿ ಜಗದೀಶ ಸಂಕನಗೌಡ್ರ 62ನೇ ದಿನದ ಧರಣಿ ಸತ್ಯಾಗ್ರಹ ಬೆಂಬಲಿಸಿ ಇಲ್ಲಿನ ಬಲ್ಡೋಟ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸ್‌ ಇಂಡಿಯಾ ಸೇರಿ ಇತರೆ ಎಲ್ಲಾ ಕಾರ್ಖಾನೆಗಳು ಇಲ್ಲಿ ತಳ ಊರಿ ಹಳ್ಳಿ ಮತ್ತು ನಗರ ಜನರ ಆರೋಗ್ಯ ಕೆಡಿಸಿವೆ. 20ಕ್ಕೂ ಹೆಚ್ಚು ಹಳ್ಳಿಗಳು, ನಗರದ ಅರ್ಧ ಭಾಗ ಈ ಮಾಲಿನ್ಯಕಾರಕ ಕಾರ್ಖಾನೆಗಳಿಂದ ಆರೋಗ್ಯ, ಜೀವಿಸುವ ಹಕ್ಕು ಕಳೆದುಕೊಂಡು ಸಂತ್ರಸ್ತರಾಗುತ್ತಿದ್ದಾರೆ ಎಂದರು. 

ನಗರಸಭೆ ಮುಂದುಗಡೆ ಕಳೆದ 62 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕಾಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ಧಿಷ್ಟ ಧರಣಿಯಲ್ಲಿ ಮಾತನಾಡಿ, ಕಾರ್ಖಾನೆ ಎಂದೊಡನೆ ಇಲ್ಲಿ ಅಭಿವೃದ್ಧಿ ಮತ್ತು ಉದ್ಯೋಗ ಕುರಿತು ಮಾತನಾಡುವುದು ಅಸಹ್ಯವಾಗಿದೆ. ಇಷ್ಟು ದೊಡ್ಡ ಮೊತ್ತ ಕಣ್ಣಿಗೆ ಕಂಡರೂ ಅದು ತಂದೊಡ್ಡಿದ ಆರೋಗ್ಯ, ಜೀವ ಹಾನಿಯ ಆತಂಕದಂತಹ ಅಭಿವೃದ್ಧಿ ನಮಗೆ ಬೇಕಿಲ್ಲ, ಇಲ್ಲಿ ಐಟಿ ಹಬ್ ಮಾಡುವದಾದರೆ ನಮಗೇನು ಅಭ್ಯಂತರವಿಲ್ಲ, ಸರಕಾರ ಕೂಡಲೇ ಅಂತಹ ಕೆಲಸ ಮಾಡಲಿ ಎಂದರು. 

ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಮಾತನಾಡಿ ಕೃಷಿ ಭೂಮಿ ಈ ಕಾರ್ಖಾನೆಗಳ ದಾಹದಿಂದ ಕಡಿಮೆಯಾಗುತ್ತಿದೆ. ಹೀಗೆ ಭೂಮಿ, ಕೃಷಿ ಒತ್ತಡಕ್ಕೆ ಸಿಲುಕಿದರೆ ದೇಶಕ್ಕೆ ಅನ್ನದ ಕೊರತೆಯಾಗುತ್ತದೆ ಎಂದು ಈ ಆಳುವವರಿಗೆ ತಿಳಿಯುವದಿಲ್ಲವೆ? ಇಷ್ಟೊಂದು ಆರೋಗ್ಯ, ಜೀವ ಹಾನಿ ಮಾಡಿದರೂ ಇಲ್ಲಿನ ರಾಜಕಾರಣಿಗಳು ತಮಗೇನೂ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಾರೆಂದರೆ ಮುಂದೆ ಬರುವ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠವನ್ನು ಕೇವಲ 20 ಸಾವಿರ ಜನರು ಮಾಡಿದರೂ ಸಹ ಪಾಠ ಕಲಿಯುತ್ತಾರೆ. ನಮಗೆ ಸ್ಪಂದಿಸದಿದ್ದರೆ ರೈತ ಚಳವಳಿ ಕಟ್ಟಿ ಮತಾಧಿಕಾರದ ಅಸ್ತ್ರ ಇಲ್ಲಿ ಬಳಸಬೇಕಾಗುತ್ತದೆ ಎಂದರು. 

ಕಲ್ಯಾಣನಗರ ನಿವಾಸಿ ಯಮನೂರ​‍್ಪ ವಾಲಿಕಾರ ಅವರು ಈ ನಾಡಿನ ನೆಲ, ಜಲ, ಜೀವ ಕಾಪಾಡದೆ ತಮ್ಮ ಸ್ವಾರ್ಥದ ಏಕೈಕ ಅಭಿವೃದ್ಧಿ ಎಲ್ಲರ ಅಭಿವೃದ್ಧಿ ಎಂದು ಬಿಂಬಿಸುತ್ತಾರೆ. ದೈತ್ಯ ಕಾರ್ಖಾನೆಗಳು ಬಂದು ಜನರ ಬದುಕು ಕಸಿದುಕೊಂಡಾಗಲೂ ಎಚ್ಚರಗೊಂಡು ಜನರ ಸಂಕಷ್ಟಕ್ಕೆ ಧಾವಿಸಿ ಬರದ ರಾಜಕಾರಣಿಗಳು ಇದ್ದರೆಷ್ಟು ಬಿಟ್ಟರೆಷ್ಟು. ರೈತನು ಅನ್ನ ಬೆಳೆದು ನಮ್ಮನ್ನು ಸಲುಹುತ್ತಾನೆ. ಆತನೇ ಈ ಕಾರ್ಖಾನೆಗಳಿಂದ ಸಂಕಷ್ಟಕ್ಕೆ ಸಿಲುಕಿದರೆ ಜಗತ್ತು ಬಿಕ್ಕುವುದು, ಸರಕಾರದ ಅವೈಜ್ಞಾನಿಕ ಆಲೋಚನೆಗಳಿಂದಲೇ ಭೂಮಿ ಬರಡಾಗುತ್ತಿದೆ ಎಂದರು 

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಹಿರಿಯ ಸಾಹಿತಿ ಎ.ಎಂ.ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ.ಗೊಂಡಬಾಳ, ನೈಸರ್ಗಿಕ ಕೃಷಿಕರಾದ ಹನುಮಂತಪ್ಪ ಗೊಂದಿ, ಬಿಕೆಎಸ್ ಸಂಘಟನೆ ಪ್ರಾಂತ ಅಧ್ಯಕ್ಷ ವಿವೇಕ ಮೋರೆ, ಕೊಪ್ಪಳ ಬಿಕೆಎಸ್ ಸಂಘಟನೆ ಉಪಾಧ್ಯಕ್ಷ ವಿಜಯಕುಮಾರ ನಾಯ್ಕ, ಧಾರವಾಡ ಜಿಲ್ಲಾ ಬಿಕೆಎಸ್ ಸಂಘಟನೆ ಅಧ್ಯಕ್ಷ ಗುರುನಾಥಗೌಡ ಬಸನಗೌಡ್ರ, ಸದಸ್ಯರಾದ ಬಸಯ್ಯ ನಂದಿಕೋಲು, ವೀರಭದ್ರ​‍್ಪ ಅರಕೇರಿ, ವಿರುಪಣ್ಣ ಯಲಬುರ್ತಿ, ಬಸಣ್ಣ ಯಲಬುರ್ತಿ, ಸುರೇಶ್ ಪಾಟೀಲ್, ಪುಷ್ಪಲತಾ ಏಳುಭಾವಿ, ಈರಮ್ಮ ಉಂಡಿ, ಬಿ.ಜಿ.ಕರಿಗಾರ, ದೊಡ್ಡಯ್ಯ ಈ.ಪಿ, ಉಮೇಶಪ್ಪ ಕರಮುಡಿ, ನಾಗರಾಜ ಹಿರೇಮಠ, ಭರಮಣ್ಣ ವಟಪರ್ವಿ, ರವಿ ಕಾಂತನವರ, ಶಾಂತಯ್ಯ ಅಂಗಡಿ, ಡಿ.ಎಂ.ಬಡಿಗೇರ, ಮಲ್ಲಿಕಾರ್ಜುನಗೌಡ ಪಾಟೀಲ್ ಪಾಲ್ಗೊಂಡರು.