ಮರ ಗಿಡಗಳನ್ನು ಬೆಳೆಸುವಲ್ಲಿ ಯುವ ಜನಾಂಗ ಮುಂದಾಗಬೇಕು : ಶುಂಠಿ

ದೇವಸ್ಥಾನದ ಆವರಣದಲ್ಲಿ ನಡೆದ ಗ್ರಾಮಸಭೆ

ಮರ ಗಿಡಗಳನ್ನು ಬೆಳೆಸುವಲ್ಲಿ ಯುವ ಜನಾಂಗ ಮುಂದಾಗಬೇಕು : ಶುಂಠಿ  

ರಾಣಿಬೆನ್ನೂರ 28: ಸಾರ್ವಜನಿಕರು ಪರಿಸರ ರಕ್ಷಣೆ ಮಾಡುವಲ್ಲಿ ಜಾಗರೂಕತೆಯಿಂದ ಜೀವನ ನಡೆಸಬೇಕು, ಬೆಲೆ ಬಾಳುವ ತ್ಯಾಗ, ಬೀಟಿ, ಗಂಧದ ಮರಗಳನ್ನು ಕಡೆಯುವದನ್ನು ನಿಷೇಧಿಸಲಾಗಿದೆ. ಮರ ಗಿಡಗಳನ್ನು ಬೆಳೆಸುವಲ್ಲಿ ಯುವ ಜನಾಂಗ ಮುಂದಾಗಬೇಕು ಎಂದು ವಲಯ ಅರಣ್ಯಾಧಿಕಾರಿ ಅಫ್ರೀನಾ ಶುಂಠಿ ಹೇಳಿದರು.    ತಾಲೂಕಿನ ಮುದೇನೂರ ಗ್ರಾಮದ ಮೂಡಣ ಮಾರುತಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಅಂಗವಾಗಿ ವಿಷೇಶ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಗೃಹ ನಿರ್ಮಾಣ ಮತ್ತು ಇತರೆ ಚಟುವಟಿಕೆಗಳನ್ನು ಕೈಗೊಳ್ಳಲು ಪರಿಸರದಲ್ಲಿರುವ ಮರಗಿಡಗಳನ್ನು ಕಡಿದು ಉಪಯೋಗಿಸುತ್ತೇವೆ ಅವುಗಳ ರಕ್ಷಣೆ ಮತ್ತು ಬೆಳವಣಿಗೆಯ ವಿಚಾರದಲ್ಲಿ ಯಾರೂ ಸಹ ಆಶಕ್ತಿ ತೋರುವುದಿಲ್ಲ. ಯುವಕರು ಹಾಗೂ ಹಿರಿಯರು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು.    ಜಿಲ್ಲಾ ಪರಿಶಿಷ್ಟ ಪಂಗಡದ ನಿರ್ದೇಶನಾಲಯ ತನಿಖಾ ಸಹಾಯಕ ಪೀರಸಾಬ ನದಾಫ್ ಮಾತನಾಡಿ, ಪಂಚಾಯತಿ ವ್ಯಾಪ್ತಿಯ ನಾಗೇನಹಳ್ಳಿ ಗ್ರಾಮವನ್ನು ಕೇಂದ್ರ ಪರಿಶಿಷ್ಟ ವರ್ಗದ ಆಯೋಗದ ವ್ಯಾಪ್ತಿಗೆ ನಾಗೇನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು ಶೇ 85 ರಷ್ಟು ಪರಿಶಿಷ್ಟ ಪಂಗಡದ ಜನರು ವಾಸಿಸುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಈ ಗ್ರಾಮಕ್ಕೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೂಲಭೂತ ಅಭಿವೃಧ್ದಿ ಕಾಮಗಾರಿಗಳು ನಡೆಯಲಿವೆ ಎಂದು ಹೇಳಿದರು. 

   ಪಿಡಿಓ ಪ್ರಕಾಶ ಎಂ ಕೆ ಅವರು, 2025-26 ನೇ ಸಾಲಿನ ಎಂಜಿಎನ್‌ಆರ್‌ಇಜಿ ಎ ಕ್ರಿಯಾ ಯೋಜನೆ ಬಗ್ಗೆ ಚರ್ಚಿಸಿ ಒಪ್ಪಿಗೆ ಪಡೆದರು. ಗ್ರಾ.ಪಂ ಆಧ್ಯಕ್ಷೆ ರೇಖಾ ಪುಟ್ಟಕ್ಕನವರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಂದ್ರಮ್ಮ ಹಿರೇಮರದ, ಸದಸ್ಯರಾದ ರಾಜಶೇಖರಗೌಡ ಗಂಗನಗೌಡ್ರ, ಮಂಜುಳಾ ಪಾಟೀಲ, ಇಂದಿರಾ ಗೋವಿಂದಗೌಡ್ರ, ಸಾವಯವ ಕೃಷಿಕರಾದ ಸುನಿತಾ ಗಂಗನಗೌಡ್ರ, ನಿವೃತ್ತ ಉಪನ್ಯಾಸಕ ಎಸ್‌ಜಿ ಚಂದ್ರೇಗೌಡ, ಅರಣ್ಯ ಇಲಾಖೆಯ ಸುರೇಶ ಅಂಗಡಿ ಬಿಸಿಎಮ್ ಇಲಾಖೆಯ ಚಂದ್ರಶೇಖರ ಪುರದ, ಆರೋಗ್ಯ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಂಥಾಲಯ ಮೇಲ್ವಿಚಾರಕರು, ಸ್ವಸಹಾಯಕ ಸಂಘದ ಮಹಿಳೆಯರು ಮತ್ತು ಗ್ರಾಸ್ಥರು ಇದ್ದರು. 

 ಫೋಟೊ:27ಆರ್‌ಎನ್‌ಆರ್06ರಾಣಿಬೆನ್ನೂರ: ತಾಲೂಕಿನ ಮುದೇನೂರ ಗ್ರಾಮದ ಮೂಡಣ ಮಾರುತಿ ದೇವಸ್ಥಾನದ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ವಲಯ ಅರಣ್ಯಾಧಿಕಾರಿ ಅಫ್ರೀನಾ ಶುಂಠಿ ಮಾತನಾಡಿದರು.