ಜಗತ್ತಿಗೆ ಮೊಟ್ಟಮೊದಲ ಗುರು ಕಾಶೀ ಡಾ ಚಂದ್ರಶೇಖರ ಶಿವಾಚಾರ್ಯರು
The world's first guru was Dr. Chandrashekar Shivacharya of Kashi
ಶಿಗ್ಗಾವಿ 02 : ಜಗತ್ತಿಗೆ ಮೊಟ್ಟಮೊದಲ ಗುರು ಶ್ರೀಮತ್ ಕಾಶೀ ಡಾ ಚಂದ್ರಶೇಖರ ಶಿವಾಚಾರ್ಯ ಮಹಾಭಗತ್ಪಾದರು ಎಂದು ಗುಳೇದಗುಡ್ಡದ ಡಾ ನೀಲಕಂಠ ಶಿವಾಚಾರ್ಯ ಹೇಳಿದರು. ತಾಲೂಕಿನ ಬಿಸನಳ್ಳಿ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜೋತಿಷ್ಯ ಪಾಠಶಾಲೆಯಲ್ಲಿ ನಡೆದ ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಅವರು ಈ ತಂತ್ರಜ್ಞಾನ ಯುಗದಲ್ಲಿ ಜ್ಞಾನವಂತರಾಗಬೇಕು ಮೊದಲಿಗೆ ನಿಮ್ಮ ಧರ್ಮದ ಬಗ್ಗೆ ಜ್ಞಾನವಿರಬೇಕು ಅಂದರೆ ತಂದೆತಾಯಿಗಳು, ಗುರುಗಳು ಸಂಸ್ಕಾರವಿದ್ದರೆ ಮಕ್ಕಳು ಸಂಸ್ಕಾರಸ್ಥರು ಆಗುತ್ತಾರೆ ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಧನ ಸಹಾಯವನ್ನು ಮಾಡಬೇಕು ಎಂದರು.
ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಮಾತನಾಡಿ ನಿರಂತರವಾಗಿ ಮಾನವ ಧರ್ಮಸಭೆ, ಸಮಾವೇಶದ ಮೂಲಕ ಧರ್ಮ ಜಗೃತಿ ಮಾಡುವುದು, ಶಿಗ್ಗಾವಿ ಕ್ಷೇತ್ರವು ಶರಣರು, ಸಂತರು, ಸೂಫಿ ನಡೆದ ಪುಣ್ಯದ ನೆಲ ಇಲ್ಲಿಯ ಮಣ್ಣು ವಿಭೂತಿಗೆ ಸಮ, ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡೋಣ, ನಮ್ಮ ಕೆಲಸಗಳು ಮಾತಾಡಬೇಕು ನಾವು ಮಾತನಾಡಬಾರದು ಅಲ್ಲದೇ ಕತ್ತಲಲ್ಲದಿದ್ದವರಿಗೆ ಬೆಳಕನ್ನು ಕೊಡುವುದೇ ನಮ್ಮ ಧಾನ ಧರ್ಮದಲ್ಲಿ ದೊಡ್ಡ ಶಕ್ತಿ ಇದೆ ಅತಿ ಶ್ರೇಷ್ಠವಾದವರು ಯಾರು ನಿರ್ಗತಿಕರಿಗೆ ಸಹಾಯ ಮಾಡುತ್ತಾರೆ ಅವರೇ ಶ್ರೇಷ್ಠರು ಎಂದರು. ಭಾಜಪ ಮುಖಂಡ ಭರತ ಬೊಮ್ಮಾಯಿ ಮಾತನಾಡಿ 1947 ನಂತರ ರಾಜಕಾರಣಿಗಳು ಮತಬ್ಯಾಂಕಗಾಗಿ ಧರ್ಮವನ್ನು ವಿಭಾಗವಾಗಿ ಮಾಡಿದರು, ಮನುಷ್ಯನಿಗಿಂತ ಮನುಷತ್ವ ದೊಡ್ಡದು, ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ,
ಈಗ ಕಲಿಯುಗದ ಕಾಲ, ಯಾರ ಹತ್ತಿರ ಜ್ಞಾನವಿದೆ ಅವರು ಜಗತ್ತನ್ನು ಆಳುತ್ತಾರೆ ಮಾನವ ಧರ್ಮಕ್ಕೆ ಜಯವಾಗಲಿ ಎಂದರು.ಈ ಸಂದರ್ಭದಲ್ಲಿ ಕಾಶೀ ಡಾ ಚಂದ್ರಶೇಖರ ಶಿವಾಚಾರ್ಯ ಮಹಾಭಗತ್ಪಾದರು, ಬಂಕಾಪೂರ ಅರಳೆಲೆ ಹಿರೇಮಠ ರೇವಣಸಿದ್ದೇಶ್ವರ ಶಿವಾಚಾರ್ಯರು , ಗೌರಿಮಠ ಕರ್ಜಗಿ ಶಿವಯೋಗಿ ಶಿವಾಚಾರ್ಯರು, ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯ ಆಕ್ಕಿಆಲೂರ, ಅಮೋಘ ಸಾಂಭಯ್ಯ ಹಿರೇಮಠ, ವಿರೇಶ ಆಜೂರ, ಶಂಭುಲಿಂಗಪ್ಪ ಆಜೂರ, ಚನ್ನಬಸಯ್ಯ ಪೂಜಾರ, ಸೋಮು ಆಜೂರ, ಬಸಪ್ಪ ಕೌಜಲಗಿ, ಡಾ. ರಾಮನಗೌಡ್ರ ಪಾಟೀಲ, ಬಲಕಂಪೇಟೆ ಶೇಖರ್ಪ, ಸಂಗಮೇಶ ಶಾಸ್ತ್ರೀ, ಮುರುಗೇಶ ಆಜೂರ, ಶಿಕ್ಷಕಿ ಗಂಗೂಬಾಯಿ ದೇಸಾಯಿ, ಕು ಪ್ರಿಯಾಂಕ ಮಾಮ್ಲೇಪಟ್ಟಣ ಶೆಟ್ಟರ ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 