ಯಡೂರ ಗ್ರಾಮದಲ್ಲಿ ಇಂದು ಮುಂಜಾನೆ ನಡೆದ ಮಹಿಳೆಯರ ಬೆಳ್ಳಿ ರಥೋತ್ಸವಕ್ಕೆ ಚಾಲನೆ

ಯಡೂರ ಗ್ರಾಮದಲ್ಲಿ ಇಂದು ಮುಂಜಾನೆ ನಡೆದ ಮಹಿಳೆಯರ ಬೆಳ್ಳಿ ರಥೋತ್ಸವಕ್ಕೆ ಚಾಲನೆ The women's silver chariot festival, which was held in Yadoor village this morning, kicked off


 ಮಾಂಜರಿ 04:  ಸಮಾಜ ವ್ಯವಸ್ಥೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ರಥೋತ್ಸವಗಳು ನಡೆಯುತ್ತವೆ ಎಂದು ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾದೀಶ್ವರ 108 ನೂತನ ಜಗದ್ಗುರು ಡಾ ಮಲ್ಲಿಕಾರ್ಜುನ್ ವಿಶ್ವರಾಧ್ಯ ಶಿವಾಚಾರ್ಯ ಕಾಶೀಪೀಠ  ಶಿವಾಚಾರ್ಯರು ತಿಳಿಸಿದರು.   ಚಿಕ್ಕೋಡಿ ತಾಲೂಕಿನ ಶ್ರೀ ಕ್ಷೇತ್ರ ಯಡೂರು ಗ್ರಾಮದಲ್ಲಿ ಶ್ರೀ ವೀರಭದ್ರ ದೇವಸ್ಥಾನ ಶ್ರೀ ಕಾಡದೇವರ ಮಠ ಇವರ ಸಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಮಹಾ ಕುಂಭಾಭಿಷೇಕ ರಾಜಗೋಪುರ ಲೋಕಾರೆ​‍್ಣ ಲಕ್ಷ ದೀಪೋತ್ಸವ ಹಾಗೂ ಭವ್ಯಕೃಷ್ಣಾರ್ತಿ ಕಾರ್ಯಕ್ರಮದ ಅಂಗವಾಗಿ ಇಂದು ನಡೆದ ಮಹಿಳೆಯರಿಂದ ಬೆಳ್ಳಿ ರಥೋತ್ಸವ ಹಾಗೂ ಉಗುಳೋತ್ಸವ ಕಾರ್ಯಕ್ರಮದ ಮಹಾ ಸರ್ವಧರ್ಮ ಸಮನ್ವಯ ರಥೋತ್ಸವದ ಜೀವನ ದರ್ಶನ ಪ್ರವಚನ ಮಂಗಲೋತ್ಸವದ  

ದಿವ್ಯ ಸಾನಿಧ್ಯ ವಹಿಸಿ ಮತ್ತು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಶ್ರೀಶೈಲ್ ಪೀಠದ ಜಗದ್ಗುರುಗಳಾದ ಡಾ. ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ವಹಿಸಿದ್ದರು   ಮಹಿಳೆಯರ ಬೆಳ್ಳಿ ರಥೋತ್ಸವ ಹಾಗೂ ಗುಗ್ಗೋಳೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ನೀಲಾಂಬಿಕ ಪ್ರಕಾಶ್ ಹುಕ್ಕೇರಿ ಇವರ ಹಸ್ತದಿಂದ ಮಾಡಲಾಯಿತು   

 ಈ ವೇಳೆ ದಿವ್ಯ ಸಾನಿಧ್ಯ ವಹಿಸಿದ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳ ಮಾತನಾಡಿ ಎಲ್ಲ ಸಮಾಜಗಳು ಒಗ್ಗೂಡಿ ತೇರನ್ನು ಎಳೆಯುತ್ತವೆ. ಅದರಲ್ಲೂ ಇತಿಹಾಸ ಕಾಲಿನ ಸೂಪ್ರಸಿದ್ಧವಾದ ವೀರಭದ್ರ ದೇವರ ಮತ್ತು ಕಾಡ ಸಿದ್ದೇಶ್ವರ ಸಂಸ್ಥಾನ  ಮಠದ ಸರ್ವಧರ್ಮ ಸಮನ್ವಯ ಮಹಾರಥೋತ್ಸವವು ಸರ್ವಧರ್ಮಗಳನ್ನು ಒಳಗೊಂಡಿದೆ. ಸರ್ವ ಸಮಾಜದವರ ಉತ್ಸವ ಇದಾಗಿದೆ. ಮನುಷ್ಯ ಜನ್ಮ ಅಪರೂಪ ವಾದದ್ದು. ಜನ್ಮ ಜನ್ಮಗಳ ಪುಣ್ಯದ ಫಲವಾಗಿ ಲಭಿಸಿದ ಈ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು.

ಕುಟುಂಬ ವ್ಯವಸ್ಥೆಯು ಸಾಕಷ್ಟುಬದಲಾವಣೆಗಳನ್ನು ಕಂಡಿದೆ. ಕುಟುಂಬಗಳಲ್ಲಿ ಒಗ್ಗಟ್ಟಿಲ್ಲ. ಇಂದು ಭಾರತೀಯ ಸಂಸ್ಕೃತಿಯ ತಹಳದಿಯಾದ ಕುಟುಂಬ ವ್ಯವಸ್ಥೆ ಸಂಕುಚಿತಗೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ವ್ಯವಸ್ಥೆ ಕ್ಷೀಣಿಸುತ್ತಿದೆ. ಕೂಡು ಕುಟುಂಬದ ಕಲ್ಪನೆ ಬಲಗೊಳ್ಳಬೇಕಿದೆ ಎಂದರು. ಕುಟುಂಬ ಈ ಹಿಂದೆ ಕೂಡು ಕುಟುಂಬಗಳಿದ್ದವು. ಆ ಕುಟುಂಬಗಳಲ್ಲಿ ಬೆಸುಗೆ ಇರುತ್ತಿತ್ತು. ಇಂದುಕುಟುಂಬ ಎಂದರೆ ಗಂಡ-ಹೆಂಡತಿ ಎಂಬುದಷ್ಟೇ ಸೀಮಿತವಾಗಿದೆ. ಗಂಡ-ಹೆಂಡತಿ ನಡುವೆ ವಿರಸ ಬಂದಾಗ ತಿಳಿಹೇಳಲು ಮನೆಯಲ್ಲಿ ಹಿರಿಯರಿಲ್ಲದೇ ಇಬ್ಬರೇ ಪರದಾಡುವಂತಹಸ್ಥಿತಿನಿರ್ಮಾಣವಾಗುತ್ತಿದೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳು ಹೇಳಿದರು   

 ಈ ವೇಳೆ ಶಾಸಕ ಗಣೇಶ್ ಹುಕ್ಕೇರಿ ಇವರ ಧರ್ಮಪತ್ನಿಯಾದ ಸ್ವಪ್ನಾಲಿ ಹುಕ್ಕೇರಿ ಮಾತನಾಡಿ ವರ್ಗೀಕೃತ ವ್ಯವಸ್ಥೆ ಬಲಗೊಳ್ಳುತ್ತಿರುವ ಈ ದಿನಗಳಲ್ಲಿ ಬಸವಣ್ಣನವರ ಅನುಯಾ ಯಿಗಳು ಎಲ್ಲರೂ ಬಸವಣ್ಣನವರ ಆಚಾರ-ವಿಚಾರಗಳು, ಸಮ ಸಮಾಜದ ಪರಿಕಲ್ಪನೆಗಳ ಪಾಲನೆ ಕುರಿತು ಆತ್ಮಾವಲೋಕನ ಮಾಡಿ ಕೊಳ್ಳಬೇಕು ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಆಹಾರ ಪದ್ಧತಿಯ ಬಗ್ಗೆ ಎಚ್ಚರ ವಹಿಸಬೇಕು. ಹೊಟೇಲ್ ಆಹಾರ ಸಂಸ್ಕೃತಿ ಹೆಚ್ಚುತ್ತಿದೆ. ಮನೆಯಲ್ಲಿ ಸಿದ್ದಪಡಿಸಿದ ಆಹಾರವೇ ಆರೋಗ್ಯಕ್ಕೆ ಉತ್ತಮವಾಗಿದೆ. ನಿತ್ಯ ಮಾತ್ರೆ ನುಂಗದೇ ನಿದ್ದೆ ಬಾರದ ನಿರ್ಮಾಣವಾಗಿದೆ. ನಾವು ಎಷ್ಟೇ ಸಂಪಾದಿಸಿದರೂ ಅದು ಆಸ್ಪತ್ರೆ ಪಾಲಾದರೆ ಬದುಕಿಗೆ ಅರ್ಥವಿರುವುದಿಲ್ಲ. ಮುಂದಿನ ನಮ್ಮ ಪೀಳಿಗೆಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವುದು ಅನಿರ್ವಾಯ ವಾಗಿದೆ ಎಂದು ಸ್ವಪ್ನಲಿ ಹುಕ್ಕೇರಿ ಹೇಳಿದರು .  

 ಪುರವಂತರ ಭವ್ಯ ಕಲಮೇಳ   ಯಡೂರು ಗ್ರಾಮದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇಂದು ವಿವಿಧ ಭಾಗದ ಪುರವಂತರು ತಮ್ಮ ಕಲೆಗಳನ್ನು ಪ್ರದರ್ಶಿಸಿ ಜನಮನ ಗಳಿಸಿದರು ಇಂದು ಮುಂಜಾನೆ ನಡೆದ ಮಹಿಳೆಯರ ಬೆಳ್ಳಿ ರಥೋತ್ಸವವನ್ನು ವೀರಭದ್ರ ದೇವಸ್ಥಾನದಿಂದ ಪ್ರಾರಂಭವಾಗಿ ಕಾಡು ಸಿದ್ದೇಶ್ವರ ಸಂಸ್ಥಾನ ಮಠ ನಂತರ ರುದ್ರಪಾದ ಬಸವೇಶ್ವರ ದೇವಸ್ಥಾನ ತಲುಪಿತು ಅಲ್ಲಿ ಪುರವಂತರಿಂದ ಅಗ್ನಿ ಪ್ರವೇಶಟ ಕಾರ್ಯಕ್ರಮ ಜರಗಿದ ನಂತರ ಮತ್ತೆ ಮರಳಿ ವೀರಭದ್ರ ದೇವಸ್ಥಾನಕ್ಕೆ ರಥೋತ್ಸವ ತಲುಪಿತು ಈ ಕಾರ್ಯಕ್ರಮಕ್ಕೆ ಹಲವಾರು ಭಕ್ತಾದಿಗಳು ಪಾಲ್ಗೊಂಡಿದ್ದರು.