ಶರಣರು ಅನುಭಾವದಿಂದ ರಚನೆಗೊಂಡವು ವಚನಗಳು: ತಾರದಾಳೆ

ಶರಣರು ಅನುಭಾವದಿಂದ ರಚನೆಗೊಂಡವು ವಚನಗಳು: ತಾರದಾಳೆ The vachana's were composed out of experience: Taradale

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನಗಳು ಮಾನವ ಜನಾಂಗದ ಕಲ್ಯಾಣಕ್ಕಾಗಿ, ಮನುಕುಲದ ಒಳಿತಿಗಾಗಿ ಸರ್ವಕಾಲಿಕ ಸತ್ಯವನ್ನೇ ಸಾರಿವೆ. ಅವುಗಳ ಮಹತ್ವವನ್ನು ಅರಿತು ನಾವು ಆತ್ಮ ಶುದ್ಧಿ ಹಾಗೂ ಆತ್ಮೋದ್ಧಾರಕ್ಕಾಗಿ ಅಲ್ಲದೇ ಜಗದ ಶಾಂತಿಗಾಗಿ ಅನುಷ್ಠಾನಕ್ಕೆ ತಂದು ಕೊಳ್ಳಬೇಕಾಗಿದೆ. ಶರಣರು ತಮ್ಮ ಅನುಭಾವದ ವಚನಗಳ ರಚಿಸಿ, ತಾವು ಅವುಗಳ ಆಶಯದಂತೆ ನಡೆದು ನೆಮ್ಮದಿಯ ಬದಕು ಸಾಗಿಸಿ, ಮುಂದಿನ ಜನಾಂಗಕ್ಕೆ ನೆಮ್ಮದಿಯ ಬದುಕಿನ ದಾರಿ ತಿಳಿಸಿಕೊಟ್ಟಿದ್ದಾರೆ. ನಮ್ಮ ನಡೆಯೊಂದು ಪರಿ, ನುಡಿಯೊಂದು ಪರಿ ಆಗುತ್ತಿರುವದು ವಿಷಾದನೀಯ. ನಮ್ಮ ಬದುಕು ಇನ್ನೊಬ್ಬರಿಗೆ ಆದರ್ಶವಾಗಿರಬೇಕು.ನುಡಿದರೆ ಮುತ್ತಿನ ಹಾರದಂತಿರಬೇಕು  ಎಂದು ಬೆಳಗಾವಿಯ ಅರ್ ಎಲ್ ಎಸ್ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಶಶಿಕಾಂತ ತಾರದಾಳೆ ಅವರು ಹೇಳಿದರು.  

ದಿ. 23ರಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿಯವರು ನಗರದ ಮಹಾಂತ ಭವನದಲ್ಲಿ ಆಯೋಜಿಸಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ಶರಣರ ವಚನಗಳಲ್ಲಿ ಅರಿವು, ಆಚಾರ, ವಿಚಾರ ವಿಷಯದ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು. 

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಾ.ಲಿಂ.ಮಹಾಸಭಾದ ಅಧ್ಯಕ್ಷ, ನ್ಯಾಯವಾದಿ ಬಸವರಾಜ ರೊಟ್ಟಿ ಅವರು ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5 ರವರೆಗೆ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಬಸವಪರ ಮಠಾಧೀಶರ ಒಕ್ಕೂಟ ಹಮ್ಮಿಕೊಂಡ " ಬಸವ ಸಂಸ್ಕೃತಿಯ ಅಭಿಯಾನ ಕುರಿತು ಮಾಹಿತಿ ನೀಡಿದ ಅವರು ದಿ. 11ರಂದು ಬೆಳಗಾವಿಯಲ್ಲಿ ಜರುಗಲಿರುವ ಬಸವ ರಥಯಾತ್ರೆಯಲ್ಲಿ ಸರ್ವ ಜನಾಂಗದವರು ಭಾಗವಹಿಸಿ ಅಭಿಯಾನವನ್ನು ಯಶಸ್ವಿ ಗೊಳಿಸಲು ಕೋರಿದರು.  

ವೇದಿಕೆಯ ಮೇಲೆ ಪ್ರಸಾದ ದಾಸೋಹಿಗಳಾದ ಗಂಗಮ್ಮ ಮತ್ತು ಬಸಪ್ಪ ಗುರುವನ್ನವರ ಅವರು ಷಟ್ ಸ್ಥಲ್ ಧ್ವಜಾರೋಹಣ ನೆರವೇರಿಸಿದರು. ಜಾ.ಲಿಂ. ಮಹಾಸಭಾ ಜಿಲ್ಲಾ ಘಟಕದ ಅಶೋಕ ಮಳಗಲಿ ಅವರು ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರಿದರು. ಡಾ.ಅಡಿವೆಪ್ಪ ಇಟಗಿ ನಿರೂಪಣೆ ಮಾಡಿದರು. ಮುರಿಗೆಪ್ಪ ಬಾಳಿ ಜಿಲ್ಲಾ ಖಜಾಂಜಿ ಅವರು ಶರಣು ಸಮರೆ​‍್ಣ ಮಾಡಿದರು. ಎಸ್ ಜಿ. ಸಿದ್ನಾಳ, ಕಟ್ಟಿಮನಿ, ಶಂಕರ ಶೆಟ್ಟಿ, ಚಂದ್ರ​‍್ಪ ಬೂದಿಹಾಳ, ಈರಣ್ಣ ಚಿನಗುಡಿ, ಅರವಿಂದ ಪರುಶೆಟ್ಟಿ, ಮಹಾನಂದಾ ಪರುಶೆಟ್ಟಿ, ಸುಜಾತಾ ಮತ್ತಿಕಟ್ಟಿ, ರತ್ನಾ ಬೆನಚಮರ್ಡಿ, ಕಾವೇರಿ ಕಿಲಾರಿ, ಸರಳಾ ಹೇರೆಕರ, ಕೆಂಪಣ್ಣ ರಾಮಾಪೂರಿ ದಂಪತಿ, ಸುಲೋಚನಾ ಮಠದ, ಮಹಾದೇವಿ ಬೂದಿಹಾಳ, ಶೋಬಾ ಶಿವಳ್ಳಿ, ಕರಡಿಮಠ, ಪ್ರೊ ವಿರುಪಾಕ್ಷಿ ದೊಡಮನಿ ಅಲ್ಲದೇ ವಿವಿಧ ಬಡಾವಣೆಗಳ ಬಸವ ಅನುಯಾಯಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.