ಸಂಘದ ಅಭಿವೃದ್ಧಿಗೆ ಸದಸ್ಯರ ವಿಶ್ವಾಸವೇ ಬಂಡವಾಳ

ಸಂಘದ ಅಭಿವೃದ್ಧಿಗೆ ಸದಸ್ಯರ ವಿಶ್ವಾಸವೇ ಬಂಡವಾಳ  The trust of the members is the capital for the association's development


ತಾಳಿಕೋಟಿ ಸೆ.22: ಸಂಘದ ಸದಸ್ಯರ ನಂಬಿಕೆ ಮತ್ತು ವಿಶ್ವಾಸವೇ ಸಂಘದ ನಿಜವಾದ ಬಂಡವಾಳ. ಸದಸ್ಯರು ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿಗೆ ಶ್ರಮಿಸಿದಾಗ ಮಾತ್ರ ಸಂಘ ನಿರಂತರವಾಗಿ ಬೆಳೆಯಲು ಸಾಧ್ಯ ಎಂದು ಸಂಘದ ಅಧ್ಯಕ್ಷ ಮಡು ಸಾಹುಕಾರ ಬಿರಾದಾರ ಹೇಳಿದರು. ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 50ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸಹಕಾರಿ ಸಂಘದಲ್ಲಿ ಹಲವು ಯೋಜನೆಗಳಿವೆ. ರೈತರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದರು. ಸಭೆಯಲ್ಲಿ ಸದಸ್ಯರು ಸಂಘದ ಅಭಿವೃದ್ಧಿಗೆ ನೀಡಿದ ಸಲಹೆ-ಸೂಚನೆಗಳನ್ನು ಆಡಳಿತ ಮಂಡಳಿ ಸಭೆಯ ಮುಂದಿಟ್ಟು ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮವನ್ನು ಪಿಕೆಪಿಎಸ್ ಕಾರ್ಯನಿರ್ವಾಹಕ ಗುರುಪ್ಪಗೌಡ ಪಾಟೀಲ ನಿರ್ವಹಿಸಿದರು. ಉಪಾಧ್ಯಕ್ಷೆ ಮಹಾದೇವಿ ಪಾಟೀಲ, ನಿರ್ದೇಶಕರಾದ ಮಾಳಪ್ಪ ಅಮಲ್ಯಾಳ, ಸಂಗನಗೌಡ ಪಾಟೀಲ, ತಿಪ್ಪಣ್ಣ ಆದವಾನಿ, ಚಿದಾನಂದ ಬಿರಾದಾರ, ಶಿವಮ್ಮ ಕನೊಳ್ಳಿ, ಸಿದ್ದಪ್ಪ ಕಟ್ಟಿಮನಿ, ಬಾಬುಗೌಡ ಪಾಟೀಲ, ಬಸನಗೌಡ ಬಿರಾದಾರ, ಈರಸಂಗಪ್ಪ ದೂಳೆಕರ್, ಯಮನಪ್ಪ ಹರಿಜನ ಸೇರಿದಂತೆ ಸಂಘದ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.