ಅತಿ ಶೀಘ್ರದಲ್ಲಿಯೇ ರಾಜ್ಯ ಸಂಪುಟ ವಿಸ್ತರಣೆಯಾಗಲಿದೆ, ಶಾಸಕ ಲಕ್ಷ್ಮಣ ಸವದಿ

ಅತಿ ಶೀಘ್ರದಲ್ಲಿಯೇ ರಾಜ್ಯ ಸಂಪುಟ ವಿಸ್ತರಣೆಯಾಗಲಿದೆ, ಶಾಸಕ ಲಕ್ಷ್ಮಣ ಸವದಿ The state cabinet will be expanded very soon, says MLA Laxman Savadi

ಅಥಣಿ 10: ರಾಜ್ಯ ಸಚಿವ ಸಂಪುಟ ಕೆಲವೇ ದಿನಗಳಲ್ಲಿ  ವಿಸ್ತರಣೆ ಯಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಅವರು ಘಟನಟ್ಟಿ ಕ್ರಾಸ್ ದಿಂದ ಘಟನಟ್ಟಿ ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ, ಹುಲಗಬಾಳಿ ಕ್ರಾಸ್ ದಿಂದ ದರೂರ್ ಗ್ರಾಮದವರೆಗೆ ಹಾಗೂ ಅಥಣಿಯ ದಾನಮ್ಮ ದೇವಿ ದೇವಸ್ಥಾನದಿಂದ ದಿವಾನಮಳ  ವಸ್ತಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಇದೇ ಪ್ರಥಮ ಬಾರಿಗೆ ರಾಜ್ಯದ ಮುಖ್ಯಮಂತ್ರಿ ವಿರೋಧ ಪಕ್ಷಗಳ ಶಾಸಕರನ್ನೂ ಸಹ ವಿಶ್ವಾಸಕ್ಕೆ ತೆಗೆದುಕೊಂಡು ಬೆಳಗಾವಿಯ ಸುವರ್ಣ ಸೌಧದಲ್ಲಿ ಕ್ಷೇತ್ರಗಳ ಅಭಿವೃದ್ಧಿ, ಪ್ರವಾಹ, ಬರಗಾಲ ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಕುರಿತು ಸುಮಾರು ಐದು ಗಂಟೆಗಳ ಕಾಲ ಸುದೀರ್ಘವಾಗಿ  ಚರ್ಚಿಸಿದ್ದಾರೆ ಎಂದ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೂರ ದೃಷ್ಟಿ ಇಟ್ಟುಕೊಂಡು ತಮ್ಮ ಹೊಸ ಹೊಸ ಚಿಂತನೆಗಳ ಮೂಲಕ  ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳು ಅನುಷ್ಠಾನಗೊಳಿಸುತ್ತಿರುವುದು ಸಂತೋಷದ ಸಂಗತಿ ಎಂದರು.

ಪ್ರಜಾಸೇವೆ ಎನ್ನುವ ಇಲಾಖೆಯೊಂದನ್ನು ಸೃಷ್ಟಿಸಿ ಆ ಮೂಲಕ ಪ್ರಜೆಗಳ ಮನೆ ಮನೆಗೆ ಸರಕಾರಿ ಯೋಜನೆಗಳನ್ನ,  ಸೌಲಭ್ಯಗಳನ್ನ ತಲುಪಿಸುವ ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸುವ ವಿಶೇಷ ಪ್ರಯತ್ನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇವರಿಂದ ಆಗಿದೆ ಎಂದ ಅವರು ಗ್ರಾಮ ಪಂಚಾಯಿತಗಳು ಇರುವ ಗ್ರಾಮಗಳಲ್ಲಿಯೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವಾಸ್ತವ್ಯ ಇದ್ದು ಗ್ರಾಮೀಣ ಭಾಗದ ಜನರ ಸಮಸ್ಯೆಯನ್ನು ಬಗೆಹರಿಸಬೇಕು ಆದರೆ ಇದು ಸಾಧ್ಯವಾಗುತ್ತಿಲ್ಲ ಇದಕ್ಕಾಗಿ ವಿಶೇಷವಾಗಿ ಪ್ರಜಾಸೇವೆ ಎನ್ನುವ ಈ ಇಲಾಖೆಯನ್ನ ಮುಖ್ಯಮಂತ್ರಿಗಳು ಇದೇ ಮೊದಲ ಬಾರಿಗೆ ಪ್ರಾರಂಭಿಸಿದ್ದಾರೆ ಎಂದರು.

ಅಥಣಿ ಅಥಣಿ ಮತಕ್ಷೇತ್ರದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಂಜೂರಾದ 50 ಕೋಟಿ ವಿಶೇಷ ಅನುದಾನದಲ್ಲಿ ನಾಲ್ಕು ಪ್ರಮುಖ ರಸ್ತೆ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಮೂಲಕ ಮತ್ತು 22 ಸಂಪರ್ಕ ರಸ್ತೆಗಳನ್ನು ಪಂಚಾಯತ್ ರಾಜ್ ಅಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದ ಅವರು ಮುಂದಿನ ದಿನಗಳಲ್ಲಿಯೂ ಕೂಡ ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೂ ಅನೇಕ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ನಡೆಸುವೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಪಂಚಾಯತ್ ರಾಜ್ ಅಭಿವೃದ್ಧಿ ಇಲಾಖೆಯ ವೀರಣ್ಣ ವಾಲಿ,  ಎಸ್ ಕೆ ಬುಟಾಳಿ, ಶಿವಾನಂದ್ ದಿವಾನಮಳ, ಲಾಲ್ ಸಾಬ್ ನದಾಫ್, ಅಶೋಕ್ ಕರಬಸಪ್ಪಗೋಳ, ಅನಂತ ಬಸರಿಖೋಡಿ,ಚನ್ನಬಸು ಹುಲಗಬಾಳಿ, ರಾಹುಲ್ ನಾಯಿಕ , ಸುರೇಶ ನಂದಿಗೌಡರ, ದುಂಡಪ್ಪ ಗುಬಚಿ, ಮಹಾತೇಂಶ ಮುಳ್ಳಟ್ಟಿ, ಬಸವರಾಜ ಗಲಗಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.