'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದಿಂದ ಬಂತು 'ಮಾತು ಮಧುರ ...' ಹಾಡು
ಲೋಕದರ್ಶನ ವರದಿ
ಗೋಕುಲ ಎಂಟರ್ಟೈನರ್ಸ್ ಲಾಂಛನದಲ್ಲಿ ಉಷಾ ಗೋವಿಂದರಾಜು ನಿರ್ಮಿಸಿರುವ, ಹಾಸ್ಯ ನಟನಾಗಿ ಎಲ್ಲರ ಗಮನ ಸೆಳೆದಿರುವ ಸುಜಯ್ ಶಾಸ್ತ್ರಿ ನಿರ್ದೇಶನದ ಹಾಗೂ ಖ್ಯಾತ ಗಾಯಕ - ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಇದೇ ಏಪ್ರಿಲ್ 17ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ 'ಮಾತು ಮಧುರ ...' ಎಂಬ ಸುಮಧುರ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ತಯಾರಾದ ಈ ಚಿತ್ರಕ್ಕೆ ಈಗ ಬಿಡುಗಡೆ ಭಾಗ್ಯ ಲಬಿಸಿದೆ.
ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಸುಜಯ್ ಶಸ್ತ್ರಿ, 'ಕಾರಣಾಂತರದಿಂದ ನಮ್ಮ ಚಿತ್ರ ಬಿಡುಗಡೆ ತಡವಾಗಿದ್ದು, ಈಗ ರೀಲೀಸ್‌ಗೆ ಮುಹೂರ್ತ ಕೂಡಿ ಬಂದಿದೆ. ಇದೊಂದು 90ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಕನಕಪುರ ಸುತ್ತಮುತ್ತ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಸಮಯದ ಮಹತ್ವ ಸಾರುವ ಈ ಚಿತ್ರಕ್ಕೆ ನನ್ನ ಸ್ನೇಹಿತ ರಾಜಗುರು ಹೊಸಕೋಟೆ ಕಥೆ ಬರೆದಿದ್ದಾರೆ. ಕಥೆಗೆ ಈ ಶೀರ್ಷಿಕೆ ಪೂರಕವಾಗಿದೆ. ಇದು ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ಅರ್ಚನಾ ಕೊಟ್ಟಿಗೆ ಈ ಚಿತ್ರದ ನಾಯಕಿ. ದತ್ತಣ್ಣ, ತಾರಾ ಅನುರಾಧ, ಮಂಜು ಪಾವಗಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇಂದು 'ಮಾತು ಮಧುರ ...' ಹಾಡು ಬಿಡುಗಡೆ ಮಾಡಿದ್ದೇವೆ. ಪ್ರವೀಣ್ - ಪ್ರದೀಪ್ ಸಂಗೀತ ನೀಡಿದ್ದಾರೆ. ಗೋವಿಂದರಾಜು ಅವರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಕೌಟುಂಬಿಕ ಕಾಮಿಡಿ ಜಾನರ್‌ನ ಈ ಚಿತ್ರ ಏಪ್ರಿಲ್ 17 ರಂದು ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ' ಎಂದರು.
'ಇದು ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ಸಾಕಷ್ಟು ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ನಟಿಸಿದ್ದೇನೆ. ಪಾತ್ರಕ್ಕಾಗಿ ದೇಹದ ತೂಕ ಸಹ ಹೆಚ್ಚಿಸಿಕೊಂಡಿದ್ದೆ. ಸಮಯಕ್ಕೆ ಬೆಲೆ ಕೊಡಬೇಕು. ಇಲ್ಲದಿದ್ದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಮನಮುಟ್ಟುವ ಹಾಗೆ ತೋರಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ' ಎಂದು ನಾಯಕ ಚಂದನ್ ಶೆಟ್ಟಿ ಹೇಳಿದರು. 'ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೂರನೇ ಚಿತ್ರ. ಒಂದೊಳ್ಳೆ ಸಂದೇಶವಿರುವ ಚಿತ್ರವೂ ಹೌದು. ನಮ್ಮ ಚಿತ್ರವನ್ನು ಎಲ್ಲರು ಚಿತ್ರಮಂದಿರಗಳಲ್ಲೇ ನೋಡಿ' ಎಂದರು ನಿರ್ಮಾಪಕ ಗೋವಿಂದರಾಜು. 'ಈ ಚಿತ್ರದಲ್ಲಿ ಐದು ಹಾಡುಗಳಿವೆ. ಇಂದು ಬಿಡುಗಡೆಯಾಗಿರುವ 'ಮಾತು ಮಧುರ' ಹಾಡನ್ನು ದರ್ಶನ್ ನಾರಾಯಣ್ ಹಾಗೂ ಅನುರಾಧಾ ಭಟ್ ಹಾಡಿದ್ದಾರೆ. ನಾಲ್ಕು ಹಾಡುಗಳು 90ರ ಕಾಲಘಟದ ಹಾಡುಗಳ ಹಾಗೆ ಇರುತ್ತವೆ. ಒಂದು ಪ್ರಮೋಷನ್ ಸಾಂಗ್ ಇದ್ದು, ಅದನ್ನು ಚಂದನ್ ಶೆಟ್ಟಿ ಅವರೆ ಹಾಡಿ ಸಂಗೀತ ಸಂಯೋಜನೆ ಮಾಡಿದ್ದಾರೆ' ಎಂದು ಸಂಗೀತ ನಿರ್ದೇಶಕರಾದ ಪ್ರವೀಣ್ - ಪ್ರದೀಪ್ ತಿಳಿಸಿದರು. 'ವಸಂತ ನನ್ನ ಪಾತ್ರದ ಹೆಸರು. ನಾನು ಈ ಚಿತ್ರದಲ್ಲಿ ಮೆಸ್ ಓನರ್' ಎಂದು ನಾಯಕಿ ಅರ್ಚನಾ ಕೊಟ್ಟಿಗೆ ಹೇಳಿದರು. ಚಿತ್ರ ಆರಂಭವಾದ ಕುರಿತು ಹಾಗೂ ಕಥೆ ಬಗ್ಗೆ ಕಥೆ ಬರೆದಿರುವ ರಾಜಗುರು ಹೊಸಕೋಟೆ ಮಾಹಿತಿ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 