ಬಡವರಲ್ಲಿ ಸಂಪತ್ತಿನ ಕೊರತೆ ಇರಬಹುದು, ಭಕ್ತಿಗೆ ಕೊರತೆಯಿಲ್ಲ: ಶ್ರೀಗಳು
The poor may lack wealth, but they do not lack devotion: Sri
ತಾಳಿಕೋಟೆ, ಆ. 28: ಬಡವರಲ್ಲಿ ಸಂಪತ್ತಿನ ಕೊರತೆ ಇರಬಹುದು. ಆದರೆ ಭಕ್ತಿಗೆ ಕೊರತೆ ಇರುವುದಿಲ್ಲ. ಬಡವರ ಮನೆಗಳಲ್ಲಿ ಭಕ್ತಿ ನೆಲೆಸಿದ್ದರೆ, ಶ್ರೀಮಂತರ ಮನೆಗಳಲ್ಲಿ ಹಣ ಇರುತ್ತದೆ. ನಿಸ್ವಾರ್ಥ ಭಕ್ತಿಯಿಂದ ಸಮಾಜದ ಒಳಿತಿಗಾಗಿ ದುಡಿಯುವ ಭಕ್ತರು ನನಗೆ ಅತ್ಯಂತ ಮುಖ್ಯರು ಎಂದು ಖಾಸ್ಗತೇಶ್ವರ ಮಠದ ಬಾಲಯೋಗಿ ಶ್ರೀ ಸಿದ್ದಲಿಂಗ ದೇವರು ಹೇಳಿದರು.
ಗುರುವಾರ ಪಟ್ಟಣದ ಮದಾರ ಚೆನ್ನಯ್ಯ ನಗರದಲ್ಲಿ ‘ಅಜ್ಜನ ನಡೆ ಸಮೃಧ್ಧ ಸಮಾಜದ ಕಡೆ’ ಕಾರ್ಯಕ್ರಮದ ಅಂಗವಾಗಿ ಮನೆ-ಮನೆಗೆ ಭೇಟಿ ನೀಡಿದ ಬಳಿಕ ಸಮಾಜ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಮಾಜದ ಯುವಕರು ದುಶ್ಚಟಗಳಿಗೆ ದಾಸರಾಗಬಾರದು. ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನು ದುಶ್ಚಟಗಳಿಗೆ ವ್ಯಯಿಸದೆ, ತಮ್ಮ ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಅಭಿವೃದ್ಧಿಗೆ ಬಳಸಬೇಕು. ಉತ್ತಮ ಶಿಕ್ಷಣ ಪಡೆದು ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದ ಮುಖಂಡ ಬಸಪ್ಪ ಕಟ್ಟಿಮನಿ ಮಾತನಾಡಿ, ಅಜ್ಜನ ಜಾತ್ರೆಯನ್ನು ಕಳೆದ ಸುಮಾರು 15 ದಿನಗಳಿಂದ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಇದೀಗ ಸಿದ್ದಲಿಂಗ ದೇವರು ನಮ್ಮ ಬಡಾವಣೆಗೆ ಆಗಮಿಸಿರುವುದು ಎಲ್ಲರಿಗೂ ಮತ್ತಷ್ಟು ಸಂತಸ ತಂದಿದೆ.
ಶ್ರೀಗಳ ಹಿತನುಡಿಯಂತೆ ಎಲ್ಲರೂ ದುಶ್ಚಟಗಳನ್ನು ತ್ಯಜಿಸಿ, ಉತ್ತಮ ನಾಗರಿಕರಾಗಿ ಕುಟುಂಬದ ಸದಸ್ಯರ ಹಿತಚಿಂತನೆಯೊಂದಿಗೆ ಜೀವನ ನಡೆಸಬೇಕು ಎಂದರು. ಈ ಸಂದರ್ಭದಲ್ಲಿ ಸಮಾಜದ ವತಿಯಿಂದ ಶ್ರೀ ಸಿದ್ದಲಿಂಗ ದೇವರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮದಾರ ಚೆನ್ನಯ್ಯ ಸಮಾಜದ ಅಧ್ಯಕ್ಷ ಯಮನಪ್ಪ ಕಟ್ಟಿಮನಿ, ಹಿರಿಯರಾದ ಹುಲಗಪ್ಪ ಕಟ್ಟಿಮನಿ, ಗೋಪಾಲ ಕಟ್ಟಿಮನಿ, ಅರ್ಬನ್ ಬ್ಯಾಂಕ್ ನಿರ್ದೇಶಕ ರಾಮಣ್ಣ ಕಟ್ಟಿಮನಿ, ಮಲ್ಲಪ್ಪ ಶಿರೋಳ, ನಾಗಪ್ಪ ಕಟ್ಟಿಮನಿ, ದೇವರಾಜ ಕಟ್ಟಿಮನಿ, ಕಾಶಿನಾಥ ಕಟ್ಟಿಮನಿ, ರಾಜು ಪರಶುರಾಮ, ಗೀರೀಶ ಕಟ್ಟಿಮನಿ,
ನಿಂಗಪ್ಪ ಶಿರೋಳ ಸೇರಿದಂತೆ ಸಮಾಜದ ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳಿಂದ ಆಶೀರ್ವಾದ ಪಡೆದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸಿದ್ದಲಿಂಗ ದೇವರನ್ನು ಶ್ರೀಮಠದಿಂದ ಮದಾರ ಚೆನ್ನಯ್ಯ ಬಡಾವಣೆಯವರೆಗೆ ಬೈಕ್ ರ್ಯಾಲಿ ಮೂಲಕ ಕರೆತರಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 