ಬಹು ನೀರೀಕ್ಷಿತ ಮಲ್ಟಿ ಸ್ಟಾರ್ '45' ಇಂದು ಬಿಡುಗಡೆ
The much awaited multi starrer '45' releases today
ಲೋಕದರ್ಶನ ವರದಿ
ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನೀರೀಕ್ಷಿತ ಸಿನಿಮಾ '45' ಇಂದು (ಡಿ.25) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ '45' ತಯಾರಾಗಿದ್ದು, ಕನ್ನಡ ಬಿಟ್ಟು ಉಳಿದ ಭಾಷೆಯಲ್ಲಿ ಚಿತ್ರ ಜನವರಿ 1ರಂದು ತೆರೆಗೆ ಬರುತ್ತಿದೆ. ಈಗಾಗಲೇ ಹಾಡು ಟ್ರೇಲರ್ ಮೂಲಕ ಭಾರೀ ಸಂಚಲನ ಮೂಡಿಸಿದೆ. 45 ಕ್ರೇಜ್ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೇ, ವಿದೇಶಗಳಲ್ಲೂ ಅಬ್ಬರ ಜೋರಾಗಿದೆ. ಡಿಸೆಂಬರ್ 25ರಂದು ಕರ್ನಾಟಕಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು, ಅದಕ್ಕೂ ಎರಡು ದಿನ ಮುನ್ನವೇ ಕೆನಡಾದಲ್ಲಿ ಪ್ರೀಮಿಯರ್ ಶೋ ನಡೆಸಲಾಗಿದೆ. ಕಳೆದ ವಾರವೇ ಕೆನಡಾದ ಪ್ರೀಮಿಯರ್ ಶೋಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಓಟ್ ಆಗಿರುವುದು ಚಿತ್ರದ ಮೇಲಿನ ಭರ್ಜರಿ ನೀರೀಕ್ಷೆಗೆ ಸಾಕ್ಷಿಯಾಗಿದೆ.
ಇನ್ನು ಕರ್ನಾಟಕದಲ್ಲೂ 45 ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಈಗಾಗಲೇ ಟ್ರೇಲರ್‌ಗೆ ಸಿಕ್ಕಿರುವ ಸ್ಪಂದನೆ ನೋಡಿದರೆ, ರಾಜ್ಯದಲ್ಲೂ ಅದ್ಭುತ ಓಪನಿಂಗ್ ಪಡೆಯುವ ನೀರೀಕ್ಷೆಯಿದೆ. '45' ಸಿನಿಮಾ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಬಿಗ್ ಬಜೆಟ್‌ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾ ಕುರಿತು ಮಾತನಾಡುವ ನಿರ್ಮಾಪಕ ರಮೇಶ್ ರೆಡ್ಡಿ, 'ನೀರೀಕ್ಷೆಗೂ ಮೀರಿ ಜನರಿಂದ ಸ್ಪಂದನೆ ಬರುತ್ತಿದೆ. ಅರ್ಜುನ್ ಜನ್ಯ ಅವರ ನಿರ್ದೇಶನ, ಶಿವಣ್ಣನ ಲುಕ್, ಉಪ್ಪಿ ಸಾರ್ ಡೈಲಾಗ್ ಹಾಗೂ ರಾಜ್ ಬಿ ಶೆಟ್ಟಿಯ ಮುಗ್ಧತೆ ಪ್ರೇಕ್ಷಕರ ಮನ ಗೆದ್ದಿದೆ. ಸಿನಿಮಾಕ್ಕೂ ಇದೇ ರೀತಿಯ ಸಾಥ್ ಸಿಗುತ್ತದೆ ಎಂಬ ನಂಬಿಕೆ ಇದೆ' ಎಂದು ಹೇಳಿದ್ದಾರೆ.
"45 ನಾನು ಇತ್ತೀಚೆಗೆ ನೋಡಿದ ಸಿನಿಮಾಗಳಲ್ಲಿ ವಿಭಿನ್ನ ಹಾಗೂ ಅರ್ಥಪೂರ್ಣ ಸಿನಿಮಾ. ಸಾಮಾನ್ಯ ಮನುಷ್ಯ(ರಾಜ್ ಬಿ ಶೆಟ್ಟಿ), ರಾಯ(ಮ)ಪ್ಪನ ಪಾತ್ರದಲ್ಲಿ ಉಪೇಂದ್ರ ಅಬ್ಬರಿಸಿದ್ದಾರೆ. ಸಿನಿಮಾದ ಹೈಲೈಟ್ ಶಿವ(ರಾಜ್ ಕುಮಾರ್) ರುದ್ರನರ್ತನದಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಾರೆ. ಅರ್ಜುನ್ ಜನ್ಯ ಡೆಬ್ಯೂ ನಿರ್ದೇಶನ, ರಮೇಶ್ ರೆಡ್ಡಿಯವರ ಅದ್ಧೂರಿ ನಿರ್ಮಾಣದ '45' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಸಿನಿಮಾವಾಗಿದೆ. ಭಾರತೀಯ ಚಿತ್ರರಂಗದ ಶ್ರೇಷ್ಠ ಸಿನಿಮಾಗಳ ಸಾಲಿನಲ್ಲಿ '45' ನಿಲ್ಲುವ ಭಾರಿ ನೀರೀಕ್ಷೆಯಿದೆ"
ರಾಜೇಶ್ ಗಣಪತಿ, ಫಿಲ್ಮ್ ಜರ್ನಲಿಸ್ಟ್
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 