ಬೀದಿ ನಾಯಿಗಳ ಕಾಟ: ನಿರ್ಭಯದಿಂದ ಓಡಾಡುವುದು ಕಷ್ಟ

ಬೀದಿ ನಾಯಿಗಳ ಕಾಟ: ನಿರ್ಭಯದಿಂದ ಓಡಾಡುವುದು ಕಷ್ಟ  The menace of stray dogs: It's difficult to walk around without fear

ಮಾಂಜರಿ : ಗಡಿಭಾಗದ ಪ್ರತಿಯೊಂದು ಗ್ರಾಮಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಜನಸಾಮಾನ್ಯರು, ಶಾಲಾ ವಿದ್ಯಾರ್ಥಿಗಳು, ಹಿರಿಯರು, ಹಿರಿಯ ಮಹಳೆಯರು ಒಬ್ಬಂಟಿಯಾಗಿ ನಿರ್ಭಯದಿಂದ ಓಡಾಡುವುದು ಕಷ್ಟದ ಕೆಲಸವಾಗಿದ್ದು, ಬೀದಿ ನಾಯಿಗಳ ಕಾಟದಿಂದ ಮುಕ್ತಿ ಯಾವಾಗ ಎಂಬ ಪ್ರಶ್ನೆ, ಸಾರ್ವಜನಿಕರದ್ದಾಗಿದೆ. 

ರಸ್ತೆ-ರಸ್ತೆಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆಯೂ ದಾಳಿ ಮಾಡುತ್ತಿವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬೀದಿ ನಾಯಿಗಳ ಉಪಟಳಕ್ಕೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. 

ಗ್ರಾಮಗಳ ಹೊರವಲಯದ ಗುಡಿಸಲಿನಲ್ಲಿದ್ದ ಆಡು-ಕುರಿಮರಿಗಳಿಗೆ, ಎಮ್ಮೆ ಕರುಗಳಿಗೆ ಬಿಡಾಡಿ ನಾಯಿಗಳು ಗೊಳಿಸುತ್ತಿವೆ. ಹೊಲಗದ್ದೆಗಳಿಗೆ ವಾಸಿಸುತ್ತಿರುವ ಮಹಿಳೆಯರು ಒಬ್ಬರೆ ಗ್ರಾಮಗಳಿಗೆ ಬರೆಲು ಹೆದರಿತ್ತಿದ್ದಾರೆಪ್ರಮುಖ ರಸ್ತೆಯ ಪಕ್ಕದಲ್ಲಿ ಮಲಗಿರುವ ನಾಯಿಗಳ ಹಿಂಡು ಏಕಾಏಕಿ ವ್ಯಕ್ತಿಗಳ ಮೇಲೆ ದಾಳಿ ಮಾಡಲು ಯತ್ನಿಸುತ್ತಿರುವ ಪರಿಣಾಮ ಬೆಳಗ್ಗೆ, ಸಾಯಂಕಾಲ ವಾಯು ವಿಹಾರ ಮಾಡಲು ಹೋಗುವವರಿಗೂ ಆತಂಕ ಮೂಡಿಸಿದೆ. ಬೀದಿ ನಾಯಿಗಳ ಕಾಟಕ್ಕೆ ಹೆದರಿ ಕೆಲ ಮಹಿಳೆಯರು ವಯೋವೃದ್ಧರು ವಾಯುವಿಹಾರಕ್ಕೆ ಹೋಗುವುದನ್ನು ನಿಲ್ಲಿಸಿದ್ದಾರೆ. 

ನೆರೆಯ ಮಹಾರಾಷ್ಟ್ರದ ಕುರುಂದವಾಡ, ಇಚಲಕರಂಜಿ, ಜಯಶಿಂಗಪುರ, ಶಿರೋಳ, ಹುಪರಿ, ಕೊಲ್ಲಾಪುರ ಮುಂತಾದ ಪಟ್ಟಣಗಳಲ್ಲಿ ಬೀದಿ ನಾಯಿಗಳನ್ನು ಹಿಡಿದು ರಾತ್ರಿವೇಳೆಯಲ್ಲಿ ರಾಜ್ಯದ ಗಡಿ ಭಾಗದ ವಿವಿಧ ಗ್ರಾಮಗಳಲ್ಲಿ ಬಿಟ್ಟು ಹೋಗುತ್ತಿದ್ದಾರೆಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿದ್ದು. ಭಯದ ವಾತಾವರಣದಲ್ಲಿ ಸಂಚರಿಸುವ ಪ್ರಸಂಗ ಸಾರ್ವಜನಿಕರಲ್ಲಿ ಬಂದೊದಗಿದೆ. 

ಸ್ಥಳೀಯ ಪಂಚಾಯತಿಗಳು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಪ್ರಯತ್ನಿಸಬೇಕು: ಗಡಿ ಗ್ರಾಮಗಳಲ್ಲಿ ಕಳೆದ ಅನೇಕ ತಿಂಗಳಿಂದ ಬೀದಿನಾಯಿಗಳ ಹಾವಳಿ ಹೆಚ್ಚಿದ್ದರೂ ಸಹ ಸೂಕ್ತ ಕ್ರಮ ಕೈಗೊಳ್ಳದೆ ಇರುವುದರಿಂದ ಸಾರ್ವಜನಿಕರಿಗೆ ಬೇಸರೆ ಮೂಡಿಸುತ್ತಿದೆ. ಶಾಲಾ ಮಕ್ಕಳು, ವಯೋವೃದ್ಧರು, ಮಹಿಳೆಯರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದ್ದು, ಬೀದಿ ನಾಯಿಗಳ ಹಾವಳಿ ಕಡಿಮೆಗೊಳಿಸಲು ಪ್ರಯತ್ನಿಸಬೇಕು, ಕೆಲನಾಯಿಗಳಿಗೆ ತ್ವಚೆಯ ಮೇಲೆ ರೋಗ ಬಿದ್ದು, ವಾಸನೆ ಬರುತ್ತಿದ್ದು, ಸೂಕ್ತಕ್ರಮ ತಗೆದುಕೊಳ್ಳಬೇಕು. ಎಂದು ಗಡಿಭಾಗದ ಜನತೆ ಆಗ್ರಹಿಸಿದ್ದಾರೆ. 

 ಮಾಂಜರಿ ಗ್ರಾಮ ಪಂಚಾಯಿತಿಯ ಸುತ್ತು ಮುತ್ತಲಿನ  ಪಂಚಾಯತಿಯವರು 2 ಬಾರಿ ಬೀದಿ ನಾಯಿಗಳನ್ನು ಹಿಡಿಯುವವರನ್ನು ಕರೆದು ಸುಮಾರು 150 ಬೀದಿನಾಯಿಗಳನ್ನು ಹಿಡಿದು ಸ್ಥಳಾಂತರಿಸಿದ್ದಾರೆ. ಗಡಿಭಾಗದ ಪ್ರತಿಯೊಂದು ಗ್ರಾಮದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಸ್ಥಳಿಯ ಪಂಚಾಯತಿಯವರು ಮುತುವರ್ಜಿ ವಹಿಸಿ ನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸ ಬೇಕೆಂದು ಒತ್ತಾಯಿಸುತ್ತಿದ್ದಾರೆ. 

ನೆರೆಯ ಮಹಾರಾಷ್ಟ್ರದ ಶಹರಗಳಲ್ಲಿ ವಾರಸುದಾರರಿಲ್ಲದ ನಾಯಿಗಳನ್ನು ಸ್ಥಳೀಯ ಆಡಳಿತದವರು ಹಿಡಿದು ರಾತ್ರಿ ವೇಳೆಯಲ್ಲಿ ಗಡಿಗೆ ಹೊಂದುಕೊಂಡಿರುವ ಹಳ್ಳಿಗಳಲ್ಲಿ ಬಿಟ್ಟು ಹೋಗುವ ರೂಢಿಯಿದೆ. ಇದು ತಪ್ಪಬೇಕು ಎನ್ನುತ್ತಾರೆ ಪ್ರಜ್ಞಾವಂತರು.