ಮೇ.6 ರಿಂದ 10 ರವರೆಗೆ ಐದು ವರ್ಷಕ್ಕೆ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವ

ಮೇ.6 ರಿಂದ 10 ರವರೆಗೆ ಐದು ವರ್ಷಕ್ಕೆ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವ The five-yearly Sri Mahalakshmi Devi Jatra Mahotsav will be held from May 6 to 10.

ರಾಯಬಾಗ 01:  ಪಟ್ಟಣದಲ್ಲಿ ಪ್ರತಿ ಐದು ವರ್ಷಕ್ಕೆ ನಡೆಯುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವವು ಮೇ.6 ರಿಂದ 10 ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ಮೇ. 6 ರಂದು ಮುಂ.8 ಗಂಟೆಗೆ ಹಾಲಗಂಬ ಪೂಜೆ, ಮೆರವಣಿಗೆ, ನಂತರ ಕರಿ ಕಟ್ಟುವುದು, ರಾತ್ರಿ 10.30 ಕ್ಕೆ ಅಂಚೆ ಕಚೇರಿ ಮುಂಭಾಗ ಬೆಳಗಾವಿ ಜಿಲ್ಲಾ ಜನಸೇವಾ ಡ್ರೈವರ್ ಅಸೋಸಿಯೇಷನ್ ವತಿಯಿಂದ ಆರ್ಕೆಸ್ಟ್ರಾ ಕಾರ್ಯಕ್ರಮ, ಬಜರಂಗದಳದ ವತಿಯಿಂದ ದೇವಸ್ಥಾನ ಹತ್ತಿರ ಬೆಂಗಳೂರಿನ ವಾಗ್ಮಿ ಹಾರಿಕಾ ಮಂಜುನಾಥ ಅವರಿಂದ ಹಿಂದೂ ಸಿಂಹ ಘರ್ಜನೆ ಕಾರ್ಯಕ್ರಮ. ಮೇ. 7 ರಂದು ಮುಂ. 9ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ಶ್ರೀ ಮಹಾಲಕ್ಷ್ಮಿ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಲಿದೆ. ರಾತ್ರಿ 9:30ಕ್ಕೆ ಶ್ರೀ ಮಹಾಲಕ್ಷ್ಮಿ ದೇವಿಯ ಪ್ರತಿಷ್ಠಾಪನೆ ಹಾಗೂ ಉಡಿ ತುಂಬ ಕಾರ್ಯಕ್ರಮ.

ಮೇ. 8 ರಂದು ಮುಂ.8 ಗಂಟೆಗೆ ವಾದ್ಯ ಮೇಳದೊಂದಿಗೆ ಸುಮಂಗಲೆಯರಿಂದ ಕುಂಭಮೇಳ ಮೆರವಣಿಗೆ, ಶ್ರೀ ತುಳಲಕ್ಷ್ಮೀ ದೇವಿ, ಶ್ರೀ ದ್ಯಾಮವ್ವ, ಶ್ರೀ ಕಾಳಮ್ಮ ದೇವಿಯ ಮಂದಿರಕ್ಕೆ ಹೋಗಿ ಉಡಿ ತುಂಬುವುದು. ನಂತರ ಶ್ರೀ ಮಹಾಲಕ್ಷ್ಮಿ ದೇವಿಗೆ  ಕಮಿಟಿ ಹಾಗೂ ಪಟ್ಟಣದ ನಾಗರಿಕರಿಂದ ಉಡಿ ತುಂಬುವುದು ಹಾಗೂ ಮಹಾನೈವೈದ್ಯ.  ರಾತ್ರಿ 10 ಗಂಟೆಗೆ ಶ್ರೀ ಮಹಾಲಕ್ಷ್ಮಿ ದೇವಿಯ ಹೋನ್ನಾಟ, ಪಂಜಿನ ಮೆರವಣಿಗೆ, ವಾದ್ಯ ಮೇಳದೊಂದಿಗೆ ಪಟ್ಟಣದ ಹನುಮಾನ ಮಂದಿರದ ಮಂಟಪಕ್ಕೆ ಆಗಮಿಸುವುದು.ಮೇ. 9 ರಂದು ಶ್ರೀ ಹನುಮಾನ ಮಂದಿರದ ಎದುರಿನ ಭವ್ಯ ಮಂಟಪದಲ್ಲಿ ಪ್ರತಿಷ್ಠಾನಗೊಂಡ ಶ್ರೀ ಮಹಾಲಕ್ಷ್ಮಿ ದೇವಿಯ ಸಾರ್ವಜನಿಕರು ದರ್ಶನ ಪಡೆಯಲಿದ್ದಾರೆ. ರಾತ್ರಿ 8ಕ್ಕೆ ಲಕ್ಷ್ಮೀದೇವಿಯ ಭವ್ಯ ಮೆರವಣಿಗೆಯೊಂದಿಗೆ ದೇವಿಯ ವಿಸರ್ಜನೆ.ಪ್ರತಿ ದಿನ ಮಹಾಪ್ರಸಾದ ನಡೆಯಲಿದೆ. ಮೇ. 10 ರಂದು ಬೆಳಿಗ್ಗೆ ವಿವಿಧ ಶರ್ಯತ್ತುಗಳು ಜರುಗಲಿವೆ ಎಂದು ಶ್ರೀ ಲಕ್ಷ್ಮಿದೇವಿ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.