ಬಲರಾಮನ ದಿನಗಳಿಂದ ಬಂತು 'ಶುರು ಶುರು ...' ಸುಂದರ ಹಾಡು
The beautiful song 'Shuru Shuru...' comes from the days of Balarama.
'ಆ ದಿನಗಳು' ಖ್ಯಾತಿಯ ಕೆ.ಎಂ. ಚೈತನ್ಯ ಮತ್ತೊಂದು ಅಂಡರ್ವರ್ಲ್ಡ್ ಕಥೆಯೊಂದಿಗೆ 'ಬಲರಾಮನ ದಿನಗಳು' ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿರುವ ಈ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಹೌದು, 'ಶುರು ಶುರು ...' ಎಂಬ ಈ ಹಾಡನ್ನು ಜಯಂತ ಕಾಯ್ಕಿಣಿ ಬರೆದಿದ್ದು ಸಂಚಿತ್ ಹೆಗಡೆ ಹಾಗೂ ಪುಣ್ಯ ಹಾಡಿದ್ದಾರೆ. 'ಕಲ್ಕಿ' ಸಿನಿಮಾ ಖ್ಯಾತಿಯ ಸಂತೋಷ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡನ್ನು ಟಿ ಸೀರಿಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಪದ್ಮಾವತಿ ಫಿಲ್ಮಸ್ ಬ್ಯಾನರ್‌ನಲ್ಲಿ ಪದ್ಮಾವತಿ ಜಯರಾಮ ಹಾಗೂ ಶ್ರೇಯಸ್ ನಿರ್ಮಿಸಿರುವ ಚಿತ್ರದ ನಾಯಕನಾಗಿ ವಿನೋದ್ ಪ್ರಭಾಕರ್ ನಾಯಕಿಯಾಗಿ ಪ್ರಿಯಾ ಆನಂದ ನಟಿಸಿದ್ದಾರೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಕೆ.ಎಂ. ಚೈತನ್ಯ ಮಾತನಾಡಿ, 'ಇಂದಿನಿಂದ ನಮ್ಮ ಚಿತ್ರದ ಪ್ರಮೋಷನ್ ಶುರು. ಇದು 'ಆ ದಿನಗಳು' ಚಿತ್ರದ ಭಾಗ 2 ಅಲ್ಲ. ಆದರೆ ಅದರಲ್ಲಿ ಇದ್ದ ಪಾತ್ರಗಳನ್ನು ಇಟ್ಟುಕೊಂಡು ಮಾಡಿರುವ ಕಾಲ್ಪನಿಕ ಕಥೆಯ ಚಿತ್ರ. 'ಜಿಗರ್‌ತಂಡ' ಚಿತ್ರದ ಮ್ಯೂಸಿಕ್ ನೋಡಿ ಸಂತೋಷ ಅವರ ಕೆಲಸ ಇಷ್ಟ ಆಗಿತ್ತು. ಅವರು ನಮ್ಮ ಸಿನಿಮಾಗೆ ಸಂಗೀತ ಮಾಡಲು ಒಪ್ಪಿದಾಗ ತುಂಬಾ ಖುಷಿ ಆಯ್ತು. ನಂಗೆ ನಿರ್ಮಾಪಕರು 'ಆ ದಿನಗಳು' ಪಾತ್ರಗಳನ್ನು ಇಟ್ಟುಕೊಂಡು ವಿನೋದ್ ಅವರಿಗೆ ಒಂದು ಸಿನಿಮಾ ಮಾಡಲು ಕೇಳಿದರು. ಆ ನಂತರ ಸಂಗೀತ ನಿರ್ದೇಶಕರಿಗಾಗಿ ಅವರೇ ಸೊಲ್ಯೂಷನ್ ಕೊಟ್ಟರು. ಇದರಲ್ಲಿ ತುಂಬಾ ಶೇಡ್ ಸಂಗೀತವಿದೆ. ಗ್ಯಾಂಗ್ ಸ್ಟರ್ ಚಿತ್ರದಲ್ಲಿ ಸಂಗೀತ ಅದ್ಭುತವಾಗಿ ಇರಲಿದೆ. ಅದ್ಬುತವಾದ ಈ ಟ್ಯೂನ್‌ಗೆ ಜಯಂತ ಸರ್ ಸುಂದರ ಸಾಹಿತ್ಯ ನೀಡಿದರು. ಸಿನಿಮಾದ ಎಲ್ಲಾ ಹಾಡುಗಳು ಅದ್ಭುತವಾಗಿ ಬಂದಿವೆ. ನಿರ್ಮಾಪಕರು ಶ್ರದ್ಧೆಯಿಂದ ಚಿತ್ರ ನಿರ್ಮಾಣ ಮಾಡಿದ್ದಾರೆ. ಇಂತಹ ಸಂಸ್ಥೆಗೆ ನಿಮ್ಮಗಳ ಸಹಕಾರ ತುಂಬಾ ಮುಖ್ಯ' ಎಂದರು.
ನಂತರ ಚಿತ್ರದ ನಿರ್ಮಾಪಕಿ ಪದ್ಮಾವತಿ ಜಯರಾಮ ಮಾತನಾಡಿ, 'ಈ ಸಿನಿಮಾ ಮಾಡಿದ ಖುಷಿ ಇದ್ದು ಮುಂದಿನ ದಿನಗಳಲ್ಲೂ ದೊಡ್ಡ ಸಿನಿಮಾ ಮಾಡುವ ಆಸೆ ಇದೆ. ಇಡೀ ಫ್ಯಾಮಿಲಿ ಕುಳಿತು ನೋಡುವಂತ ಸಿನಿಮಾ ಮಾಡಿದ್ದೇವೆ. ನಮಗೆ ಕಲಾವಿದರು, ತಂತ್ರಜ್ಞರು ತುಂಬಾ ಸಪೋರ್ಟ್ ಮಾಡಿದ್ದಾರೆ. ಈ ಚಿತ್ರಕ್ಕೆ ಸಂತೋಷ ನಾರಾಯಣನ್ ಸಂಗೀತ ನೀಡಿದ್ದು ಹಾಗೂ ಟಿ ಸೀರಿಸ್ ಸಹಕಾರ ಮರೆಯಲಾಗದು. ಇಡೀ ತಂಡ ಫ್ಯಾಮಿಲಿ ತರ ಕೆಲಸ ಮಾಡಿದ್ದೇವೆ' ಎನ್ನುವರು. ಚಿತ್ರದ ನಾಯಕ ವಿನೋದ್ ಪ್ರಭಾಕರ್, 'ನನ್ನ ಕೆರಿಯರ್‌ನಲ್ಲಿ ದೊಡ್ಡ ಮೊತ್ತಕ್ಕೆ ಟಿ ಸೀರಿಸ್ ನವರು ಆಡಿಯೋ ರೈಟ್ಸ್ ತಗೊಂಡಿದ್ದಾರೆ. ಸಿನಿಮಾ ಬಗ್ಗೆ ಹೆಚ್ಚಾಗಿ ಮಾತಾಡಲ್ಲ. 'ಮಾದೇವ' ನನ್ನ ವೃತ್ತಿ ಜೀವನಕ್ಕೆ ಒಂದು ಮೈಲುಗಲ್ಲು ಆದ್ರೆ 'ಬಲರಾಮನ ದಿನಗಳು' ಇನ್ನೊಂದು ಮೈಲಿಗಲ್ಲು ಸೃಷ್ಟಿಸುವ ಸಿನಿಮಾ ಆಗುವ ನೀರೀಕ್ಷೆ ಇದೆ. ಇದೊಂದು ಕ್ಲಾಸ್ ಕಲ್ಟ್ ಸಿನಿಮಾ ಎಂದರೆ ತಪ್ಪಾಗಲ್ಲ. ನಮ್ಮ ಚಿತ್ರದ ದೊಡ್ಡ ಪಿಲ್ಲರ್ ಸಂಗೀತ ನಿರ್ದೇಶಕರು. 'ಶುರು ಶುರು ...' ಸಾಂಗ್‌ಗೆ ಲೈವ್ ಸಂಗೀತ ನೀಡಲಾಗಿದೆ. ಪ್ರಿಯಾ ಅವರ ಜೊತೆ ಕಂಪರ್ಟ್ ಜೂನ್‌ನಲ್ಲಿ ನಟಿಸಿದ್ದೇನೆ' ಎಂದು ಹೇಳಿದರು. 'ಸಂತೋಷ ಅವರ ಜೊತೆ ಕೆಲಸ ಮಾಡುವ ಆಸೆ ಇತ್ತು. ಅದು ಕನ್ನಡ ಸಿನಿಮಾದಿಂದ ಇಡೇರಿದೆ. ವಿನೋದ್ ಜೊತೆ ಕೆಲಸ ಮಾಡುವುದು ಖುಷಿ ಆಯ್ತು. ಅಪ್ಪುಗಾಗಿ ನಾನು ಕನ್ನಡ ಮಾತನಾಡಲು ಕಲಿಯುತ್ತೆನೆ' ಎಂದರು ಚಿತ್ರದ ನಾಯಕಿ ಪ್ರಿಯಾ ಆನಂದ್.
ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಸಂತೋಷ ನಾರಾಯಣನ್ 'ಇದು ನಂಗೆ ಒಳ್ಳೆಯ ಅವಕಾಶ. ಕನ್ನಡ ಇಂಡಸ್ಟ್ರಿ ಇಂದು ವರ್ಡ್‌ನಲ್ಲಿ ದೊಡ್ಡ ಹೆಸರು ಮಾಡಿತ್ತಿದೆ. ಚಿತ್ರಕ್ಕಾಗಿ ಒಳ್ಳೆಯ ಪ್ರಯತ್ನ ಮಾಡಿದ್ದೇನೆ. ಇದು ಒಳ್ಳೆಯ ಸಿನಿಮಾ ಆಗುವ ಭರವಸೆ ಇದೆ. ನಾನು ಸಿನಿಮಾ ನೋಡಿದ್ದು ಕನ್ನಡದಲ್ಲಿ ಹೊಸ ಅಧ್ಯಾಯ ಬರೆಯುತ್ತೆ ಎನ್ನಬಹುದು. ಸಿನಿಮಾ ನಂಗೆ ಟಚ್ ಆಯ್ತು. ಚೈತನ್ಯ ಗ್ಯಾಂಗ್ ಸ್ಟರ್ ಸಿನಿಮಾ ಮಾಡುವ ಒಳ್ಳೆಯ ನಿರ್ದೇಶಕ ಎನ್ನಬಹುದು. ಟಾಪ್ 10ರ ಸಿನಿಮಾಗಳ ಲಿಸ್ಟ್‌ನಲ್ಲಿ 'ಬಲರಾಮನ ದಿನಗಳು' ಇರುತ್ತದೆ ಎಂಬ ವಿಶ್ವಾಸ ನನಗಿದೆ' ಎಂದು ಹೇಳಿದರು. ಹಾಡಿಗೆ ಸಾಹಿತ್ಯ ಬರೆದಿರುವ ಜಯಂತ ಕಾಯ್ಕಿಣಿ ಮಾತನಾಡಿ, 'ಚೈತನ್ಯರಂತ ಟ್ಯಾಲೆಂಟ್ ಇರುವವರು ಸಿನಿಮಾ ಮಾಡತಾ ಇರಬೇಕು. ಈ ಚಿತ್ರದ ಪಾರ್ಟ್ ಆಗಿದ್ದು ಖುಷಿ ಇದೆ. ಕೊನೆಗೂ ಸಂತೋಷ ಅವರ ಸಂಗೀತಕ್ಕೆ ಸಾಹಿತ್ಯ ಬರೆದೆ. ಇದರಲ್ಲಿ ಕ್ರಾಸ್ ವರ್ಡ್ ಕ್ವಾಲಿಟಿ ಇದೆ. ತುಂಬಾ ಇಷ್ಟಪಟ್ಟು ಈ ಹಾಡು ಬರೆದಿದ್ದೇನೆ' ಎಂದರು. ವೇದಿಕೆಯಲ್ಲಿ ನಟರಾದ ವಿನಯ್ ಗೌಡ, ಅರುಣ್, ಅಭಯ್ ಪುನೀತ್, ಟಿ ಸೀರಿಸ್‌ನ ರಾಜು ಹಾಗೂ ನಿರ್ಮಾಪಕ ಶ್ರೇಯಸ್ ತಮ್ಮ ಅನುಭವ ಹಂಚಿಕೊಂಡರು. ಅಂದಂಗೆ ಬಲರಾಮನ ದಿನಗಳು 1980ರ ಕಾಲಘಟ್ಟದ ಭೂಗತ ಲೋಕದ ಕಥೆ ಒಳಗೊಂಡ ಸಿನಿಮಾ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 