ಥಿಯೇಟರ್‌ನಲ್ಲಿ ಶುರುವಾಯ್ತು 'ಮ್ಯಾಂಗೋ ಪಚ್ಚ'ನ ಹವಾ!
The atmosphere of 'Mango Pachcha' has begun in the theater!
ಇಂದು 90 ಮತ್ತು 2010ರ ಕಾಲಘಟ್ಟದ ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಸಿನಿಮಾ ತೆರೆಗೆಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ಬಹುನೀರೀಕ್ಷಿತ ಆಕ್ಷನ್-ಕ್ರೈಂ ಥ್ರಿಲ್ಲರ್ 'ಮ್ಯಾಂಗೋ ಪಚ್ಚ' ಸಿನಿಮಾ ಇಂದು (ಜೂ.5) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈಗಾಗಲೇ ಟೀಸರ್, ಟ್ರೇಲರ್ ನಿಂದ ಗಮನ ಸೆಳೆದಿರುವ ಮ್ಯಾಂಗೋ ಪಚ್ಚ ಚಿತ್ರವನ್ನು ವಿವೇಕ್ ನಿರ್ದೇಶನ ಮಾಡಿದ್ದಾರೆ. ಮೈಸೂರು ಹಿನ್ನೆಲೆಯ ಈ ಚಿತ್ರವನ್ನು 'ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋಸ್' ಮತ್ತು 'ಕೆಆರ್‌ಜಿ ಸ್ಟುಡಿಯೋಸ್' ಬ್ಯಾನರ್ ಅಡಿಯಲ್ಲಿ ಪ್ರಿಯಾ ಸುದೀಪ್, ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ.
ಸಂಚಿತ್ ಸಂಜೀವ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಟ್ರೇಲರ್‌ನಲ್ಲಿ ಸಂಚಿತ್ ಸಂಜೀವ್ ಹೊಸ ಭರವಸೆ ಮೂಡಿಸಿದ್ದು, ಎಲ್ಲ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆಕ್ರೋಶ, ಪ್ರೀತಿ, ಸ್ನೇಹ ಹೀಗೆ ಎಲ್ಲ ಭಾವಗಳಲ್ಲೂ ಸಂಚಿತ್ ಇನ್ವಾಲ್ವ್ ಆಗಿದ್ದಾರೆ. ಅಷ್ಟೆ ಗಮನ ಸೆಳೆಯುತ್ತಾರೆ. ಚಿತ್ರದ ನಾಯಕಿಯಾಗಿ ಕಾಜಲ್ ಕುಂದರ್ ಬಣ್ಣ ಹಚ್ಚಿದ್ದಾರೆ. ಮಾಲಾಶ್ರೀ ಸೇರಿದಂತೆ ಮಯೂರ್ ಪಟೇಲ್, ಕಾಜಲ್ ಕುಂದರ್, ಉಗ್ರಂ ಮಂಜು ಹಾಗೂ ರಾಕ್ ಲೈನ್ ವೆಂಕಟೇಶ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಭಾವನಾ ರಾಮಣ್ಣ ಇಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ಮೈಸೂರಿನಲ್ಲಿ ನಡೀತಿರೋ ಗಾಂಜಾ ದಂಧೆಯನ್ನ ಮಟ್ಟ ಹಾಕಲು ಮುಂದಾಗುತ್ತಾರೆ.
ಮುಂದೇನಾಗುತ್ತದೆ ಅನ್ನೋದು ಚಿತ್ರದಲ್ಲಿ ತಿಳಿಯುತ್ತದೆ. ಆದರೆ, ಸದ್ಯಕ್ಕೆ ಚಿತ್ರದ ಟ್ರೇಲರ್ ಅಲ್ಲಿ ಒಂದಷ್ಟು ವಿಷಯ ರೀವೀಲ್ ಆಗಿದೆ. ಈ ಮೂಲಕ ಸಿನಿಮಾದ ಬಗ್ಗೆ ಒಂದಷ್ಟು ಕುತೂಹಲ ಹುಟ್ಟಿಕೊಂಡಿದೆ.ಮ್ಯಾಂಗೋ ಪಚ್ಚ ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣವಿದೆ. ನೈಜ ಘಟನೆಯಾಧಾರಿತ 'ಮ್ಯಾಂಗೋ ಪಚ್ಚ' ಸಿನಿಮಾದ ಕಥೆ ಮೈಸೂರಿನಲ್ಲಿ ಸಾಗಲಿದ್ದು, 90ರ ದಶಕ ಮತ್ತು 2010ರಲ್ಲಿ ಮೈಸೂರಿನಲ್ಲಿ ನಡೆದ ವಿವಿಧ ಘಟನೆಗಳ ಕ್ರೈಂ, ಥ್ರಿಲ್ಲರ್ ನಲ್ಲಿ ಕಥೆ ಸಾಗುತ್ತದೆ. ಸಂಚಿತ್ ಈ ಚಿತ್ರದಲ್ಲಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಚೊಚ್ಚಲ ಸಿನಿಮಾದಲ್ಲೇ ಪ್ರಾಮಿಸಿಂಗ್ ಕ್ಯಾರೆಕ್ಟರ್ ಮಾಡ್ತಿದ್ದಾರೆ ಎನಿಸುತ್ತಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 