ದಿ.ಶಿವಶಂಕರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ ನುಡಿನಮನ ಕಾರ್ಯಕ್ರಮ
The.Sivashankar Swamiji's speech on the background of gender equality
ರಾಯಬಾಗ 29: ತಾಲೂಕಿನ ಬಾವನಸೌಂದತ್ತಿ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿಗಳು ಒಬ್ಬ ಸನ್ಯಾಸಿಯಾಗಿ ಜ್ಞಾನವನ್ನು ಎಲ್ಲರಿಗೂ ಹಂಚಿ ಹೋಗಿದ್ದಾರೆ. ನಾವುಗಳು ಆ ಜ್ಞಾನವನ್ನು ಬಳಸಿಕೊಂಡರೇ, ಮನೆ, ಓಣಿಗಳು ಶುದ್ಧವಾಗುತ್ತವೆ ಎಂದು ನಿಡಸೋಶಿಯ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಓಂಕಾರ ಆಶ್ರಮ ಮಠದ ದಿ.ಶಿವಶಂಕರ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆ ನುಡಿನಮನ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ಸರ್ವಧರ್ಮದ ಸಮಾಜದ ಸ್ವಾಮೀಜಿಗಳಾಗಿ ಓಂಕಾರ ಆಶ್ರಮ ಶ್ರೀಗಳಾಗಿ ಹೊರ ಹೊಮ್ಮಿದ್ದಾರೆ. ಅವರ ಹಾಕಿಕೊಟ್ಟ ಮಾರ್ಗ, ಸಮಾಜಕ್ಕೆ ನೀಡಿರುವ ಸಂದೇಶಗಳನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಕರೆ ನೀಡಿದರು. ನಂದಿಕುರಳಿಯ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿಗಳು ಮಾತನಾಡಿ, ಶಿವಶಂಕರ ಸ್ವಾಮೀಜಿಗಳು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ಆದರೆ ಅವರು ಹಾಕಿಕೊಟ್ಟ ಮಾರ್ಗದರ್ಶನ ಇಂದು ನಮ್ಮಲ್ಲರಿಗೆ ದಾರೀದೀಪಾಗಿದೆ. ಸೌಂದತ್ತಿ ಗ್ರಾಮ ಅಷ್ಟೇ ಅಲ್ಲ ಸುತ್ತಮುತ್ತಲಿನ ಗ್ರಾಮದ ಭಕ್ತಾಧಿಗಳು ಆಗಮಿಸಿ ಶ್ರೀಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸವಾಗಿದೆ ಎಂದರು. ಲಿಂಗೈಕ್ಯ .ಶ್ರೀ ಶಿವಶಂಕರ ಸ್ವಾಮೀಜಿ ಅವರ ಪಾದುಕೆಗಳ ಪೂಜೆ ಅಭಿಷೇಕ ನಡೆಯಿತು. ಸಮಾಧಿ ಸ್ಥಳಕ್ಕೆ ರುದ್ರಾಭಿಷೇಕ ನಡೆಯಿತು. ಭಜನೆ, ಮಹಾಪ್ರಸಾದ ಜರುಗಿತು. ಮಹಾದೇವ ದೇವಸ್ಥಾನದ ಕಮಿಟಿ ಸದಸ್ಯರು ಹಾಗೂ ಸದ್ಬಕ್ತರು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಬಸವಲಿಂಗ ಮಹಾಸ್ವಾಮಿಜಿ, ಜ್ಞಾನಾನಂದ ಸ್ವಾಮೀಜಿ, ಸಂಗಮೇಶ್ವರ ಸ್ವಾಮೀಜಿ, ಮರುಘರಾಜೇಂದ್ರ ಮಹಾಸ್ವಾಮಿ, ಶಿವಲಿಂಗೇಶ್ವರ ಸ್ವಾಮೀಜಿ, ಶೃದ್ಧಾನಂದ ಮಹಾಸ್ವಾಮೀಜಿ, ಅಭಿನವ ಬ್ರಹ್ಮಾನಂದ ಮಹಾಸ್ವಾಮಿಜಿ, ಯತೀಶ್ವರಾನಂದ ಮಹಾಸ್ವಾಮಿಜಿ, ಕೃಪಾನಂದ ಮಹಾಸ್ವಾಮೀಜಿ, ಮಹೇಶ್ವರಾನಂದ ಮಹಾಸ್ವಾಮಿಜಿ, ಬಸವರಾಜ ಮಹಾಸ್ವಾಮಿಜಿ, ಪ್ರಾಣಲಿಂಗ ಮಹಾಸ್ವಾಮೀಜಿ, ಕುಮಾರ ಸ್ವಾಮೀಜಿ, ಮಾತೋಶ್ರೀಗಳಾದ ನಾಗಲಾಂಬಿಕಾ ದೇವಿ, ಚಿದಾನಂದ ಮಹಾಸ್ವಾಮೀಜಿ, ನಾಗಲಿಂಗ ಸ್ವಾಮೀಜಿ, ಐ ಆರ್ ಮಠಪತಿ, ನಂದಿಕುರಳಿಯ ಶ್ರೀಶೈಲ ಶ್ರೀಗಳು, ಮಾರುತಿ ಶತಣರು, ಐ ಡಿ ಪಾಟೀಲ ಇದ್ದರು. ಓಂಕಾರಾಶ್ರಮ ಮಠದ ಉತ್ತರಾಧಿಕಾರಿ ಮಾತೋಶ್ರೀ ಬ್ರಮರಾಂಭಿಕಾದೇವಿ ವಂದಿಸಿದರು. ಅನೀಲ ಬೆಳಗಲಿ ಸ್ವಾಗತಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 