ಆಳಂದಿಗೆ ರವಾನೆಯಾದ ಅಂಕಲಿಯ ಸರ್ಕಾರ್ ಕುಟುಂಬದ ಮಾನದ ಕುದುರೆ
The Sarkar family's prized horse, which was sent to the slave
ಲೋಕದರ್ಶನ ವರದಿ
ಮಾಂಜರಿ 27 : ಸಮೀಪದ ಅಂಕಲಿ ಗ್ರಾಮದ ಅಂಕಲಿಕರ ಕಿತೋಳೆ ಸರಕಾರ ಕುಟುಂಬದವರ ಮಾನದ ಕುದುರೆಯು ದಿನಾಂಕ ಜುಲೈ 25 ರಂದು ಜರುಗಲಿರುವ ಪಂಡರಪೂರದ ಆಷಾಢ ಏಕಾದಶಿ ಅಂಗವಾಗಿ ಅಂಕಲಿಯಿಂದ ಮಹಾರಾಷದ ಸುಕೇತ್ರ ದೇವು ಅಳಂದಿಗೆ ಶನಿವಾರ 8 ರಂದು ಮುಂಜಾನೆ ರವಾನೆಯಾಯಿತು. ಪ್ರತಿ ವರ್ಷ ಆಷಾಢ ಮಾಸದ ಏಕಾದಶಿ ದಿನದಂದು ನಡೆಯುವ ಪಂಡರಪೂರದ ವಿಠಲನ ಜಾತ್ರೆಯಲ್ಲಿ ಅಂಕಲಿ ಸರಕಾರರ ಮಾನದ ಕುದುರೆಗೆ ಮಹತ್ವದ ಸ್ಥಾನ ನೀಡುತ್ತಾರೆ. ಈ ವರ್ಷ ಜುಲೈ 25 ರಂದು ಪಂಡರಪೂರದಲ್ಲಿ ನಡೆಯಲಿರುವ ಆಷಾಢ ಏಕಾದಶಿ ನಿಮಿತ್ಯ ಸುಕ್ಷೇತ್ರ. ದೇವು ಆಳಂದಿಯಿಂದ ನಡೆಯಲಿರುವ ಭವ್ಯ ಪಾದಯಾತ್ರೆಯಲ್ಲಿ ಅಂಕಲಿ ಸರಕಾರರ ಈ ಮಾನದ ಕುದುರೆ ಪಾಲ್ಗೊಳ್ಳಲಿದೆ. ಪಾರಂಭದಲ್ಲಿ ಇಂದು ಶನಿವಾರ ಮುಂಜಾನೆ ಅಂಕಲಿ ಸರಕಾರ ಉರ್ಜಿತಶಿಂಹ ರಾಜೆ ಶೀತೋಳೆ ಸರಕಾರ ಮತ್ತು ಮಹದಜಿರಾಜೆ ಶೀತೋಳೆ ಸರಕಾರ ಚೀಕೋಡಿ ಸದಲಗಾ ಶಾಸಕ ಗಣೇಶ್ ಹುಕ್ಕೇರಿ ಮಾನದ ಕುದುರೆಯ ಪೂಜೆ ಸಲ್ಲಿಸಿದನಂತರ ಗ್ರಾಮದಲ್ಲಿ ಮೆರವಣಿಗೆ ಮಾಡಿ ಬೀಳ್ಕೊಟ್ಟರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 