ಮಧ್ಯಪ್ರಾಚ್ಯದ ಶಾಂತಿ ಯೋಜನೆ; ಟ್ರಂಪ್ ಶಿಫಾರಸನ್ನು ಪರಿಶೀಲಿಸಲಾಗುತ್ತಿದೆ- ಅರಬ್

ಕೈರೋ, ಜ 30 ಮಧ್ಯಪ್ರಾಚ್ಯ ಭಾಗಗಳ ಶಾಂತಿಗೆ ಸಂಬಂಧಿಸಿದಂತೆ ಅಮೆರಿಕ ನೀಡಿರುವ ದೃಷ್ಟಿಕೋನವನ್ನು ಪ್ಯಾನ್ ಅರಬ್ ಸಂಘಟನೆ ಎಚ್ಚರಿಕೆಯಿಂದ ಪರಿಶೀಲಿಸುತ್ತಿದೆ ಎಂದು ಅರಬ್ ಲೀಗ್ ಪ್ರಧಾನ ಕಾರ್ಯದರ್ಶಿ ಅಹಮದ್ ಅಬೌಲ್ ಗೈಟ್ ಹೇಳಿದ್ದಾರೆ. 

ಪ್ರದೇಶದಲ್ಲಿ ಶಾಂತಿ ಕಾಪಾಡಲು ತಾವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧ. ಆದರೆ ಅಮೆರಿಕದ ಶಾಂತಿ ಯೋಜನೆಯಲ್ಲಿ, ಅವರ ನಾಡಿನಲ್ಲಿ ಪಾಲೆಸ್ತೇನಿಯರಿಗೆ ಕಾನೂನುಬದ್ಧ ಹಕ್ಕುಗಳ ಉಲ್ಲಂಘನೆಯಾಗಿರುವುದು ತಿಳಿದುಬಂದಿದೆ ಎಂದಿದ್ದಾರೆ. 

ಪಾಲೆಸ್ತೇನಿಯರು ಮತ್ತು ಇಸ್ರೇಲಿಯರ ನಡುವೆ ನ್ಯಾಯಯುತ ಹಾಗೂ ಶಾಶ್ವತ ಶಾಂತಿಯ ವಾತಾವರಣ ನಿರ್ಮಿಸುವುದು ತಮ್ಮ ಪ್ರಯತ್ನದ ಮೂಲ ಉದ್ದೇಶ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಳು ಈ ಉದ್ದೇಶಗಳಿಗೆ ಸಂಪೂರ್ಣ ಬದ್ಧವಾಗಿಲ್ಲ ಎಂದರು. 

ಯಾವುದೇ ಶಾಂತಿ ಯೋಜನೆ ಹೇಗೆ ಅಂತಾರಾಷ್ಟ್ರೀಯ ಕಾನೂನು ಮತ್ತು ನ್ಯಾಯದೊಂದಿಗೆ ನಿರಂತರವಾಗಿರುತ್ತದೆ ಎಂಬುದು ಅದರ ಯಶಸ್ಸಿಗೆ ಕಾರಣವಾಗುತ್ತದೆ. ಇದರಲ್ಲಿ ಪಕ್ಷಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದರು. 

ಟ್ರಂಪ್ ನೀಡಿರುವ ಶಾಂತಿ ಯೋಜನೆಯ ಶಿಫಾರಸಿಗೆ ಪ್ಯಾಲೆಸ್ತೇನಿಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಮೊದಲಿನಿಂದಲೂ ಇಸ್ರೇಲ್ ಪರವಾಗಿದ್ದು, ಅವರಿಗೆ ನೆರವಾಗುವಂತಹ ನೀತಿಗಳನ್ನೇ ಜಾರಿಗೆ ತಂದಿದ್ದಾರೆ. ಆದ್ದರಿಂದ ಈ ಯೋಜನೆ ಕೂಡ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ.