ಮುಖ್ಯಮಂತ್ರಿ ಅವರ ಹೇಳಿಕೆಯನ್ನು ತಿರುಚಲಾಗಿದೆ : ಸಂಸದೆ ಶೋಭಾ ಕರಂದ್ಲಾಜೆ

  ಉಡುಪಿ,ನ 04:     ಮುಖ್ಯಮಂತ್ರಿ ಬಿಎಸ್ ಯಡಿ ಯೂರಪ್ಪ ಅವರು ವಿಡಿಯೋದಲ್ಲಿ ಅನರ್ಹ ಶಾಸಕರಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದಿದ್ದಾರೆ.ಅದನ್ನು ತಿರುಚಿ ದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹರ ಶಾಸಕರು ಯಾವುದೇ ಬಂಧನ ದಲ್ಲಿ ಇಲ್ಲ.ಅವರ ಕ್ಷೇತ್ರದಲ್ಲಿ ಅವರು ಓಡಾಡುತ್ತಿದ್ದಾರೆ.ಬಹುಮತದ ಆಧಾರ ದಲ್ಲಿ ನಮ್ಮ ಸರ್ಕಾರ ರಚನೆಯಾಗಿದೆ.ಇದರಲ್ಲಿ ತಪ್ಪು,ಅನ್ಯಾ ಯದ ಪ್ರಶ್ನೆ ಬರಲ್ಲ.ಅಷ್ಟಕ್ಕೂ ಯಡಿಯೂರಪ್ಪ ಅವರು ಹೇಳಿರುವುದರಲ್ಲಿ ತಪ್ಪೇನೂ ಇಲ್ಲ? ಎಂದರು.     17 ಜನ ಶಾಸಕರು ಅವರು ಇಚ್ಚೆಯನುಸಾರ ಯಾವುದಾದರೂ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ.ಅನ ರ್ಹರನ್ನು ಬಿಜೆಪಿಗೆ ಸೇರಿಸಲು ಪ್ರಯತ್ನ ಪಡುತ್ತಿದ್ದೇವೆ.ಅವರು ಖಂಡಿತಾ ಬಿಜೆಪಿಗೆ ಬರಬಹುದು, ಬಿಜೆಪಿಯಿಂದ ಸ್ಪರ್ಧಿಸಬಹುದು. ಸಿದ್ದರಾಮಯ್ಯ ಅವರು ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ನಿರಂ ತರ ಪಕ್ಷದ ನಾಯಕರಿಗೆ ಬೆದರಿಕೆ ಹಾಕಿ ರಾಜಕೀಯ ಅಧಿಕಾರ ಪಡೆದುಕೊಂಡಿದ್ದಾರೆ. ಮಾಡಿದವರು ಎಂದು ಆರೋಪಿಸಿದರು.    ಜೆಡಿಎಸ್ ಪಕ್ಷವನ್ನು ತೊರೆದ ಮೇಲೆ ಸಿದ್ದರಾಮಯ್ಯ ನಿರಂತರವಾಗಿ  ಕಾಂಗ್ರೆಸ್ ನಾಯಕರನ್ನು ಬ್ಲ್ಯಕ್ ಮೇಲ್ ಮಾಡುತ್ತಲೇ ಬಂದಿದ್ದಾರೆ. ಬ್ಲ್ಯಕ್ ಮೇಲ್ ಮಾಡಿಕೊಂಡೇ ಐದು ವರ್ಷ ಮುಖ್ಯ ಮಂತ್ರಿ ಆಗಿದ್ದರು, ಈಗ ವಿಪಕ್ಷ ನಾಯಕ ನಾಗಿದ್ದೂ ಬ್ಲ್ಯಕ್ ಮೇಲ್ ಮಾಡಿಕೊಂಡಿದ್ದಾರೆ.ಸಿದ್ದರಾಮ ಯ್ಯನಿಂದ ಯಾರೂ ಪಾಠ ಕಲಿಯುವ ಅಗತ್ಯ ವಿಲ್ಲ.ಸಿದ್ದರಾ ಮಯ್ಯ ಅವರ ರಾಜಕೀಯ ಕೆಟ್ಟ ಪಾಠ, ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶ ಆಗುತ್ತದೆ ಎಂದು ಅವರು ವ್ಯಂಗ್ಯವಾಡಿದರು.