ಆಫ್ಘಾನಿಸ್ತಾನದ ಪೂರ್ವ ಪ್ರಾಂತ್ಯದಲ್ಲಿ ಹತ್ತು ಉಗ್ರರ ಹತ್ಯೆ

 ಜಲಾಲಬಾದ್  ಜ 27:                  ಆಫ್ಘಾನಿಸ್ತಾನದ ಪೂರ್ವ ಭಾಗದ ನಂಗರ್ ಹಾರ್  ಪ್ರಾಂತ್ಯದಲ್ಲಿ ಶಿರ್ಜಾದ್ ಜಿಲ್ಲೆಯಲ್ಲಿ  ಭದ್ರತಾ ಪಡೆಗಳು ಹತ್ತು ಸಶಸ್ತ್ರ ಉಗ್ರರನ್ನು ಹತ್ಯೆ ಮಾಡಿದ್ದು, ಉಗ್ರ ಹಿಡಿತದಲ್ಲಿದ್ದ 17 ಗ್ರಾಮಗಳನ್ನು ವಶಪಡಿಸಿಕೊಂಡಿವೆ ಎಂದು ಸೇನಾ ಹೇಳಿಕೆ ಸೋಮವಾರ ತಿಳಿಸಿದೆ.

ಎರಡು ದಿನಗಳ ಹಿಂದೆ ಜಿಲ್ಲೆಯ ಕೆಲ ಭಾಗಗಳಲ್ಲಿ  ಆರಂಭಿಸಲಾಗಿದ್ದ ಉಗ್ರರನ್ನು ಹೊರದಬ್ಬುವ ಕಾರ್ಯಾಚರಣೆ ಮುಂದುವರೆದಿದ್ದು, ಎಲ್ಲ ಉಗ್ರರನ್ನು ಹೊರದಬ್ಬುವವರೆಗೆ ಮತ್ತು ಭದ್ರತಾ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಹತರಾದ ಸಶಸ್ತ್ರ ಉಗ್ರರು ತಾಲಿಬಾನ್ ಸದಸ್ಯರೇ ಅಥವಾ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ನಿಷ್ಠರೇ ಎಂಬುದು ಇನ್ನೂ ತಿಳಿದು ಬಂದಿಲ್ಲ. ಕಾರ್ಯಾಚರಣೆ ವೇಳೆ ನಡೆದ ಸಂಘರ್ಷದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಗಾಯಗೊಂಡಿಲ್ಲ ಎಂದು ಹೇಳಿಕೆ ತಿಳಿಸಿದೆ. 

ಕಾಬುಲ್ ನಿಂದ ಪೂರ್ವಕ್ಕೆ 120 ಕಿ.ಮೀ ದೂರದಲ್ಲಿರುವ ಜಲಾಲಬಾದ್ ರಾಜಧಾನಿ ನಂಗರ್‌ಹಾರ್ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಕಾರ್ಯನಿರತವಾಗಿರುವ ತಾಲಿಬಾನ್  ಅಥವಾ ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳು ಈ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.