ತುರ್ತು ಪರಿಸ್ಥಿತಿ ಕುರಿತು ದೂರದರ್ಶನ 'ವೆಬ್ ಸರಣಿ' ಆರಂಭಿಸಬೇಕು; ಬಿಜೆಪಿ

ನವದೆಹಲಿ,  ಜೂನ್ 28: ನಲವತ್ತೈದು  ವರ್ಷಗಳ  ಹಿಂದೆ   ಅಂದಿನ  ಪ್ರಧಾನಿ  ದಿ. ಇಂದಿರಾಗಾಂಧಿ  ದೇಶದ ಮೇರೆ  ಹೇರಿದ್ದ   ತುರ್ತು  ಪರಿಸ್ಥಿತಿಯ ದಿನಗಳ    ಬಗ್ಗೆ    ದೂರದರ್ಶನ     ‘ವೆಬ್ ಸಿರಿಸ್’   ನಿರ್ಮಿಸಬೇಕು  ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚಾಗ್  ಆಗ್ರಹಿಸಿದ್ದಾರೆ.  ಈ ಮೂಲಕ ಇಂದಿನ ಹೊಸ  ಪೀಳಿಗೆಗೆ   ತುರ್ತು ಪರಿಸ್ಥಿತಿಯ  ಕೆಟ್ಟ  ದಿನಗಳು  ಎಷ್ಟು  ಭೀಕರವಾಗಿದ್ದವು  ಎಂಬುದನ್ನು  ಮನವರಿಕೆಯಾಗಲಿದೆ. ಈ  ವಿಷಯ ಕುರಿತು    ಸದ್ಯದಲ್ಲೇ   ಕೇಂದ್ರ  ವಾರ್ತಾ ಮತ್ತು  ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್  ಅವರನ್ನು  ಭೇಟಿ  ಮಾಡಿ  ಚರ್ಚಿಸುವುದಾಗಿ   ಅವರು ಹೇಳಿದ್ದಾರೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಈಗ  ನಾಲ್ಕು ದಶಕಗಳು  ಕಳೆದು ಹೋಗಿವೆ.  ತುರ್ತು ಪರಿಸ್ಥಿತಿ ಸಂದರ್ಭದಲ್ಲಿ  ಕಾಂಗ್ರೆಸ್  ಪಕ್ಷದ  ಮಿತಿ ಮೀರಿದ  ದುಷ್ಕೃತ್ಯಗಳ ಕುರಿತು   ಇಂದಿನ ಪೀಳಿಗೆಗೆ  ತಿಳಿದುಕೊಳ್ಳುವ  ಆಗತ್ಯವಿದೆ   ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತುರ್ತು ಪರಿಸ್ಥಿತಿ ಕುರಿತ  ಸಾಕ್ಷ್ಯಚಿತ್ರಗಳನ್ನು   ಸರ್ಕಾರ ಮಾಧ್ಯಮಗಳಿಗೆ  ಬಿಡುಗಡೆ ಗೊಳಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ.ಪಬ್ಲಿಕ್  ಪಾಲಿಸಿ  ರಿಸರ್ಚ್  ಸೆಂಟರ್  (ಪಿಪಿಆರ್‌ಸಿ) ನಿರ್ದೇಶಕ ಸುಮಿತ್ ಭಾಸಿನ್ ಕೂಡ ಇದೇ  ರೀತಿಯ ಬೇಡಿಕೆ ಮುಂದಿರಿಸಿದ್ದಾರೆ.   ತುರ್ತು  ಪರಿಸ್ಥಿತಿ  ಸಮಯದಲ್ಲಿ  ಸ್ವಾತಂತ್ರ್ಯವನ್ನು  ಹೇಗೆ ಹತ್ತಿಕ್ಕಲಾಗಿತ್ತು  ಎಂಬುದು  ಹೊಸ ಪೀಳಿಗೆಗೆ   ಮನವರಿಕೆಯಾಗಬೇಕಿದೆ. ಹಾಗಾಗಿ  ದೂರದರ್ಶನ ವೆಬ್ ಸರಣಿ  ನಿರ್ಮಿಸಬೇಕು   ಅವರು   ಅವರು ಆಗ್ರಹಿಸಿದ್ದಾರೆ.