ರೈತನ ಕಣ್ಣಲ್ಲಿ ನೀರು, ಕಾಂಗ್ರೆಸ್ ಸರ್ಕಾರಕ್ಕೆ ತೊಂದರೆ : ಮ್ಯಾಗೇರಿ
Tears in farmers' eyes spell trouble for the Congress government: Mageri
ಶಿಗ್ಗಾವಿ 20: ರೈತನ ಕಣ್ಣಲ್ಲಿ ನೀರು ಬಂದರೆ. ಕಾಂಗ್ರೆಸ್ ಸರ್ಕಾರಕ್ಕೆ ಬಲು ತೊಂದರೆ. ರೈತ ಉಳಿದರೆ ಮಾತ್ರ ನಿಮ್ಮ ಅಧಿಕಾರ ಮತ್ತು ಸರಕಾರ ಉಳಿಯಲು ಸಾಧ್ಯ ಎಂದು ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೂರು ತಿಂಗಳಿಂದ ಕೈಕೊಟ್ಟ ಮಳೆ ರೈತನ ಮುಖದ ಮೇಲಿನ ಕಳೆ ನುಂಗಿದೆ ಸಾಲ ಸೂಲಾ ಮಾಡಿ ಮಳೆ ಮತ್ತು ಇಳೆಯನ್ನು ನಂಬಿದ ಅನ್ನದಾತ ಬಿತ್ತಿ ಹುಟ್ಟಿದ ಬೆಳೆ ಮಳೆ ಇಲ್ಲದೆ ಕಣ್ಣೆದುರಿಗೆ ಒಣಗಿ ಹೋಗುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾನೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಇದನ್ನು ಕಂಡು ಕಾಣದಂತೆ ತಮ್ಮ ಅಧಿಕಾರ ಮಂತ್ರಿ ಸ್ಥಾನ ಉಳಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಹೊರತು ರೈತರು ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೆ ಕಣ್ಮುಚ್ಚಿ ಕುಳಿತ ಸರ್ಕಾರಕ್ಕೆ ರೈತರು ಕಣ್ಣೀರಿನೊಂದಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೃಷಿ ಸಚಿವರೆ ಇಲ್ಲದ ಸರ್ಕಾರ ಇದಾಗಿದೆ. ಕೃಷಿ ಅಧಿಕಾರಿಗಳು ಕಂದಾಯ ಅಧಿಕಾರಿಗಳಾದರೂ ತಕ್ಷಣ ನಾಶ ಹೊಂದಿದ ಬೆಳೆಯನ್ನು ಸಮೀಕ್ಷೆ ಮಾಡಿ ವರದಿ ಮಾಡಬಹುದಿತ್ತು ರೈತರಿಗೆ ಸಾಂತ್ವನ ಹೇಳುವುದನ್ನು ಬಿಟ್ಟು ಕಾಲಹರಣ ಮಾಡುತ್ತಿರುವುದು ವಿಷಾದ ಸಂಗತಿ ಎಂದರು. ಸ್ವತಹ ಮುಖ್ಯಮಂತ್ರಿಗಳೇ ನೇರವಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು, ರೈತರ ರಾಷ್ಟ್ರೀಕೃತ ಬ್ಯಾಂಕು ಹಾಗೂ ಸಹಕಾರಿ ಸಂಘಗಳಲ್ಲಿರುವ ಬೆಳೆ ಸಾಲ ಮನ್ನಾ ಮಾಡಬೇಕು. ಬರಗಾಲವೆಂದು ಹಾವೇರಿ ಜಿಲ್ಲೆಯನ್ನು ಘೋಷಿಸಬೇಕು ಎಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 