ಶಿಕ್ಷಕರಿಗೆ ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನ: ಕೊಳಶೆಟ್ಟಿ

ಶಿಕ್ಷಕರಿಗೆ ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನ: ಕೊಳಶೆಟ್ಟಿ Teachers hold the most exalted position in society: Kolashetti


ಇಂಡಿ 02: ನಗರ ಗುರುಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಬ್ಯಾಂಕ್ ಸಹಯೋಗದಲ್ಲಿ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ನಡೆಯಿತು.  

ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗುರು ಅಥವಾ ಶಿಕ್ಷಕರಿಗೆ ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನವಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಹೇಳಿದರು. ನಿವೃತ್ತ ಶಿಕ್ಷಕರು ತಮ್ಮ ಆರೋಗ್ಯ ಕಾಪಾಡಿಕೊಂಡು ಸಮಾಜ ಸೇವೆಯಲ್ಲಿ ಮುಂದುವರಿಯಬೇಕು ಎಂದು ಅವರು ಸಲಹೆ ನೀಡಿದರು.  

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನಕುಮಾರ್ ಪಿ. ಮಾತನಾಡಿ, ನಿವೃತ್ತ ಶಿಕ್ಷಕರು ತಮ್ಮ ಸುದೀರ್ಘ ಸೇವಾವಧಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಹಾಗೂ ಉತ್ತಮ ಸಮಾಜ ನಿರ್ಮಾಣದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.  

ಕ್ಷೇತ್ರ ಸಮನ್ವಯಾಧಿಕಾರಿ ಎಸ್‌.ಆರ್‌. ನಡುಗಡ್ಡಿ, ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಕಾಂತು, ಜಿಲ್ಲಾ ಸರ್ಕಾರಿ ನೌಕರರ ಬ್ಯಾಂಕ್ ನಿರ್ದೇಶಕ ಅಲ್ಲಾಭಕ್ಷ ವಾಲಿಕಾರ ಹಾಗೂ ನಿವೃತ್ತ ಏಖಕಖಖಿಂ ಅಧ್ಯಕ್ಷ ವೈ.ಟಿ. ಪಾಟೀಲ ಮಾತನಾಡಿದರು.  ಕಾರ್ಯಕ್ರಮದಲ್ಲಿ 67 ನಿವೃತ್ತ ಶಿಕ್ಷಕರು ಹಾಗೂ ಶಿಕ್ಷಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಲ್ತಾಫ್ ಬೋರಾಮಣಿ ಅಧ್ಯಕ್ಷತೆ ವಹಿಸಿದ್ದರು.  

ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಿ ಎ ರಾವುರ, ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿಯ ಅಧ್ಯಕ್ಷ ಎಸ್ ವ್ಹಿ ಹರಳಯ್ಯ, ನಿಕಟಪೂರ್ವ ಅಧ್ಯಕ್ಷ ಪಿ ಎಸ್ ಚಾಂದಕವಟೆ, ಎಂ ಟಿ ಮಾಶ್ಯಾಳ, ಏಖಕಖಖಿ ನಿಕಟ ಪೂರ್ವ ಅಧ್ಯಕ್ಷ ಎಂ ಎಂ ವಾಲಿಕಾರ, ಓಉಓ ರಾಜ್ಯ ಪರಿಷತ್ತ ಸದಸ್ಯ ಬಸವರಾಜ ಮೇತ್ರಿ, ಉಪಾಧ್ಯ ಅಬುತಾಲಿಬ ಹೊಸೂರು, ಮಹಿಳಾ ಉಪಾಧ್ಯಕ್ಷೆ ಶಾರುಬಾಯಿ ಗಿರಣಿ,  ಉಪಾಧ್ಯಕ್ಷರಾದ ಟಿ ಕೆ ಜಂಬಗಿ, ಮೋಹನ್ ಕಟಕದೊಂಡ, ಬಿ ಎಂ ವಠಾರ, ವೇಣು ಚವ್ಹಾಣ್, ಜಗದೀಶ್ ಚವಡಿಹಾಳ,

ಸುರೇಶ್ ಚವ್ಹಾಣ, ಎಚ್‌ಎಂ ಮುಜಾವರ್, ಆನಂದ ಕೆಂಭಾವಿ, ಎಸ್ ಸಿ ಗಿಡಗಂಟಿ, ಡಿ ಎಸ್ ಕಣಮಸ್, ಟಿ ಕೆ ಪೂಜಾರಿ, ಬಿ ಎಸ್ ಸೊನ್ನದ, ತಾನಾಜಿ ಕಟಕದೊಂಡ, ಬಿ ಎನ್ ಜಮಾದಾರ, ಬಿ ಬಿ ಸುತಾರ್, ಎಸ್ ಜಿ ನಾವಿ, ಸಿ ಎಸ್ ಮೇತ್ರಿ, ಜೆ ಹೆಚ್ ತೆಲಗ, ಪ್ರೇಮಾ ಹುಬ್ಬಳ್ಳಿ, ವಿ ಎನ್ ಡಿಸ್ಲೆ, ಶ್ರೀದೇವಿ ಮುಗಳಿ, ಶಾಹಿನ ಅಂಜುಮ್ ಆರ್ ಆರ್ ಫಸ್ಟ್‌, ಎ ಎ ನಾಗೂರ್, ಉಮರ ಶೇಖ, ರವಿ ಬಿರಾದಾರ, ಎಂ ಡಿ ಕಂಟೀಕರ, ಎಂ ಬಿ ಟಿಂಗಳೆ, ಸಂಜೀವ ಬೋರಗಿ ಇತರರು ಉಪಸ್ಥಿತರಿದ್ದು.   ಪ್ರಧಾನ  ಕಾರ್ಯದರ್ಶಿ ಜಯರಾಮ ಚವ್ಹಾಣ ಸ್ವಾಗತಿಸಿ, ಸೊಸೈಟಿಯ ಉಪಾಧ್ಯಕ್ಷ ಪಿ ಜಿ ಕಲ್ಮನಿ ನಿರೂಪಿಸಿ ವಂದಿಸಿದರು.