ಹಳೆ ಪಿಂಚಣಿ ಯೋಜನೆ ಜಾರಿಗೆ ಶಿಕ್ಷಕರ ಪ್ರತಿಭಟನೆ

ಹಳೆ ಪಿಂಚಣಿ ಯೋಜನೆ ಜಾರಿಗೆ ಶಿಕ್ಷಕರ ಪ್ರತಿಭಟನೆ  Teachers' protest for the implementation of the Old Pension Scheme

ಬ್ಯಾಡಗಿ  05: ಹಳೆ ಪಿಂಚಣಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ರಾಜ್ಯದ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಾಧ್ಯಮಿಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುಭಾಷ ಯಲಿ ಮಾತನಾಡಿ 2006ರ ಏಪ್ರಿಲ್ 1 ರಿಂದ ನೇಮಕಗೊಂಡ ಅನುದಾನಿತ ಶಾಲೆಗಳ ನೌಕರರಿಗೆ ಹಳೆಯ ಪಿಂಚಣಿ ಯೋಜನೆ.

ಬದಲಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿಗೆ ಗೊಳಿಸಿರುವುದರಿಂದ ನಿವೃತ್ತಿ ಜೀವನದಲ್ಲಿ ಆರ್ಥಿಕ ಭದ್ರತೆ ಇಲ್ಲದಂತಾಗಿದೆ ಸರ್ಕಾರಿ ನೌಕರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿರುವಾಗ ಅನುದಾನಿತ ಶಾಲೆ ನೌಕರರನ್ನು ಕಡೆಗಣಿಸಿರುವುದು ನ್ಯಾಯ ಸಮ್ಮತವಲ್ಲ ಕೂಡಲೇ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ನೌಕರರ ಭೇದಭಾವವಿಲ್ಲದೆ ಹಳೆ ಪಿಂಚಣಿ ಯೋಜನೆಗೆ ಒಳಪಡಿಸಿ ಜಾರಿಗೆ ಗೋಳಿಸುವಂತೆ ಆಗ್ರಹಿಸಿದರು.

ತಾಲೂಕು ನೌಕರರ ಸಂಘದ ಅಧ್ಯಕ್ಷ ಮಾಲತೇಶ್ ಕಂಬಳಿ ಮಾತನಾಡಿ ರಾಜ್ಯದಲ್ಲಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಶಿಕ್ಷಕರು ಮತ್ತು ಸಿಬ್ಬಂದಿಗಳು ಸರ್ಕಾರದ ಶಿಕ್ಷಣ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡಿದ್ದರು ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಆದ್ದರಿಂದ ಈ ತಾರತಮ್ಯವನ್ನು ಮಾಡದೆ ಸರ್ಕಾರವು ನ್ಯಾಯ ಯುತವಾಗಿ ಪ್ರತಿಯೊಬ್ಬ ನೌಕರರಿಗೆ ಸೌಲಭ್ಯಗಳನ್ನು ಒದಗಿಸುವ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. *ಹಳೆ ಪಿಂಚಣಿ ಯೋಜನೆಯು ಮರು ಜಾರಿಗೊಳಿಸಿದರೆ ನಿವೃತ್ತ ಜೀವನಕ್ಕೆ ಅಗತ್ಯವಾದ ಗೌರವ ಭದ್ರತೆ ಹಾಗೂ ನೆಮ್ಮದಿಯನ್ನು ಒದಗಿಸಬೇಕೆಂದು ತಮ್ಮಲ್ಲಿ ಸವಿನಯವಾಗಿ ಮನವಿ ಮಾಡಿಕೊಳ್ಳುತ್ತೇವೆ.

ಶೀಘ್ರದಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಂಡು ರಾಜ್ಯದ ಲಕ್ಷಾಂತರ ನೌಕರರು ಹಾಗೂ ಅವರ ಕುಟುಂಬಗಳಿಗೆ ನೆಮ್ಮದಿ  ನೀಡಬೇಕೆಂದು ತಾಲೂಕು ರಾಜ್ಯ ಮಾಧ್ಯಮಿಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುಭಾಷ್ ಯಲಿ ಆಗ್ರಹಿಸಿದರು.* ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಎಸ್ ಬಿ ಪಾಟೀಲ. ಎಸ್ ಬಿ ಅಂಗರಗಟ್ಟಿ. ಎಂ ಎಸ್ ಕರ್ಜಗಿ. ಸಹ ಕಾರ್ಯದರ್ಶಿ ಎ ಟಿ ಪೀಠದ. ಎಂ ಬಿ ಶಿವನಗೌಡ. ಎನ್ ಜಿ ಗಡ್ಡಿ. ರಾಜೇಶ್ ಎನ್‌. ಕೆ .ಯು ಎನ್ ಚತ್ರದ. ಬಸವರಾಜ್ ಸಿ.ಬಿ. ರವೀಂದ್ರ ಆನ್ವೇರಿ. ಪಿ ಎಫ್ ಕರಿಯಣ್ಣನವರ್ ಸೇರಿದಂತೆ ನೂರಾರು ನೌಕರರು ಉಪಸ್ಥಿತರಿದ್ದರು.