ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಶಿಕ್ಷಕರ ಕೊಡುಗೆ ಅಪಾರ
Teachers' contribution to building a civilized society is immense.
ಶಿಗ್ಗಾವಿ 08: ಪ್ರತಿಯೊಬ್ಬರ ಜೀವನಕ್ಕೂ ಅಕ್ಷರ ಎಂಬ ಹಣತೆಯಿಂದ ಭವ್ಯ ಭವಿಷ್ಯದ ಅಡಿಪಾಯಕ್ಕೆ ಬೆಳಕಾಗಿ, ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಶಿಕ್ಷಕರ ಕೊಡುಗೆ ಅಗಣಿತವಾದುದು ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ತಾಲೂಕಿನ ಬನ್ನೂರ ಗ್ರಾಮದಲ್ಲಿ ಎಜುಕೇಶನಲ್ ವೆಲ್ಫೇರ್ ಫೌಂಡೇಶನ್, ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರುಶಿಕ್ಷಕರು ಶಾಲೆಗಳಲ್ಲಿ ಪಾಠ ಪ್ರವಚನಗಳನ್ನು ಅಷ್ಟೇ ಬೋಧಿಸುವುದಲ್ಲದೆ, ಸಮಾಜದಲ್ಲಿ ಗೌರವಯುತವಾಗಿ ಬದುಕಲು ಬೇಕಾದ ಮೌಲ್ಯಗಳನ್ನು ನಮ್ಮಲ್ಲಿ ಬಿತ್ತಿ, ಸಭ್ಯ ಸಮಾಜದ ನಿರ್ಮಾಣದಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವಿಶ್ವನಾಥಯ್ಯ ಚಿಕ್ಕಮಠ,ಗ್ರಾಮ ಪಂಚಾಯತಿ ಅಧ್ಯಕ್ಷಿಣೆ ಗಿರಿಜವ್ವ ದೊಡ್ಮನಿ, ಪಿ.ಡಿ.ಓ ಹೂಗಾರ, ಪ್ರಧಾನ ಗುರುಗಳು ಅಂಗಡಿ, ವೀರನಗೌಡ ಹೊನ್ನಗೌಡ್ರ, ಟಿ.ವಿ.ಪಾಟೀಲ್, ವೀರಭದ್ರಗೌಡ ಪೊಲೀಸ್ ಗೌಡ್ರ,ವೀರನಗೌಡ ಪೊಲೀಸ್ ಗೌಡ್ರ ಸೇರಿದಂತೆ ಫೌಂಡೇಶನ್ ಸರ್ವ ಸದಸ್ಯರು ಹಾಗೂ ಎಸ್.ಡಿ.ಎಂ.ಸಿ ಸರ್ವ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು, ಬಸವರಾಜ ಮಾಯಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು, ಮೊಹಮ್ಮದ್ ಜಾಫರ್ ಇಸುಮಿಯನವರ ವಂದಿಸಿದರು.ಪ್ರವೀಣ್ ಸಿದ್ದಣ್ಣವರ್ ನಿರೂಪಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 