ಹೆಚ್ಚಿನ ಶಿಕ್ಷಕರನ್ನು ನೀಡಲು ಶಿಕ್ಷಕ ಸಂಘದ ನಿರ್ದೇಶಕರ ಆಗ್ರಹ
Teachers' association director demands more teachers
ಸಂಬರಗಿ, 04 ; ಗಡಿ ಭಾಗದ ಗ್ರಾಮಗಳಲ್ಲಿ ಕನ್ನಡ ಉಳಿಸಲು, ಬೆಳೆಸಲು ನಾವು ಸತತ ಪ್ರಯತ್ನ ಮಾಡುತ್ತೇವೆ. ಶಿಕ್ಷಕರ ಕೊರತೆ ಇದ್ದು, ಹೆಚ್ಚಿನ ಶಿಕ್ಷಕರನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಗಡಿ ಭಾಗದ ನಿರ್ದೇಶಕರು ವಿಠ್ಠಲ ಕನ್ನೂರ ಅಗ್ರಹಿಸಿದ್ದಾರೆ.
ಹೊಸದಾಗಿ ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಲ್ಲಪ್ಪ ಮುಂಜೆ ಅಧಿಕಾರ ಸ್ವೀಕಾರ ಮಾಡಿದ ನಂತರ ಗಡಿ ಭಾಗದ ಶಿಕ್ಷಕರ ಸಂಘದಿಂದ ಅವರನ್ನು ಸತ್ಕರಿಸಿ ಗಡಿ ಭಾಗದ ಸಮಸ್ಯೆಯ ಕುರಿತು ಮಾತನಾಡಿ ಅವರು ಗಡಿ ಭಾಗದಲ್ಲಿ ತೋಟಪಟ್ಟಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಹಲವಾರು ಬಾರಿ ಗಡಿ ಭಾಗದ ಕನ್ನಡಿಗರು ಹೋರಾಟ ಮಾಡಿದರು ಸಹ ಸರ್ಕಾರ ಯಾವುದೇ ಗಮನ ಹರಿಸಿಲ್ಲ. ತಾವು ಅಧಿಕಾರಿ ಸ್ವೀಕರಿಸಿದ ನಂತರ ಗಡಿ ಭಾಗದ ಶಾಲೆಗಳಿಗೆ ತಾವು ಸ್ವಯಂ ಭೇಟಿ ನೀಡಿ ಕನ್ನಡ ಶಾಲೆಗಳಿಗೆ ಶಿಕ್ಷಕರನ್ನು ನೀಡಿ ಮಾತೃ ಭಾಷೆಯಾದ ಕನ್ನಡವನ್ನು ಉಳಿಸಿರಿ. ಸ್ಥಗಿತಗೊಂಡಿರುವ ಕನ್ನಡ ಶಾಲೆಗಳನ್ನು ಮರಳಿ ಪ್ರಾರಂಭಿಸಬೇಕೆಂದು ಅವರು ವಿನಂತಿಸಿದರು.
ಈ ವೇಳೆ ಸಂಬರಗಿ ಕೇಂದ್ರ ಸಿ.ಆರ್.ಸಿ ಗಂಗಾಧರ ಕೋಷ್ಠಿ, ಪ್ರಧಾನ ಗುರುಗಳಾದ ಕುಮಾರ ನಾಟೇಕರ, ತಾನಾಜಿ ಪಾಟೀಲ, ಎಸ್.ಎಸ್. ನಾಗನ್ನವರ, ಸುನೀಲ ಪಾಟೀಲ, ತಾನಾಜಿ ಶ್ರೀಂಗಾರೆ, ಸದಾಶಿವ ಕಾಂಬಳೆ, ಆರ್.ಎನ್. ಪಾಟೀಲ ಸೇರಿದಂತಹ ಎಲ್ಲ ಶಿಕ್ಷಕರು ಉಪಸ್ಥಿತ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 