ಶಿಕ್ಷಕರ ಪಾಠ ಮಕ್ಕಳ ಮನಮುಟ್ಟುವಂತಿರಲಿ: ಬೆಲ್ಲದ

ಧಾರವಾಡ 29: ವಿಜ್ಞಾನ ಕೇಂದ್ರವು ಪ್ರತಿಯೊಂದು ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ಕೊಡುವಂಥ ಒಂದು ಸಂಸ್ಥೆಯಾಗಿದ್ದು, ಇದಕ್ಕೆ ನಾವೆಲ್ಲರೂ ಹೆಚ್ಚು ಹೆಚ್ಚು ಸ್ಪಂದಿಸಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಪ್ರಾದೇಶಿಕ ವಿಜ್ಞಾನ ಕೇಂದ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾ ಟಕ ಸರಕಾರ, ಬೆಂಗಳೂರು ಮತ್ತು ಕರ್ನಾ ಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು ಇವುಗಳ ಸಹಯೋಗದೊಂದಿಗೆ ದಿ.28ರಂದು ಬೆಳಗಾವಿ ವಿಭಾಗದ ಫ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ವಿಜ್ಞಾನ ಮಾದರಿ ಸ್ಪರ್ಧೆ  ಹಾಗೂ ಬೆಳಗಾವಿ ವಿಭಾಗದ ಪದವಿ ವಿಜ್ಞಾನ ವಿದ್ಯಾರ್ಥಿ ಗಳಿಗೆ ಶಕ್ತಿ ಸಂರಕ್ಷಣೆ ದಿನಾಚರಣೆ ಅಂಗವಾಗಿ ಸೆಮಿನಾರ ಸ್ಪರ್ಧೆ ಗಳನ್ನು ಉದ್ಘಾಟಿಸಿ ಅವರು ಮತನಾಡಿದರು. 

ವಿಜ್ಞಾನ ಶಿಕ್ಷಕರಿಗೆ ಈ ವಿಜ್ಞಾನ ಮಾದರಿ ಸ್ಪರ್ಧೆ ಆಯೋಜಿಸಿರುವದು ಒಂದು ಒಳ್ಳೆಯ ವಿಚಾರ. ಇದರ ಮೂಲಕ ಶಿಕ್ಷಕರಿಗೆ ಹೆಚ್ಚಿನ ಅಧ್ಯಯನ ಮಾಡಲು ಒಂದು ಸದಾವಕಾಶ ಕಲ್ಪಿಸಿದಂತಾಗಿದೆ. ವಿಜ್ಞಾನ ಶಿಕ್ಷಕರು ಇದರ ಸದುಪಯೋಗ ಪಡೆದುಕೊಂಡು ಮಕ್ಕಳಿಗೆ ಮನಮುಟ್ಟುವ ಹಾಗೆ ತರಗತಿಗಳಲ್ಲಿ ಪಾಠಗಳನ್ನು ಮಾಡಲು ಬೆಲ್ಲದ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರದ ನಿರ್ದೇ ಶಕ ಡಾ. ಕೆ.ಬಿ. ಗುಡಸಿ ಅವರು ಪಾಲಕರು ವಿದ್ಯಾರ್ಥಿ ಗಳಿಗೆ ಇದೇ ವಿಷಯವನ್ನು ಆರಿಸಿಕೊಳ್ಳಿ ಎಂದು ತಮ್ಮ ಅಭಿಪ್ರಾಯವನ್ನು ಮಕ್ಕಳ ಮೇಲೆ ಒತ್ತಡ ಹಾಕದೇ ಅವರಿಗೆ ಆಸಕ್ತಿ ಇರುವ ವಿಷಯದಲ್ಲಿ ಮುಂದುವರೆಯಲು ಬಿಟ್ಟರೆ ಖಂಡಿತವಾಗಿಯೂ ಅವರು ಹೊಸ ಹೊಸ ವಿಷಯಗಳನ್ನು ಸಂಗ್ರಹಿಸಿ ಸಂಶೋಧನೆಗಳ ಮುಖಾಂತರ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಲು ಸಹಕಾರಿಯಾಗುತ್ತದೆ ಎಂದರು.

 ಸಿ.ಎಫ್.ಚಂಡೂರ ನಿರೂಪಿಸಿದರು. ವಿಶಾಲಾಕ್ಷಿ ಎಸ್. ಜೆ. ವಂದಿಸಿದರು. ವಿಜ್ಞಾನ ಕೇಂದ್ರದ ಸಿಬ್ಬಂದಿಗಳಾದ ಸಂದೀಪ ರಂಜಣಗಿ, ಅಡಿವೆಪ್ಪ ಅಂತಣ್ಣವರ, ಎಂ.ಸಿ. ಕಂದಗಲ್ಲ, ಎಸ್.ಎಫ್. ಆಡಿನ, ಆರ್. ಪಿ. ಗಾಳಿ, ಅಭಿಷೇಕ ಸಿ., ಶಶಿಧರ ಬಿ., ಪ್ರಮೋದ ಆರ್., ಕೆ.ಎನ್.ಲಕ್ಷ್ಮಣ, ಬಿ.ಎಸ್.ಗಾಂವಕರ, ಶ್ಯಾಮ ತೇಲಗಾರ, ಎಂ.ಸಿ. ಶಂಕರೇಗೌಡ, ಆರ್. ಎನ್.ಕಿಲ್ಲೇದಾರ, ಉಷಾ ಕುಲಕಣರ್ಿ, ಶಂಕರ ಹಿರೇಮಠ, ಬೆಳಗಾವಿ ವಿಭಾಗದ ಶಿಕ್ಷಕರು ಪದವಿ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.