ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ

ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ  Teacher's Co-curricular Activities Competition

ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ  


ತಾಳಿಕೋಟೆ: ಮುದ್ದೇಬಿಹಾಳ ತಾಲ್ಲೂಕಿನ ಸರಕಾರಿ ,ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ವಿಜಯಪುರ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಇವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿತ್ತು. ಕ್ಷೇತ್ರ ಸಮನ್ವಯಾಧಿಕಾರಿ ಆರಿ​‍್ಬ.ದಮ್ಮೂರಮಠ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ  

 ಮಾತನಾಡಿ ಪ್ರತಿವರ್ಷದಂತೆ ಶಿಕ್ಷಕರ ಸಹಪಠ್ಯ ಚಟುವಟಿಗಳನನ್ನು ಹಮ್ಮಿಕೊಳ್ಳಲಾಗಿದ್ದು.ಒಟ್ಟು ಏಳು ವಿವಿಧ ಸ್ಪರ್ಧೆ ಏರಿ​‍್ಡಸಲಾಗಿದೆ.ಸ್ಥಳದಲ್ಲಿ ಪಾಟೋಪಕರಣ ತಯಾರಿಸುವದು, ಪ್ರಬಂಧಸ್ಪರ್ಧೆ,ಸ್ಥಳದಲ್ಲಿ ಚಿತ್ರ ಬರೆಯುವುದು, ಭಕ್ತಿ ಗೀತೆ, ಸಾಮಾನ್ಯ ವಿಷಯಗಳ ರಸಪ್ರಶ್ನೆ, ವಿಜ್ಞಾನ, ರಸಪ್ರೆಶ್ನೆ ಮುಂತಾದ ಸ್ಪರ್ಧೆಗಳ ಪ್ರತಿ ಸ್ಪರ್ಧೆಗೆ ಮೂರು ಜನ ಅನುಭವಿ ನಿರ್ಣಾಯಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.  

ಇಸಿಓ ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕರ ಕ್ರಿಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಸ್ಪರ್ಧೆಯನ್ನು ಯಶಸ್ವಿಗೊಳಿಸಿ ಎಂದರು. ವೇದಿಕೆಯಲ್ಲಿ ಬಿ.ಟಿ. ವಜ್ಜಲ, ಮುಖ್ಯ ಶಿಕ್ಷಕಿ ಡಾ.ಅನಿತಾ ಸಜ್ಜನ,ಎಸ್‌.ಬಿ.ಚೌಧರಿ, ಸುರೇಶ ಬೀರಗೊಂಡ,ವಾಯ್‌.ಬಿ.ಬಡಿಗೇರ, ಅಶೋಕ ಕಟ್ಟಿ, ಪ್ರಕಾಶ ಸುರಪುರ, ಪ್ರೌಢಶಾಲಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಸಂಘಟನೆಗಳ ಅಧ್ಯಕ್ಷರು , ಪದಾಧಿಕಾರಿಗಳು ಇದ್ದರು. ಸಿಆರ್ಸಿ ರಾಜಾಸಿಂಗ್ ವಿಜಾಪುರ ಸ್ವಾಗತಿಸಿದರು , ಶಿಕ್ಷಕಿ ಸುವರ್ಣ ಗದಗಿನಮಠ ನಿರೂಪಿಸಿದರು, ಸಿಆರ​‍್ಿ ಕಾಶಿನಾಥ ಸಜ್ಜನ ವಂದಿಸಿದರು.