ತಾಂಬಾ: ಈರುಳ್ಳಿ ದರ ಹೆಚ್ಚಳ: ರೈತರ ನೀರಿಕ್ಷೆ
ಲೋಕದರ್ಶನ ವರದಿ
ತಾಂಬಾ 30: ಅಗತ್ಯಕ್ಕೆ ತಕ್ಕಂತೆ ಮಾರುಕಟೆಗೆ ಈರುಳ್ಳಿ ಪೂರೈಕೆ ಆಗುತ್ತಿರುವುದರಿಂದ ಈ ವಾರದ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಆದರೆ ಮುಂದಿನ ವಾರ ಧಾರಣೆ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಬೆಸಿಗೆಯಲ್ಲಿ ಹೆಚ್ಚಿನ ಪ್ರಮಾಣದ ಈರುಳ್ಳಿ ಮಾರುಕಟ್ಟೆಗೆ ಆವಕವಾಗುತ್ತಿದ್ದರಿಂದ ಪ್ರತಿ ಕ್ವಿಂಟಲ್ಗೆ 800 ರೂ ರಿಂದ 900 ರೂಗಳವರೆಗೆ ಮಾರಾಟವಾಗುತ್ತಿತ್ತು ಕ್ರಮೇಣ ಧಾರಣೆಯಲ್ಲಿ ಹೆಚ್ಚಳಗೊಂಡು ಸಧ್ಯ ವಿಜಯಪುರ ಮಾರುಕಟ್ಟೆಯಲ್ಲಿ 1400 ರೂ ರಿಂದ 1600 ರೂ ವರಗೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿಗಳು ಹಾಗೂ ರೈತರು ಹೇಳುತ್ತಾರೆ.
ಧಾರಣೆ ಕಡಿಮೆ ಇರುವ ಕಾರಣ ಮಾರ್ಚ ತಿಂಗಳಿನಲ್ಲಿ ಬೆಳೆದ ಸುಮಾರು 800 ರಿಂದ 900 ಪ್ಯಾಕೆಟ್(5ಲೋಡ) ಈರುಳ್ಳಿ ಶೆಡ್ನಲ್ಲಿ ಹಾಕಿದ್ದೆನೆ ಈವಾರ ಮಾರುಕಟ್ಟೆಯಲ್ಲಿ ಪ್ರತಿ ಕ್ವಂಟಲ್ ಈರುಳ್ಳಿಗೆ 1100 ರೂ ರಿಂದ 1200 ರೂ ಧಾರಣೆ ಇದ್ದು ಇದಕ್ಕೂ ಹೆಚ್ಚಿನ ಬೆಲೆಗೆ ಮಾರಾಟ ಆಗಿದೆ ಮುಂದಿನ ವಾರ ಧಾರಣೆ ಹೆಚ್ಚಳಗೊಳ್ಳುವ ನಿರಿಕ್ಷೆಯಿದೆ ಲೋಡ್ ಈರುಳ್ಳಿ ಬೆಳೆಯಲು 60ರಿಂದ 70ಸಾವಿರ ಖರ್ಚ ಮಾಡಿದ್ದು ಕನಿಷ್ಠ 1500 ರೂರಿಂದ2 ಸಾವಿರವರಗೆ ಮಾರಾಟವಾದರೆ ಮಾತ್ರ ಒಳ್ಳೆಯ ಆದಾಯ ಸಿಕ್ಕಂತಾಗುತ್ತದೆ ಎನ್ನುತ್ತಾರೆ ತಾಂಬಾ ಗ್ರಾಮದ ರೈತ ಭೀರಪ್ಪಾ ವಗ್ಗಿ.
ನಮ್ಮಲ್ಲಿ ಕಡಿಮೆ ಜನರು ಮಾತ್ರ ಈರುಳ್ಳಿ ವ್ಯಾಪಾರಸ್ಥರು ಇರುವದರಿಂದ ಹೆಚ್ಚಿನ ಪ್ರಮಾಣದ ಈರುಳ್ಳಿ ಮಾರುಕಟ್ಟೆಗೆ ಬರುವುದಿಲ್ಲ. ಹೊದ ವಾರಕ್ಕೆ ಹೊಲಿಸಿದರೆ ಹತ್ತಿಪ್ಪತ್ತು ರೂಪಾಯಿ ಮಾತ್ರ ಏರಿಳಿತವಾಗಿದೆ ಎಂದು ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದಶರ್ಿ ವಿ.ರಮೇಶ ಪತ್ರಿಕೆಗೆ ಮಾಹಿತಿ ನೀಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 