ಕ್ರೀಡಾಪಟುಗಳಿಗೆ ತಾಲೂಕು ಕ್ರೀಡಾಂಗಣ ಅತ್ಯವಶ್ಯಕ : ಇ.ಬಸವಲಿಂಗಪ್ಪ

ಕ್ರೀಡಾಪಟುಗಳಿಗೆ ತಾಲೂಕು ಕ್ರೀಡಾಂಗಣ ಅತ್ಯವಶ್ಯಕ : ಇ.ಬಸವಲಿಂಗಪ್ಪ Taluk stadium essential for athletes: E. Basavalingappa

ಲೋಕದರ್ಶನ ವರದಿ

ಕಂಪ್ಲಿ  01: ಗ್ರಾಮೀಣ ಭಾಗದ ಕ್ರೀಡಾಪಟುಗಳ ಉತ್ತೇಜನಕ್ಕಾಗಿ ತಾಲೂಕು ಕ್ರೀಡಾಂಗಣದ ಅವಶ್ಯಕತೆ ಇದೆ. ಆದ್ದರಿಂದ ಕೂಡಲೇ ಶಾಸಕ ಗಣೇಶ ಅವರು ತಾಲೂಕು ಕ್ರೀಡಾಂಗಣ ಸ್ಥಾಪಿಸಿ, ಅನುಕೂಲ ಮಾಡಿಕೊಡಬೇಕೆಂದು ಮುಖಂಡ ಇಟಗಿ ಬಸವಲಿಂಗಪ್ಪ ಹೇಳಿದರು ತಾಲೂಕಿನ ಸಣಾಪುರ ಗ್ರಾಪಂಯ ಇಟಗಿ ಗ್ರಾಮದಲ್ಲಿರುವ ಸಂಗಮೇಶ್ವರ ದೇವಸ್ಥಾನ ಮುಂಭಾಗದ ಮೈದಾನದಲ್ಲಿ ಇಟಗಿ ಬಸವಲಿಂಗಪ್ಪ ಮತ್ತು ಸಹೋದರರ ನೇತೃತ್ವದಲ್ಲಿ ಆರಂಭಗೊಂಡ ಜಿಪಿಎಲ್(ಗ್ರಾಮೀಣ ಪ್ರೀಮಿಯರ್ ಲೀಗ್)ಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರತಿಭಾವಂತ ಕ್ರೀಡಾಪಟುಗಳು ಹೊಲ, ಗದ್ದೆಗಳಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ. ಇದರಿಂದ ಪ್ರತಿಭಾವಂತ ಕ್ರೀಡಾಪಟುಗಳು ಮರೆಯಾಗುತ್ತಿದ್ದಾರೆ. ತಾಲೂಕು ಕ್ರೀಡಾಂಗಣ ಇದ್ದರೆ, ಪ್ರತಿಭಾವಂತರು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ಅವಕಾಶ ದೊರಕಲಿದೆ. ಶಾಸಕರು ತಾಲೂಕು ಕ್ರೀಡಾಂಗಣ ಮಾಡಿಕೊಡಬೇಕು.ಎಂದರು ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದ್ದು, ಈ ಲೀಗ್ನಲ್ಲಿ ಪ್ರಥಮ ವಿಜೇತ ತಂಡಕ್ಕೆ33333ಸಾವಿರರೂ.ಗಳ, ದ್ವಿತೀಯ ತಂಡಕ್ಕೆ 22222 ರೂ.ಗಳ ವೈಯಕ್ತಿನ ಬಹುಮಾನದ ಜೊತೆಗೆ ಆಕರ್ಷಕ ಕಪ್ ವಿತರಿಸಲಾಗುವುದು. ಎಂದರು. ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ 22 ತಂಡಗಳು ಪಾಲ್ಗೊಂಡಿದ್ದು, 8 ದಿನದವರೆಗೆ ಪಂದ್ಯಗಳು ನಡೆಯಲಿವೆ. ಈ ಸಂದರ್ಭದಲ್ಲಿ ಮುಖಂಡರಾದ ಕೆ.ವೆಂಕಟರಾಮರಾಜು, ಇಟಗಿ ಶರಣಗೌಡ, ಇಟಗಿ ಬಸವರಾಜಗೌಡ, ಮೆಟ್ರಿ ಶಂಕ್ರ​‍್ಪ, ಕ್ರೀಡಾಕೂಟದ ವ್ಯವಸ್ಥಾಪಕ ಮೆಹಬೂಬ್ ಹಾಗೂ ನವೀನ್, ವಿರೇಶ, ಖಾದರ್, ಪಂಪಾ ಸೇರಿದಂತೆ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.