ಜುಲೈ ೨೦ರ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪೊಲೀಸ್ ಕ್ರಮ ಕುರಿತು ಅಮಿತ್ ಶಾ ಹೇಳಿಕೆ ನೀಡುವಂತೆ ಲೋಕಸಭೆಯಲ್ಲಿ ಮುಂದೂಡಿಕೆ ನಿರ್ಣಯ ಮಂಡಿಸಿದ ಟ್ಯಾಗೋರ್
Tagore moves adjournment motion in Lok Sabha seeking a statement from Amit Shah regarding police act
**ನವದೆಹಲಿ, ಆಗಸ್ಟ್ ೪:** ಕಾಂಗ್ರೆಸ್ ಸಂಸದ ಮನಿಕ್ಕಂ ಟ್ಯಾಗೋರ್ ಅವರು ಜುಲೈ ೨೦ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ನಡೆದ ಪೊಲೀಸ್ ಕ್ರಮದ ಕುರಿತು ಚರ್ಚೆ ನಡೆಸಲು ಲೋಕಸಭೆಯ ನಿಗದಿತ ಕಲಾಪವನ್ನು ಮುಂದೂಡುವAತೆ ಮಂಗಳವಾರ ಮುಂದೂಡಿಕೆ ನಿರ್ಣಯ (ಂಜರಿouಡಿಟಿmeಟಿಣ ಒoಣioಟಿ) ಮಂಡಿಸಿದರು.
ಈ ಘಟನೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ವಿವರವಾದ ಹೇಳಿಕೆ ನೀಡಬೇಕು ಹಾಗೂ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ನಡೆಸಲು ಕಾರಣವಾದ ಸಂದರ್ಭಗಳನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ತಮ್ಮ ನೋಟಿಸ್‌ನಲ್ಲಿ ಈ ವಿಷಯವನ್ನು "ತುರ್ತು ಸಾರ್ವಜನಿಕ ಮಹತ್ವದ ನಿರ್ದಿಷ್ಟ ವಿಷಯ" ಎಂದು ಉಲ್ಲೇಖಿಸಿದ ಟ್ಯಾಗೋರ್, ಸದನದಲ್ಲಿ ತಕ್ಷಣವೇ ಚರ್ಚೆಗೆ ಅವಕಾಶ ನೀಡುವಂತೆ ಕೋರಿದರು.
"೨೦೨೬ರ ಜುಲೈ ೨೦ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ನಡೆದ ಪೊಲೀಸ್ ಕ್ರಮಕ್ಕೆ ಸಂಬAಧಿಸಿದ ತುರ್ತು ಸಾರ್ವಜನಿಕ ಮಹತ್ವದ ವಿಷಯದ ಕುರಿತು ಚರ್ಚೆ ನಡೆಸಲು ನಾನು ಮುಂದೂಡಿಕೆ ನಿರ್ಣಯ ಮಂಡಿಸಲು ಸದನದ ಅನುಮತಿ ಕೋರುತ್ತೇನೆ" ಎಂದು ಅವರು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಬಳಸಿದ ಬಲದ ಸ್ವರೂಪ ಮತ್ತು ಅದರ ಪ್ರಮಾಣದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಟ್ಯಾಗೋರ್ ಹೇಳಿದ್ದಾರೆ.
ನೋಟಿಸ್‌ನಲ್ಲಿ ಉಲ್ಲೇಖಿಸಿರುವಂತೆ, ವಿದ್ಯಾರ್ಥಿಗಳು, ಅದರಲ್ಲೂ ಮಹಿಳಾ ಪ್ರತಿಭಟನಾಕಾರರ ವಿರುದ್ಧ ಲಾಠಿ ಚಾರ್ಜ್, ಪೆಲೆಟ್ ಗನ್, ಅಶ್ರುವಾಯು (ಟಿಯರ್ ಗ್ಯಾಸ್) ಹಾಗೂ ನೀರಿನ ಫಿರಂಗಿಗಳನ್ನು ಬಳಸಲಾಗಿದೆ ಎಂಬ ಆರೋಪಗಳಿದ್ದು, ಇದರಿಂದ ಹಲವರು ಗಾಯಗೊಂಡಿದ್ದು ಸಾರ್ವಜನಿಕರಲ್ಲಿ ವ್ಯಾಪಕ ಆತಂಕ ಉಂಟಾಗಿದೆ.
ಪೊಲೀಸ್ ಕ್ರಮಕ್ಕೆ ಅನುಮತಿ ನೀಡಿದವರು ಯಾರು, ಯಾರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಯಿತು, ಈ ಬಲಪ್ರಯೋಗ ಕಾನೂನು, ಪೊಲೀಸ್ ಕಾರ್ಯವಿಧಾನ ಹಾಗೂ ಮಾನವ ಹಕ್ಕುಗಳ ಮಾನದಂಡಗಳಿಗೆ ಅನುಗುಣವಾಗಿತ್ತೇ ಎಂಬುದರ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪೆಲೆಟ್ ಗನ್, ಅಶ್ರುವಾಯು, ನೀರಿನ ಫಿರಂಗಿ ಅಥವಾ ಇತರ ಗುಂಪು ನಿಯಂತ್ರಣ ಕ್ರಮಗಳನ್ನು ಬಳಸಲಾಗಿತ್ತೇ? ಬಳಸಿದ್ದರೆ ಯಾವ ಸಂದರ್ಭಗಳಲ್ಲಿ ಬಳಸಲಾಯಿತು ಎಂಬ ಮಾಹಿತಿಯನ್ನೂ ಅವರು ಕೋರಿದ್ದಾರೆ.
ಪ್ರತಿಭಟನೆಯ ವೇಳೆ ಎಷ್ಟು ವಿದ್ಯಾರ್ಥಿಗಳು, ಅದರಲ್ಲೂ ಎಷ್ಟು ಮಹಿಳೆಯರು ಗಾಯಗೊಂಡರು, ಬಂಧಿಸಲ್ಪಟ್ಟರು ಅಥವಾ ವಶಕ್ಕೆ ಪಡೆಯಲ್ಪಟ್ಟರು ಎಂಬ ಮಾಹಿತಿಯನ್ನು ಬಹಿರಂಗಪಡಿಸುವAತೆ ಅವರು ಒತ್ತಾಯಿಸಿದರು. ಅಲ್ಲದೆ, ಪೊಲೀಸ್ ಸಿಬ್ಬಂದಿಯ ದುರ್ವರ್ತನೆ ಅಥವಾ ಅತಿಯಾದ ಬಲಪ್ರಯೋಗದ ಆರೋಪಗಳಿಗೆ ಸಂಬAಧಿಸಿದ ದೂರುಗಳು ಬಂದಿವೆಯೇ? ಅವುಗಳ ಕುರಿತು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನೂ ತಿಳಿಸಬೇಕು ಎಂದು ಹೇಳಿದರು.
ಈ ಘಟನೆಯ ಸತ್ಯಾಂಶವನ್ನು ಬಹಿರಂಗಪಡಿಸಿ, ಯಾವುದೇ ತಪ್ಪು ನಡೆದಿದ್ದರೆ ಹೊಣೆಗಾರರನ್ನು ಗುರುತಿಸಲು ಸ್ವತಂತ್ರ ನ್ಯಾಯಾಂಗ ತನಿಖೆ ಅಥವಾ ನಿಗದಿತ ಅವಧಿಯ ತನಿಖೆಗೆ ಸರ್ಕಾರ ಆದೇಶ ನೀಡುತ್ತದೆಯೇ ಎಂಬುದರ ಬಗ್ಗೆಯೂ ಟ್ಯಾಗೋರ್ ಪ್ರಶ್ನಿಸಿದ್ದಾರೆ.
"ಈ ಘಟನೆಯ ಕುರಿತ ಆರೋಪಗಳು ಶಾಂತಿಯುತ ಸಭೆ ಸೇರುವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ‍್ಯ ಹಾಗೂ ಕಾನೂನು ಜಾರಿ ಸಂಸ್ಥೆಗಳ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಸಂಬAಧಿಸಿದ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ. ಆದ್ದರಿಂದ ಕೇಂದ್ರ ಗೃಹ ಸಚಿವರು ಸಂಪೂರ್ಣ ವಿವರಗಳನ್ನು ಸಂಸತ್ತಿನ ಮುಂದೆ ಮಂಡಿಸಬೇಕು" ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಈ ವಿಷಯದ ಕುರಿತು ತಕ್ಷಣವೇ ಚರ್ಚೆ ನಡೆಸಲು ಸದನದ ಸಾಮಾನ್ಯ ಕಲಾಪವನ್ನು ಮುಂದೂಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿವರವಾದ ಹೇಳಿಕೆ ನೀಡುವಂತೆ ಟ್ಯಾಗೋರ್ ಆಗ್ರಹಿಸಿದ್ದಾರೆ.
ನೇಮಕಾತಿ ವಿಳಂಬ, ಪರೀಕ್ಷಾ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಗಳ ಕುರಿತು ಚರ್ಚೆ ನಡೆಸಬೇಕೆಂದು ವಿರೋಧ ಪಕ್ಷಗಳು ನಿರಂತರವಾಗಿ ಆಗ್ರಹಿಸುತ್ತಿರುವ ನಡುವೆಯೇ ಈ ಮುಂದೂಡಿಕೆ ನಿರ್ಣಯ ಮಂಡಿಸಲಾಗಿದೆ.
ಮುAಗಾರು ಅಧಿವೇಶನ ಆರಂಭವಾದಾಗಿನಿAದಲೇ ಜುಲೈ ೨೦ರ ಘಟನೆಯ ಕುರಿತು ಕೇಂದ್ರ ಗೃಹ ಸಚಿವರಿಂದ ಹೇಳಿಕೆ ನೀಡುವಂತೆ ವಿರೋಧ ಪಕ್ಷಗಳು ಆಗ್ರಹಿಸುತ್ತಿದ್ದು, ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗ ನಡೆದಿದೆ ಎಂದು ಆರೋಪಿಸುತ್ತಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರ, ಕಾನೂನು ಜಾರಿ ಸಂಸ್ಥೆಗಳು ನಿಗದಿತ ಕಾರ್ಯವಿಧಾನಗಳ ಅನುಸಾರವೇ ಕ್ರಮ ಕೈಗೊಂಡಿವೆ ಎಂದು ಹೇಳಿದೆ. ಆದರೆ ಈ ವಿಷಯವು ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ ಮತ್ತು ಪದೇ ಪದೇ ಕಲಾಪ ವ್ಯತ್ಯಯಕ್ಕೆ ಕಾರಣವಾಗಿದೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 