ಲೋಕದರ್ಶನ ವರದಿ
ವಿವಿಧ ಬೇಡಿಕೆ ಈಡೇರಿಕೆಗಾಗಿ ಪೌರ ಕಾರ್ಮಿಕರ ಸಾಂಕೇತಿಕ ಪ್ರತಿಭಟನೆ
ಬೇಡಿಕೆ ಈಡೇರದಿದ್ದರೆ 27ರಿಂದ ಅನಿರ್ದಿಷ್ಠ ಕಾಲ ಮುಷ್ಕರ
ಬೆಳಗಾವಿ 15: ನಾಗರಿಕ ಸೇವಾ ನಿಯಮ ಪೌರ ಸೇವಾ ನೌಕರರಿಗೆ ಅನ್ವಯಿಸುವುದು, ಪಂಚಾಯತ್ ರಾಜ್ ಇಲಾಖೆ ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿರುವ ಮಾದರಿಯಲಿಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಲ್ಲದೆ ಈ ಮೊದಲು ಸಚಿವರ ಮನೆ ಎದುರು ಧರಣಿ, ಪ್ರತಿಭಟನೆ ಹಮ್ಮಿಕೊಂಡರೂ ಸ್ಪಂದಿಸದೆ ಇರುವುದರಿಂದ ಪೌರ ಕಾರ್ಮಿಕರು ಸಾಂಕೇತಿಕವಾಗಿ ಪ್ರತಿಭಟನೆ ಹಮ್ಮಿಕೊಂಡು ಅನಿರ್ದಿಷ್ಠ ಕಾಲ ಮುಷ್ಕರ ಹಮ್ಮಿಕೊಳ್ಳುವುದಾಗಿ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷರು ಬೆಳಗಾವಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು ಮೂಲಕ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಪರಿಷತ್ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಿದಂತೆ ತಮ್ಮ ಸರ್ಕಾರ ಬಂದಾಗಿನಿಂದ ಹಲವಾರು ಬಾರಿ ಮನವಿ ಅರ್ಿಸುತ್ತಾ ಬಂದರೂ ಕೇವಲ ಆಶ್ವಾಸನೆ ಸಿಗುತ್ತಿವೆ ಹೊರತು ಬೇಡಿಕೆಗಳು ಈಡೇರುತ್ತಿಲ್ಲ. ಆದ್ದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮೇ. 26ರಂದು ಒಂದು ದಿನ ರಾಜ್ಯಾದ್ಯಂತ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೇಖನ ಸ್ಥಗಿತಗೊಳಿಸಿ ಮುಷ್ಕರ ಹಮ್ಮಿಕೊಳ್ಳಲಾಗುವುದು. ಏ. 12ರಿಂದ ಮೇ 26ರವರೆಗೆ ಬೇಡಿಕೆಗಳನ್ನು ಈಡೇರಿಸದೇ ಹೋದಲ್ಲಿ 27ರಿಂದ ಅನಿರ್ದಿಷ್ಠ ಕಾಲ ಮುಷ್ಕರ ಹಮ್ಮಿಕೊಳ್ಳಲಾಗುವುದು. ಆದ್ದರಿಂದ ಈ ಮುಷ್ಕರಕ್ಕೆ ಆಸ್ಪದ ನೀಡದೇ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೋರಲಾಗಿದೆ.
27ರಿಂದ ಅನಿದಿಷ್ಟಾವಧಿ ಮುಷ್ಕರದ ಭಾಗವಾಗಿನಮ್ಮ ನಡೆ ಬೆಳಗಾವಿ ಕಡೆ ಎಂಬ ಪ್ರತಿಭಟನೆ ಮೂಲಕ ಇಂದು ದಿ. 15ರಂದು ಒಂದು ದಿನದ ಸಾಂಕೇತಕ ಮಷ್ಕರ ಹಮ್ಮಿಕೊಂಡು ನೆನಪೋಲೆ ಮನವಿ ಅರ್ಿಸಿದರು.