ಸ್ವಾಮಿ ವಿವೇಕಾನಂದ ಇಡೀ ಜಗತ್ತಿಗೆ ಭಾರತದ ಜ್ಞಾನ ಪರಂಪರೆಯನ್ನು ಪರಿಚಯಿಸಿದ ವೀರ ಸನ್ಯಾಸಿ: ಬಸವರಾಜ್ ಕೌಲಗಿ

ಸ್ವಾಮಿ ವಿವೇಕಾನಂದ ಇಡೀ ಜಗತ್ತಿಗೆ ಭಾರತದ ಜ್ಞಾನ ಪರಂಪರೆಯನ್ನು ಪರಿಚಯಿಸಿದ ವೀರ ಸನ್ಯಾಸಿ: ಬಸವರಾಜ್ ಕೌಲಗಿ Swami Vivekananda was a heroic monk who introduced India's heritage of knowledge to the entire world

ವಿಜಯಪುರ 13 : ಜ್ಞಾನವನ್ನು ಹೊರತುಪಡಿಸಿ ಎಲ್ಲವನ್ನು ತೊರೆದವನು ಸನ್ಯಾಸಿಯಾಗುತ್ತಾನೆ. ಆದರೆಎಲ್ಲ ಸನ್ಯಾಸಿಗಳು ಸಹ ವೀರ ಸನ್ಯಾಸಿಗಳು ಆಗುವುದಕ್ಕೆ ಸಾಧ್ಯವಿಲ್ಲ. ಇಂದ್ರಿಯಗಳ ಮೇಲೆ ಗೆಲುವು ಸಾಧಿಸಿ, ಭಾರತದ ಜ್ಞಾನ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರು ವೀರ ಸನ್ಯಾಸಿ ವಿವೇಕಾನಂದ ಎಂದು ಕರೆಸಿಕೊಂಡರು. ಅಂದಿನಿಂದ ಇಂದಿನ ವರೆಗೂಯುವಕರ ಪಾಲಿನ ಚೈತನ್ಯವಾಗಿ ಗುರುತಿಸಿಕೊಂಡರು ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ ಹೇಳಿದರು. 

ವೀರ ಸನ್ಯಾಸಿ ವಿವೇಕಾನಂದರಜನ್ಮ ದಿನದ ಅಂಗವಾಗಿ ನಗರದ ಎಕ್ಸಲಂಟ ವಿಜ್ಞಾನ ಪದವಿ ಪೂರ್ವಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ಸ್ವಾಮಿ ವಿವೇಕಾನಂದ ಎಂದರೆ ಶಕ್ತಿಯ ಭಂಡಾರ. ನಮ್ಮೊಳಗಿರುವ ಸೂಪ್ತ ಚೇತನವನ್ನು ಬಡಿದೆಚ್ಚರಿಸುವ ಕಾರ್ಯವನ್ನು ವಿವೇಕ ಚಿಂತನೆಗಳು ಮಾಡುತ್ತವೆ. ಒಂದು ಬಾರಿ ವಿವೇಕಾನಂದರ ವಿಚಾರಗಳು ನಮ್ಮ ಮನ ಹೊಕ್ಕರೆ ನಮಗೆ ಅರಿವಿಲ್ಲದಂತೆ ಪರಿವರ್ತನೆಗಳು ಪ್ರಾರಂಭವಾಗುತ್ತವೆ. ಹೀಗಾಗಿಯೇ ವಿಶ್ವದ ಬಹುತೇಕ ರಾಷ್ಟ್ರಗಳ ಜನರು ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿದ್ದಾರೆ, ಅವರ ಆದರ್ಶಗಳನ್ನೇ ಆಧಾರವಾಗಿಟ್ಟುಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈ ಕಾರಣದಿಂದಾಗಿಯೇಅವರನ್ನು ವಿಶ್ವ ವಿಜೇತ ವಿವೇಕಾನಂದ ಎಂದು ಸಂಬೋಧಿಸುತ್ತಾರೆ. ಆಧ್ಯಾತ್ಮ ಹಾಗೂ ವಿಜ್ಞಾನದ ನಡುವೆ ಅವಿನಾಭಾವ ಸಂಬಂಧವಿದೆ. ಅಬ್ದುಲ್ ಕಲಾಂರಂತ ಶ್ರೇಷ್ಠ ವಿಜ್ಞಾನಿಗಳು ಸಹ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಅಳವಿಡಿಸಿಕೊಂಡು ಆಧ್ಯಾತ್ಮಿಕ ಚಿಂತನೆಗಳನ್ನು ಮಾಡುತ್ತಿದ್ದರು. ಹೀಗಾಗಿ ವಿವೇಕಾನಂದರುಎಲ್ಲರ ಮೇಲೂ ಪ್ರಭಾವ ಬೀರುವ ಮಹತ್ತರವಾದ ಚಿಂತನೆಗಳನ್ನು ನೀಡಿ ಹೋಗಿದ್ದಾರೆ. ವಿದ್ಯಾರ್ಥಿಗಳು ಅವರ ಉದಾತ್ತ ವಿಚಾರಗಳನ್ನು ಅಳವಡಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಬೇಕು ಎಂದು ಹೇಳಿದರು. 

ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಧಾರವಾಡದ ಎಕ್ಸಲಂಟ್ ನೀಟ್ ಅಕಾಡೆಮಿಯ ಪ್ರಾಂಶುಪಾಲ ಡಾ.ಜಗದೀಶ ಚಿತ್ತರಗಿ; ಅಂದು ಸ್ವಾಮಿ ವಿವೇಕಾನಂದರು ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ ಎಂದು ಹೇಳಿದರು. ಅದರರ್ಥ ಒಂದು ಸೋಲಿಗೆ ಸಾಕೆಂದುಕೊಂಡು ಹಿಂದೆ ಸರಿಯುವದಲ್ಲ. ಒಂದು ಗೆಲುವಿಗೆ ಸಂತೃಪ್ತಿ ಪಟ್ಟುಕೊಂಡು ಸುಮ್ಮನೆ ಉಳಿಯುವುದೂ ಅಲ್ಲ. ಬದಲಿಗೆ ನಮ್ಮೊಳಗಿನ ಶಕ್ತಿಯನ್ನು ಅರಿತುಕೊಂಡು ವೇಗವಾಗಿ ಮುನ್ನುಗ್ಗುವುದಾಗಿದೆ. ಇಡೀ ಪ್ರಪಂಚವನ್ನೇ ಗೆಲ್ಲುವ ಶಕ್ತಿ ನಮ್ಮೊಳಗೇ ಇದೆ. ಅದನ್ನು ಕಂಡುಕೊಂಡರೆ ಸಾಕು ಯಾವ ಪರೀಕ್ಷೆಯನ್ನಾದರು ಸುಲಭವಾಗಿ ಎದುರಿಸಬಹುದು. ಯಾವ ಫಲಿತಾಂಶವನ್ನು ಬೇಕಾದರು ಉತ್ತಮವಾಗಿ ಪಡೆದುಕೊಳ್ಳಬಹುದು. ಈ ತತ್ವವನ್ನು ಬೋಧಿಸುತ್ತಲೇ ಸ್ವಾಮಿ ವಿವೇಕಾನಂದರು ಯುವಕರಲ್ಲಿ ಜಾಗೃತಿ ಮೂಡಿಸಿದರು. ಇಂದು ಅವರು ದೇಹದಿಂದ ದೂರಾಗಿದ್ದರು ಸಹ ಅವರ ವಿಚಾರ ಹಾಗೂ ಆಲೋಚನೆಗಳಿಂದಾಗಿ ನಮ್ಮ ನಡುವೆಯೇ ಇದ್ದಾರೆ ಎಂದು ಹೇಳಿದರು. 

ಪ್ರಾಂಶುಪಾಲ ಮಂಜುನಾಥ ಜುನಗೊಂಡ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಸ್ವಾಗತಿಸಿದರು, ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು, ಭೌತಶಾಸ್ತ್ರ ಉಪನ್ಯಾಸಕ ರವಿ ಕಲ್ಲೂರ ಮಠ ವಂದಿಸಿದರು. ಮಕ್ಕಳಲ್ಲಿ ಓದುವ ಹವ್ಯಾಸ ಮೂಡಿಸುವುದಕ್ಕೆ ಹಾಗೂ ವಿವೇಕಾನಂದರ ಚಿಂತನೆಗಳನ್ನು ಪರಿಚಯಿಸಿಲು ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗಿತ್ತು.