ವಾಷಿಂಗ್ಟನ್, ಡಿ ೨೧ ಆಲ್ಫಾಬೆಟ್‌ನ ಹೊಸ ಸಿಇಓ ಸುಂದರ್ ಪಿಚ್ಚೈ
ಮತ್ತೊಂದು ಅದ್ಭುತ ಹೆಗ್ಗಳಿಕೆಗೆ
ಪಾತ್ರವಾಗಿದ್ದಾರೆ. ಅತ್ಯಂತ ಬಲಿಷ್ಠ ಟೆಕ್
ದೈತ್ಯರಲ್ಲಿ ಒಬ್ಬರಾಗಿರುವ ಪಿಚ್ಚೈ, ಈಗ ಅತಿದೊಡ್ಡ ಸ್ಟಾಕ್ ಪುರಸ್ಕಾರ
ಪಡೆಯಲಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ,
ಕಾರ್ಯಕ್ಷಮತೆ ಆಧಾರಿತ ಸ್ಟಾಕ್ ಪುರಸ್ಕಾರ
ರೂಪದಲ್ಲಿ ೨೪೦ ಮಿಲಿಯನ್ (ಸುಮಾರು ೧೭ ನೂರು
ರೂ.ಕೋಟಿ ) ಪಡೆಯಲಿದ್ದಾರೆ. ಅಲ್ಲದೆ, ೨೦೨೦ ರಿಂದ
ಪಿಚೈ ಪಡೆಯುವ ಟೆಕ್-ಹೋಮ್ ವಾರ್ಷಿಕ ವೇತನ ೨೦ ಮಿಲಿಯನ್
ಡಾಲರ್ ಗೆ ತಲುಪಲಿದೆ. ಈ ಸಂಬಂಧ
ಆಲ್ಫಾಬೆಟ್ ಶುಕ್ರವಾರ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿರುವ
ಫೈಲಿಂಗ್ ನಲ್ಲಿ ತಿಳಿಸಿದೆ.ವಿಶ್ವದಲ್ಲೇ
ಅತಿ ಹೆಚ್ಚು ವೇತನ ಪಡೆಯುವ ಕಾರ್ಪೊರೇಟ್ ಸಿಇಓಗಳಲ್ಲಿ ಸುಂದರ್ ಪಿಚ್ಚೈ ಅವರು ಒಬ್ಬರು. ಗೂಗಲ್ ಸಿಇಒ ಆಗಿ ಸುಂದರ್ ಪಿಚ್ಚೈ ಅವರ
ವಾರ್ಷಿಕ ವೇತನ ೧,೩೦೦ ಕೋಟಿ ರೂ. ೨೦೧೫ ರಲ್ಲಿ ಗೂಗಲ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗ, ಪಿಚ್ಚೈ
ಅವರ ವಾರ್ಷಿಕ ವೇತನ ೬೫೨,೫೦೦ ಡಾಲರ್ ಗಳಾಗಿತ್ತು. ಮರು ವರ್ಷ
ಅವರ ಆದಾಯ ಮುಗಿಲು ಮುಟ್ಟಿತು. ಪ್ರಮುಖವಾಗಿ ಗೂಗಲ್, ೧೯೯ ಮಿಲಿಯನ್ ಡಾಲರ್ ಬೃಹತ್ ಸ್ಟಾಕ್ ಪ್ರಶಸ್ತಿ ನೀಡಿತ್ತು. ಗೂಗಲ್ ಸಿಇಓ ಸುಂದರ್ ಪಿಚೈ ಅವರಿಗೆ ಈಗ ಅದ್ಭುತ ಅವಕಾಶ
ಲಭಿಸಿದ್ದು, ಅವರನ್ನು ಆಲ್ಫಾಬೆಟ್ ಸಿಇಓ ಎಂದು ಹೆಸರಿಸಲಾಗಿದೆ.
ಆಲ್ಫಾಬೆಟ್ ಸಹ-ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಕಂಪನಿಯ ಸ್ಥಾಪನೆಯಾದ ೨೧ ವರ್ಷಗಳ
ನಂತರ ನಿವೃತ್ತರಾಗುತ್ತಿದ್ದಾರೆ. ಇದರೊಂದಿಗೆ ಸುಂದರ್ ಪಿಚೈ ವಿಶ್ವದ ಅತ್ಯಂತ ಬಲಿಷ್ಠ ಕಾರ್ಪೊರೇಟ್ ಸಿಇಒ ಆಗಿದ್ದಾರೆ ಈಕ್ವಿಲಾರ್ ಪ್ರಕಾರ, ಅಮೆರಿಕಾದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ಮಿಡಿಯಾನ್ ಸಿಇಒ ಮೂಲ
ವೇತನ ೧.೨ ಮಿಲಿಯನ್ ಡಾಲರ್.