ಶಾಲಾ ಆವರಣದಲ್ಲಿ ಆತ್ಮಹತ್ಯೆ

ಶಾಲಾ ಆವರಣದಲ್ಲಿ ಆತ್ಮಹತ್ಯೆ  Suicide on school premises

ಕಾರವಾರ 22 : ಕಾರವಾರ ನಗರದ ಕೋಡಿಭಾಗ ಆಳ್ವೆವಾಡ ವಾರ್ಡನಲ್ಲಿರುವ ಸ್ವಾಮಿ ವಿವೇಕಾನಂದ ಖಾಸಗಿ ಶಾಲೆಯ ಆವರಣದಲ್ಲಿ ವ್ಯಕ್ತಿಯೊಬ್ಬ ಸಾವಿಗೆ ಶರಣಾಗಿದ್ದಾನೆ. ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವ್ಯಕ್ತಿ ಕಂಡು ಬಂದ ಘಟನೆ ಶನಿವಾರ ಪತ್ತೆಯಾಗಿದೆ. ಸಾವಿಗೆ ಶರಣಾದ ವ್ಯಕ್ತಿ ಕೋಡಿಭಾಗ ವಾರ್ಡನ ನಿವಾಸಿ ಸತೀಶ್ ಎಸ್‌.ನಂಬಿಯಾರ್ (45) ಎಂದು ಗುರುತಿಸಲಾಗಿದೆ. ಸಾಲದ ಬಾಧೆ ಹಾಗೂ ಮಕ್ಕಳಾಗದ ವಿಷಯದಲ್ಲಿ ಮನನೊಂದಿದ್ದ ಸತೀಶ ಶಾಲಾ ಆವರಣದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಲಾ ಆವರಣದಲ್ಲಿ ಘಟನೆ ನಡೆದಿರುವುದು ತಿಳಿಯುತ್ತಿದ್ದಂತೆ , ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಮಾಹಿತಿ ಪಡೆದ ಕಾರವಾರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ.