ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರ ಶಾಶ್ವತವಾಗಿ ಉಳಿಯಲು ಇಂತಹ ವೇದಿಕೆ ಅಗತ್ಯ: ಎಂ.ಆಶಾ :
Such a platform is necessary for the country's art, literature, culture, and traditions to remain fo
ಕಂಪ್ಲಿ:15 ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರ ಶಾಶ್ವತವಾಗಿ ಉಳಿಯಲು ಇಂತಹ ವೇದಿಕೆಗಳು ಅಗತ್ಯವಾಗಿವೆ ಎಂದು ಗ್ರಾಪಂ ಅಧ್ಯಕ್ಷೆ ಎಂ.ಆಶಾ ಹೇಳಿದರು. ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ನಗೋರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಬಯಲಾಟ, ಹಗಲುವೇಷ ಸೇರಿದಂತೆ ನಾನಾ ಕಲೆಗಳನ್ನು ಬಿಂಬಿಸುವ ಕಾರ್ಯಕ್ರಮವೇ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ ಎಂದರು. ನಂತರ ಹಿರಿಯ ರಂಗಭೂಮಿ ಕಲಾವಿದೆ ಬಿ. ವೀಣಾ ಕುಮಾರಿ ಮಾತನಾಡಿ, ನಾಡಿನ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ. ರಾಮಸಾಗರದಲ್ಲಿ ಅನೇಕ ಜಾನಪದ ಕಲಾವಿದರ ಜಾನಪದ ವಿದ್ವಾಂಸರ ನಾಡಿಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಆರ್.ಎಂ.ರಾಮಯ್ಯ, ಎಸ್ ಡಿ.ಎಂಸಿ ಅಧ್ಯಕ್ಷ ಎಂ.ಪ್ರಶಾಂತ್, ರಂಗಭೂಮಿ ಕಲಾವಿದೆ ಎ.ವರಲಕ್ಷ್ಮೀ, ಹಿರಿಯ ನೃತ್ಯ ಕಲಾವಿದೆ ವನಮಾಲ ಕುಲಕರ್ಣಿ, ಸೀತಾ ಚಪ್ಪರ್, ಇವರು ಭಾಗವಹಿಸಿದ್ದರು. ಮೋಹನ್ ಕಲುಬುರಗಿ ತಂಡದಿಂದ ವಾಯಲಿನ್ ವಾದನ, ಕೆ.ದೊಡ್ಡಬಸಪ್ಪ ಗವಾಯಿಯಿಂದ ಸುಗಮ ಸಂಗೀತ, ವನಮಾಲ ಕುಲಕರ್ಣಿ ಮತ್ತು ಸಂಗಡಿಗರ ಸಮೂಹ ನೃತ್ಯ, ಯಲ್ಲನಗೌಡ ಶಂಕರಬಂಡೆ ತಂಡದಿಂದ ಜಾನಪದ ಗೀತೆಗಳು, ಸಿ.ಎಂ. ಕರುಣಾಮೂರ್ತಿ ಏಳುಬೆಂಚಿ ಇವರಿಂದ ಕಥಾ ಕೀರ್ತನೆ, ಎ.ವರಲಕ್ಷ್ಮೀ ಮತ್ತು ಸಂಗಡಿಗರ ಹೇಮರೆಡ್ಡಿ ಮಲ್ಲಮ್ಮ ಐತಿಹಾಸಿಕ ನಾಟಕ ಹಾಗೂ ಶಿಕಾರಿ ರಾಮು ನೇತೃತ್ವದ ಜೈ ಆದಿವಾಸಿ ತಾಷರಂಡೋಲ್ ತಂಡದಿಂದ ಪ್ರದರ್ಶನ ಗಮನ ಸೆಳೆಯಿತು. ತಾಷಾರಾಂಡೋಲ್ ಪ್ರದರ್ಶನವು ನೇರದ್ದಿದ ಪ್ರೇಕ್ಷಕರ ಮನರಂಜಿಸಿತು.
ಜಾನಪದ ಕಲಾ ತಂಡಗಳ ಮೆರವಣಿಗೆಯಲ್ಲಿ ಶಿಕಾರಿ ರಾಮು ನೇತೃತ್ವದ ಜೈ ಆದಿವಾಸಿ ತಾಷರಂಡೋಲ್ ತಂಡದಿಂದ ತಾಷಾರಾಂಡೋಲ್ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಹಳೇ ದರೋಜಿಯ ವೈ.ಮಲ್ಲಿಕಾರ್ಜುನಪ್ಪ ಮತ್ತು ಸಂಗಡಿಗರು ಹಗಲುವೇಷಗಾರಿಕೆ ಮತ್ತು ಎಸ್.ಎಂ. ಚಂದ್ರಯ್ಯ ಸ್ವಾಮಿ ಮತ್ತು ಸಂಗಡಿಗರು ವೀರಗಾಸೆ ಪ್ರದರ್ಶನ ನೀಡಿ ಗಮನ ಸೆಳೆದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 