ಮಹಿಳೆಯ ಎದೆಯಲ್ಲಿದ್ದ ಬೃಹತ್ ಗಡ್ಡೆಯ ಯಶಸ್ವಿ ಶಸ್ತ್ರಚಿಕಿತ್ಸೆ

ಮಹಿಳೆಯ ಎದೆಯಲ್ಲಿದ್ದ ಬೃಹತ್ ಗಡ್ಡೆಯ ಯಶಸ್ವಿ ಶಸ್ತ್ರಚಿಕಿತ್ಸೆ   Successful surgery on a large tumor in a woman's breast

ಲೋಕದರ್ಶನ ವರದಿ 

ಬೆಳಗಾವಿ 26: ಇಲ್ಲಿನ ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ 38 ವರ್ಷದ ಮಹಿಳೆಯೊಬ್ಬರ ಎಡಭಾಗದ ಸ್ತನದಲ್ಲಿದ್ದ ಸುಮಾರು 6ಘಿ6  ಸೆ.ಮೀ. ಗಾತ್ರದ ಬೃಹತ್ ಗಡ್ಡೆಯನ್ನು ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ನಿವಾರಿಸಿದ್ದಾರೆ.  

ಮಹಿಳೆಯು ಕಳೆದ 5 ತಿಂಗಳುಗಳಿಂದ ಎಡ ಸ್ತನದಲ್ಲಿ ಯಾವುದೇ ನೋವು ಇಲ್ಲದ ಬೃಹತ್ ಗಡ್ಡೆಯಿಂದ ಬಳಲುತ್ತಿದ್ದರು. ಗಡ್ಡೆಯು ಸ್ತನದ ನಾಲ್ಕೂ ಭಾಗಗಳನ್ಮ್ನ ಆವರಿಸಿತ್ತು. ಪ್ರಾಥಮಿಕ ಕ್ಲಿನಿಕಲ್ ತಪಾಸಣೆ, ಅಲ್ಟ್ರಸೌಂಡ್ ಮತ್ತು ಎಫ್‌ಎನ್‌ಎಸಿ ವರದಿಗಳ ಆಧಾರದ ಮೇಲೆ ಇದು ’ಜೈಂಟ್ ಫೈಬ್ರೊಡೆನೊಮ’ ಅಥವಾ ಪೈಲೋಯಿಡ್ಸ್‌ ಇರಬಹುದೆಂದು  ನಿರ್ಣಯಿಸಲಾಗಿದೆ. 

ವೈದ್ಯರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿತು. ಶಸ್ತ್ರಚಿಕಿತ್ಸೆಯ ನಂತರದ ಎಚ್ಪಿಆರ್ (ಊಕಖ) ವರದಿಯಲ್ಲಿ ಇದು ಕ್ಯಾನ್ಸರ್‌-ರಹಿತ’ಫಿಲ್ಲೋಡ್ಸ್‌ ಟ್ಯೂಮರ್‌’ ಎಂಬುದು ದೃಢಪಟ್ಟಿದ್ದು, ರೋಗಿಯು ಅಪಾಯದಿಂದ ಪಾರಾಗಿದ್ದಾರೆ.  

ರೋಗಿಗೆ ಮುಂದಿನ ಕೆಲವು ತಿಂಗಳುಗಳ ಕಾಲ ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ (ಕಿಣಚಿಡಿಣಜಡಿಟಥಿ ಜಿಠಟಠ-ಣಠಿ) ಬರುವಂತೆ ಸೂಚಿಸಲಾಗಿದೆ. ಮಹಿಳೆಯರು ಪ್ರತಿದಿನ ಅಥವಾ ಆಗಾಗ್ಗೆ ’ಸ್ವಯಂ ಸ್ತನ ಪರೀಕ್ಷೆ’ (ಖಜಟಜಿ ಛಡಿಜಛಿಣ ಜಥಟಟಿಚಿಣಠ) ಮಾಡಿಕೊಳ್ಳುವುದು ಅತ್ಯಗತ್ಯ ಮತ್ತು ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. 

ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ ಶಸ್ತ್ರಚಿಕಿತ್ಸೆಯ ವಿಭಾಗದ ನುರಿತ ಹಿರಿಯ  ತಜ್ಞರಾದ ಡಾ. ಎ.ಕೆ.ರಡ್ಡೇರ ಹಾಗೂ ಅರವಳಿಕೆ ತಜ್ಞರಾದ ಡಾ. ಆರುಣ ಮೆಲಗೇರ  ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ  ನೇರವೇರಿಸಿದ್ದಾರೆ. ಹಾಗೂ ಮಾರ್ಗದರ್ಶನ ನೀಡಿದ ಹಿರಿಯ ವೈದ್ಯರಾದ ಡಾ.  ಅಜಯ ಕಾಳೆ ಅವರಿಗೆ ಶಸ್ತ್ರಚಿಕಿತ್ಸಾ ತಂಡವು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದೆ.   ಋಫಬದಢೋರಢ ತಢಂಡಢಋಢಧ ತಕ್ಷಣವೇ ಶಸ್ತ್ರಚಿಕಿತ್ಸೆ ಋಢಣಡಿ ರಫನಥಗಿಂಢದ ಆಣೌಣಋಢಃಢದೃ ಉಟಛದಫ. ಆಢೌಚಢದಿತಢ ರಫನಥಗಿಂಢದದ ಚೇತರಿಸಿಕೊಳ್ಳುತ್ತಿದ್ದಾರೆ. 

ಈ ಎಲ್ಲ ವೈದ್ಯಕೀಯ ಹಾಗೂ ವೈದ್ಯಕೀಯೇತರರ ತಂಡವನ್ನು ಕೆ ಎಲ್ ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಯು ಎಸ್ ಎಮ್ ಕೆ ಎಲ್ ಇ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಅಭಿನಂದಿಸಿದ್ದಾರೆ. ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹನಾಧಿಕಾರಿ ಶ್ರೀ ನವಿನ ಎನ್ ಅವರು ಹಾಗೂ ವೈದ್ಯಕೀಯ ಅಧಿಕ್ಷಕರಾದ ಡಾ. ಸಂಜಯ ಕಂಬಾರ ಅವರು ಅಬಿನಂದಿಸಿದ್ದಾರೆ.