ಸುಭಾಷ್ ಕಲ್ಲೂರ ಅವರ 5ನೇ ಪುಣ್ಯಸ್ಮರಣೆ ಸಮಾರಂಭ
Subhash Kallur's 5th death anniversary ceremony
ಲೋಕದರ್ಶನ ವರದಿ
ತಾಂಬಾ 15 : ನಮ್ಮನ್ನು ಈ ಭೂಮಿಗೆ ಕಾಣಲು ಕಾರಣಿಕರ್ತರನ್ನು ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಅವರ ನೆನಪಿಗಾಗಿ ಮೂರ್ತಿಯನ್ನು ನಿರ್ಮಿಸಿ ಪೂಜೆ ಮಾಡುತ್ತಿರುವ ಅಪ್ಪಣ್ಣ ಕಲ್ಲೂರ ಅವರ ಕಾರ್ಯ ಶ್ಲಾಘನಿಯ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಸ್.ಕನಾಳ ಹೇಳಿದರು.
ಗ್ರಾಮದಲ್ಲಿ ನಡೆದ ಸುಭಾಷ್ ಕಲ್ಲೂರ ಅವರ 5ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸುಭಾಷ್ ಕಲ್ಲೂರ ಅವರು ಜನರ ಸಮಸ್ಯೆಗಳಿಗೆ ಸದಾ ಧ್ವನಿಯಾಗಿ ಜನರ ಒಳಿತನ್ನು ಮಾಡುವ ತುಡಿತ, ಬಡವರಿಗಾಗಿ ಸದಾ ಮಿಡಿಯುವ ಹೃದಯ, ಬಡವರ ಸೇವೆಯಲ್ಲಿಯೇ ಜನಾರ್ಧನನ್ನು ಕಾಣುವ ಹೃದಯ ಅವರದಾಗಿತ್ತು ಎಂದರು.
ಎಸ್.ವಿ.ವಿ ಸಂಘದ ನಿರ್ದೇಶಕರಾದ ಜೆ.ಎಸ್.ಹತ್ತಳ್ಳಿ ಮಾತನಾಡಿ ಅಜ್ಞಾನದಿಂದ ಸುಜ್ಞಾನ ದಡಿಗೆ ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮ ಜೀವನ ಪಾವನಗೊಳಿಸಿಕೊಳ್ಳಲು ದಿ.ಸುಭಾಷ ಕಲ್ಲೂರ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಜಿಪಂ ಮಾಜಿ ಸದಸ್ಯರಾದ ಶಕುಂತಲಾ ಕಲ್ಲೂರ, ಕಾಂಗ್ರೆಸ್ ಪಕ್ಷದ ಯುವ ನಾಯಕ ಅಪ್ಪಣ್ಣ ಕಲ್ಲೂರ, ಪ್ರಕಾಶ ಕಲ್ಲೂರ ಪಾಲ್ಗೊಂಡು ದಿ.ಸುಭಾಷ ಕಲ್ಲೂರ ಅವರ ಮೂರ್ತಿಗೆ ಪೂಜೆ ಸಲ್ಲಿಸಿದರು.
ಮಾಜಿ ಗ್ರಾಪಂ ಅಧ್ಯಕ್ಷರಾದ ರಾಚಪ್ಪ ಗಳೇದ, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಹಿರೇಕುರುಬರ, ಹಾಲುಮತ ಸಮಾಜದ ಮುಖಂಡ ಸಿದ್ದಗೊಂಡ ಹಿರೇಕುರಬರ, ಶಿಕ್ಷಕ ಜೆ.ಎಸ್.ಹಿರೇಮಠ, ಶಿವಪುತ್ರ ಗಂಗನಳ್ಳಿ, ಶ್ರೀಶೈಲ್ ನಿಂಗಮನಿ, ಧರ್ಮಣ್ಣ ಮಸಳಿ, ನಾಗಪ್ಪ ಗೊಂಗಿ, ನಾಗಪ್ಪ ಕುರುಬತಳ್ಳಿ, ಟಿ.ಎಸ್.ಗಿರಿಗೌಡರ ಸೇರಿದಂತೆ ಮತ್ತಿತರರು ಪಾಲ್ಗೋಡಿದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 