ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ಕಠಿಣ ಪರಿಶ್ರಮ ಮತ್ತು ಪ್ರಯತ್ನ ಪಡಬೇಕು : ಡಾ.ವೀಣಾ ಬಿರಾದಾರ
Students must work hard and put in effort to achieve their goals: Dr. Veena Biradar
ಲೋಕದರ್ಶನ ವರದಿ
ಧಾರವಾಡ : ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ಕಠಿಣ ಪರಿಶ್ರಮ ಮತ್ತು ಪ್ರಯತ್ನ ಪಡಬೇಕೆಂದು ಹೊಂಬೆಳಕು ಪ್ರತಿಷ್ಠಾನದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ನುಡಿದರು. ಮಕ್ಕಳ ಅಕಾಡೆಮಿ ವಿಠ್ಠಲ್ ಆಸ್ಪತ್ರೆಯ ತೇಜ್ ಸಭಾ ಭವನದಲ್ಲಿ ಹಮ್ಮಿಕೊಂಡ ತ್ರೀ ಬಾಷಾ ಕವಿಗೋಷ್ಠಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಮುಂದುವರಿದು ಮಾತನಾಡುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಕರ್ತವ್ಯ ಪ್ರಜ್ಞೆ, ಸಮಯ ಪಾಲನೆ, ಪ್ರಾಮಾಣಿಕತೆ, ತಾಳ್ಮೆ ಮತ್ತು ನಿರಂತರ ಪ್ರಯತ್ನ ಇರಬೇಕೆಂದು ಅಭಿಪ್ರಾಯಪಟ್ಟರು. ವೀಣಾ ಬಿರಾದಾರ ಡಾ. ರಾಜನ್ ದೇಶಪಾಂಡೆಯವರ ಸಮಾಜ ಮುಖಿ ಕಾರ್ಯಗಳನ್ನು ಮುಕ್ತ ಕಂಠದಿಂದ ಪ್ರಶಂಸಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮಕ್ಕಳ ಅಕಾಡೆಮಿ ಅಧ್ಯಕ್ಷರಾದ ಡಾಕ್ಟರ್ ರಾಜನ್ ದೇಶಪಾಂಡೆ ಯವರು ಪ್ರಾಸ್ತಾವಿಕ ಮಾತುಗಳನ್ಮಾಡುತ್ತಾ ಮಕ್ಕಳ ಅಕಾಡೆಮಿ ಬೆಳೆದು ಬಂದ ದಾರಿಯನ್ನುಕುರಿತು ವಿವರಿಸಿದರು. ಈ ಕವಿಗೋಷ್ಠಿಯಲ್ಲಿ ಸುಮಾರು 80ಕ್ಕಿಂತ ಹೆಚ್ಚು ನಗರದ ಹಾಗೂ ಗ್ರಾಮೀಣ ಭಾಗಗಳಿಂದ ಆಗಮಿಸಿದ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕನ್ನಡ, ಇಂಗ್ಲಿಷ್, ಹಿಂದಿ ಉರ್ದು ಭಾಷೆಗಳಲ್ಲಿ ಸ್ವರಚಿತ ಕವನ ವಾಚನ ಮಾಡಿದರು. ಈ ಕವಿಗೋಷ್ಠಿಯ ನಿರ್ಣಾಯಕರಾಗಿ ಶ್ರೀನಿವಾಸ ವಾಡಪ್ಪಿ, ಡಾ.ಯು.ಎ. ಹುಂಡೇಕಾರ ಮತ್ತು ಡಾ. ಇರ್ಷಾದ ಹುಯಿಲಗೊಳ ಆಗಮಿಸಿದ್ದರು.
ಡಾ.ಎನ್.ಬಿ. ನಾಲತವಾಡ, ಡಾ.ಐ.ಎಸ್. ಮಾಳೆಕರ್, ಕವಿತಾ ದೇಶಪಾಂಡೆ ಭಾಗವಹಿಸಿದ್ದರು. ಮಕ್ಕಳ ಅಕಾಡೆಮಿ ಉಪಾಧ್ಯಕ್ಷರಾದ ಸಿ.ಯು. ಬೆಳ್ಳಕ್ಕಿ ಸರ್ವರನ್ನು ಸ್ವಾಗತಿಸಿದರು. ಶ್ರೀಕಾಂತ್ ದೊಡವಾಡ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಸಿ.ಗು. ಹಿರೇಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ತ್ರಿಭಾಷಾ ಕವಿಗೋಷ್ಠಿ ಸ್ಪರ್ಧೆಯಲ್ಲಿ ವಿಜೇತರಾದವರು ಕನ್ನಡ ಭಾಷೆಯಲ್ಲಿ ವೇದಾಂತ ಬೆಣ್ಣಿ ಪ್ರಥಮ, ಪ್ರೀಯಾ ಗುಡಿಗೇರಿ ದ್ವಿತೀಯ, ಸ್ಪೂರ್ತಿ ಮುತ್ತಿ ತೃತೀಯ ಹಾಗೂ ಶೃತಿ ಗಂಗೇರಿ ಸಮಾಧಾನಕರ ಬಹುಮಾನ. ಹಿಂದಿ ಭಾಷೆಯಲ್ಲಿ ಹಜಾರಾ ಮೈಸೂರು ಪ್ರಥಮ, ಆಧ್ಯಶ್ರೀ ಚಂದಾ ದ್ವಿತೀಯ, ರುಸ್ಕಾರ ಮುಲ್ಲಾ ತೃತೀಯ ಹಾಗೂ ಆಸ್ಮೀಯಾ ಬೆಂಗೇರಿ ಸಮಾಧಾನಕರ ಬಹುಮಾನ. ಇಂಗ್ಲೀಷ್ ಭಾಷೆಯಲ್ಲಿ ರೋಷನ್ ಮೇಶ್ರಮಕರ ಪ್ರಥಮ, ಧನ್ಯಾ ಹಿರೇಗೌಡರ, ದ್ವಿತೀಯ, ಮನ್ವಿ ದೊಡವಾಡ ತೃತೀಯ ಹಾಗೂ ಆರಾಧ್ಯಾ ವಾಘಮುಡೆ ಸಮಾಧಾನಕರ ಬಹುಮಾನ ಪಡೆದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 