ಎಸ್‌ಎಸ್‌ಎಸ್ ಸಮಿತಿಯ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭ..!
Student Parliament swearing-in ceremony at SSS Samiti's school..!
ಕಾಗವಾಡ 14: ಬೆಳಗಾವಿ ನಗರದ ನೆಹರೂ ನಗರದಲ್ಲಿರುವ ಸನ್ಮತಿ ಸಹಕಾರ ಶಿಕ್ಷಣ ಸಮಿತಿಯ ಸೌ. ಶೋಭಾ ಜಗದೀಶ ಸವದತ್ತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ದಿ. 11 ರಂದು ಶಾಲಾ ವಿದ್ಯಾರ್ಥಿ ಸಂಸತ್ ಸದಸ್ಯರ ಪದಗ್ರಹಣ ಅಂದರೆ ಕ್ಯಾಬಿನೆಟ್ ಮೆಂಬರ್ಸ ಬ್ಯಾಡ್ಜಿಂಗ್ ಸಮಾರಂಭವನ್ನು ಸಂಪನ್ನಗೊಂಡಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೆಜಿನಾ ಗೋಳೆ ಗೌರವ ಅತಿಥಿಗಳಾಗಿ ಭಾರತಿ ಹರ್ದಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಅರುಣಾ ನೀರಗಟ್ಟಿ ವಹಿಸಿದ್ದರು.
ಅತಿಥಿಗಳು ಮತ್ತು ಪ್ರಾಚಾರ್ಯರು ಬ್ಯಾಡ್ಜ್‌ಗಳನ್ನು ಸ್ವೀಕರಿಸಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ, ವಿದ್ಯಾರ್ಥಿಗಳು ನಾಯಕತ್ವವನ್ನು ವಹಿಸುವುದು ತುಂಬಾ ಜವಾಬ್ದಾರಿಯಾದ ಕಾರ್ಯವಾಗಿದೆ. ಅದನ್ನು ಸಮರ್ಕವಾಗಿ ನಿರ್ವಹಿಸುವ ಕುರಿತು ಮಾರ್ಗದರ್ಶನ ಮಾಡಿ, ಅಭಿನಂದನೆಗಳನ್ನು ಕೋರಿ, ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿಯ ಎಲ್ಲ ಸದಸ್ಯರೂ ಸಹ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ವೇಳೆ ಶಾಲೆಯ ಎಲ್ಲ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 