ಸ್ಥಾನಮಾನ, ಐಶ್ವರ್ಯ, ಸಂಬಂಧಗಳು ಯಾವುದೂ ಶಾಸ್ವತವಲ್ಲ: ಬಸವರಾಜ ಬೊಮ್ಮಾಯಿ
Status, wealth, and relationships—none of them are permanent: Basavaraj Bommai
ಸ್ಥಾನಮಾನ, ಐಶ್ವರ್ಯ, ಸಂಬಂಧಗಳು ಯಾವುದೂ ಶಾಸ್ವತವಲ್ಲ: ಬಸವರಾಜ ಬೊಮ್ಮಾಯಿ
ಶಿಗ್ಗಾವಿ 11: ಜೀವನದಲ್ಲಿ ಸಾವು ಒಂದನ್ನು ಬಿಟ್ಟರೆ ಉಳಿದ್ಯಾವುದೂ ನಿಶ್ಚಿತವಲ್ಲ. ವಯಸ್ಸು, ಸಮಯ, ಅವಕಾಶ, ಸ್ಥಾನಮಾನ, ಐಶ್ವರ್ಯ ಅಥವಾ ಸಂಬಂಧಗಳು ಯಾವುದೂ ಶಾಶ್ವತವಲ್ಲ, ಎಲ್ಲವೂ ಬದಲಾಗುವಂಥದ್ದೇ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬೊಮ್ಮಾಯಿರವರ ನಿವಾಸದ ಸಭಾಭವನದಲ್ಲಿ ದಿವಂಗತ ಡಿ.ಎಸ್ ಮಾಳಗಿ, ಸುಭಾಸ ಚವ್ಹಾಣ, ಮಹಾಲಿಂಗಪ್ಪ ಹಳವಳ್ಳಿ, ಗುಡ್ಡಪ್ಪ ಮತ್ತೂರ ಅವರುಗಳ ಪುಣ್ಯಸ್ಮರಣೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರ ಬದುಕಿನಲ್ಲಿಯೂ ಸಾವು ಮಾತ್ರ ಖಚಿತ. ಉಳಿದಂತೆ ವಯಸ್ಸು ಪ್ರತಿ ನಿಮಿಷ ಬದಲಾಗುತ್ತದೆ, ಅವಕಾಶಗಳು ಹಾಗೂ ಸಂಬಂಧಗಳು ಒಂದೇ ರೀತಿಯಾಗಿ ಇರುವುದಿಲ್ಲ. ಆದರೆ ಕಾಯಕವಾಗಿರುವುದು ಸಾವು ಮಾತ್ರ ಎಂದು ಅವರು ಬದುಕಿನ ಕಟು ಸತ್ಯವನ್ನು ತೆರೆದಿಟ್ಟರು. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಹುಟ್ಟು ಎಷ್ಟು ಸತ್ಯವೋ, ಸಾವು ಕೂಡ ಅಷ್ಟೇ ಖಚಿತ. ಆದರೆ ಮನುಷ್ಯ ಬದುಕಿರುವಷ್ಟು ದಿನ ಸತ್ಕಾರ್ಯಗಳನ್ನು ಮಾಡಬೇಕು ಮತ್ತು ಪ್ರೀತಿ-ವಿಶ್ವಾಸಗಳನ್ನು ಹಂಚಬೇಕು ಬದುಕಿರುವಷ್ಟು ದಿನ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿ ಸಮರಸ ಹಾಗೂ ಸಮಾನತೆಯನ್ನು ಕಾಣಬೇಕು ಎಂದು ತಿಳಿಸಿದರು. ?ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊರಟ್ಟಿ ಅವರ ಕೊಡುಗೆ ಅಪಾರವಾಗಿದೆ. ? ಶಿಕ್ಷಣ ಕ್ಷೇತ್ರ ಅಷ್ಟೆ ಅಲ್ಲ, ರೈಲ್ವೆ ವಲಯ, ಹೈಕೋರ್ಟ್ ಹಾಗೂ ಕೃಷ್ಣಾ ಮೇಲ್ದಂಡೆ ಮತ್ತು ಮಹಾದಾಯಿ ಯೋಜನೆ ಸೇರಿದಂತೆ ? ಉತ್ತರ ಕರ್ನಾಟಕದ ಜನರ ಧ್ವನಿಯಾಗಿ ಯಾರೆಲ್ಲ ಜನಪ್ರತಿನಿಧಿಗಳು ಕೆಲಸ ಮಾಡಿದ್ದಾರೋ ಅವರಲ್ಲಿ ಬಸವರಾಜ ಹೊರಟ್ಟಿ ಅವರ ಪಾತ್ರ ಹಿರಿದಾದದ್ದು ಎಂದು ಸ್ಮರಿಸಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ ಸಹ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವ ರೀತಿಯಲ್ಲಿ ಅವರ ನೀತಿ ಮತ್ತು ನಿರ್ಣಯಗಳಿದ್ದವು ಅಲ್ಲದೇಬಸವರಾಜ ?ಹೊರಟ್ಟಿಯವರು ? ಉತ್ತರ ಕರ್ನಾಟಕದ ಹಿತಕ್ಕಾಗಿ ಕಳೆದ 30-32 ವರ್ಷಗಳಿಂದ ಎಲ್ಲಿಯೇ ಇದ್ದರೂ ಧ್ವನಿ ಎತ್ತಿ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದರು. ಈ ಸಂಧರ್ಭದಲ್ಲಿ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಯುವ ಮುಖಂಡ ಭರತ ಬೊಮ್ಮಾಯಿ, ಶಿಗ್ಗಾವಿ ಮಂಡಳದ ಅಧ್ಯಕ್ಷ ವಿಶ್ವನಾಥ ಹರವಿ, ಶಿವಪುತ್ರ್ಪ ಕಲಕೋಟಿ, ಮಹೇಶ ಮಾಳಗಿ, ರೂಪಾ ಚವ್ಹಾಣ, ಶಿವರಾಜ ಹಳವಳ್ಳಿ ಸೇರಿದಂತೆ ಕುಟುಂಬದ ಸದಸ್ಯರು, ಸೇರಿದಂತೆ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 