ರಾಜ್ಯ ಮಟ್ಟದ ಜೈನ ವೈದ್ಯರ ಸಮಾವೇಶ
State level Jain doctors' conference
ರಾಯಬಾಗ, 26 : ನಸಲಾಪುರ ಒಂದೇ ಗ್ರಾಮದಲ್ಲಿ 52 ವೈದ್ಯರಿದ್ದು, ಇವರಿಗೆಲ್ಲ ಸಾಧುಸಂತರ ಮಾರ್ಗದರ್ಶನ ಹಾಗೂ ಸಂಸ್ಕೃತಿ ಬೆಳೆಸಿಕೊಂಡಿದ್ದರಿಂದ ಇಂತಹ ಸಾಧನೆಮಾಡಲು ಸಾಧ್ಯವಾಗಿದೆ ಎಂದು ಗೊಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎನ್ ಎ ಮಗದುಮ್ ಹೇಳಿದರು. ತಾಲ್ಲೂಕಿನ ನಸಲಾಪುರ ಗ್ರಾಮದಲ್ಲಿರುವ ಬಾಲಾಚಾರ್ಯ 108 ಡಾ.ಶ್ರೀ ಸಿದ್ಧಸೇನ ಮುನಿಮಹಾರಾಜರ ಸಾನ್ನಿಧ್ಯದಲ್ಲಿ ರಾಜ್ಯ ಮಟ್ಟದ ಜೈನ ವೈದ್ಯರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೈನ ಧರ್ಮ ಅಹಿಂಸಾ ಪರಮೋ ಧರ್ಮ ತತ್ವ ಸಿದ್ದಾಂತ ಹೊಂದಿದೆ. ಅದೇ ನಿಟ್ಟಿನಲ್ಲಿ ವೈದ್ಯರು ತಾಳ್ಮೆಯಿಂದ ಕೊರೊನ ಸಂದರ್ಭದಲ್ಲಿ ಜೈನ್ ವೈದ್ಯರು ಪ್ರಾಣ ಪಣಕಿಟ್ಟು ರೋಗಿಗಳ ಉಪಚಾರ ಮಾಡಿ ಗುಣಪಡಿಸಿದ ಕೀರ್ತಿ ಸಲ್ಲುತ್ತದೆ. ಯುವ ವೈದ್ಯರು ದುಶ್ಚಟಕ್ಕೆ ಬಲಿಯಾಗದೇ ರೋಗಿಗಳ ಜೊತೆ ಬಾಂದವ್ಯ ಹಾಗೂ ದೈರ್ಯ ಹೇಳಿದರೆ ಅರ್ಧ ರೋಗ ಕಡಿಮೆಯಾಗುತ್ತದೆ. ಜನರ ಮನಗೆಲುವ ವೈದ್ಯರಾಗಿ ಎಂದು ಕರೆ ನೀಡಿದರು.
ಸಿಬಿಎಸ್ ಎಸ್ ಕೆ ನಿರ್ದೇಶಕ ಭರತೇಶ ಬನವಣೆ ಮಾತನಾಡಿ, ಜೈನ ತತ್ವ ಸಿದ್ದಾಂತ ನಂಬಿ ಇಂದಿನ 150 ಲೋಕಸಭಾ ಸದಸ್ಯರು, ಸಂಜೆ 6 ಗಂಟೆಗೆ ಊಟಮಾಡುವ ಪದ್ಧತಿ ಬೆಳೆಸಿಕೊಂಡಿದ್ದು, ಸಮಾಜದಲ್ಲಿ ಬದಲಾವಣೆಯಾಗುತ್ತಿದ್ದು, ಯುವಕರು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನಿಧ್ಯವಹಿಸಿ ಬಾಲಾಚಾರ್ಯ ಡಾ. 108 ಸಿದ್ಧಸೇನ ಮಹರಾಜರು ಮಾತನಾಡಿ, ಪುರಾತನವಾದ ಜೈನ ಶಾಸ್ತ್ರ ತತ್ವ ಸಿದ್ಧಾಂತಗಳು ಇಂದು ಆಚರಿಸುತ್ತಿದ್ದಾರೆ. ಯೋಗಾಸನ, ಎರಡು ಹೊತ್ತು ಊಟ, ಸಾವಯುವ ಬೆಳೆ ಬೆಳೆದು ತಿನ್ನುವುದು ಜೈನ್ ಸಿದ್ದಾಂತದಲ್ಲಿ ಬೆಳೆದು ಬಂದಿದೆ. ಇದನ್ನು ಸಹಿತ ಎಲ್ಲ ಜನರು ಅಳವಡಿಸಿಕೊಂಡರೆ ಆರೋಗ್ಯವಂತರಾಗಲು ಸಹಕಾರಿಯಾಗುತ್ತದೆ. ಜಾತಿ ಮತ ಬಿಟ್ಟು ರೋಗಿಗಳಿಗೆ ಉಪಚಾರ ಮಾಡುತ್ತಾರೆ. ವೈದ್ಯರೆಂದರೆ ದೇವರ ಸಮಾನ. ವೈದ್ಯರು ಎಷ್ಟೆ ಕೆಲಸ ಇದ್ದರೆ ನೆಮ್ಮದಿ ಸಿಗಬೇಕಾದರೆ ಜ್ಞಾನ, ಧರ್ಮದ ಕಡೆ ಒತ್ತು ಕೊಡಬೇಕು ಎಂದರು.
ಈ ವೇಳೆ ವೈದ್ಯರಾದ ಡಾ. ಪರಾಗ್ ಮೆಳವಂಕಿ, ಸಂಜಯ ಪಾಟೀಲ, ಸಂಜಯ ಕ ಪಾಟೀಲ, ರಮೇಶ ಕಿಚಡೆ, ಡ.ಪದ್ಮರಾಜ ಪಾಟೀಲ, ಸುಧೀರ ಪಾಟೀಲ, ಅಮಿತ ಮಗದುಮ್, ಪ್ರಗತಿ ಪಾಟೀಲ, ಲಲಿತಾ ಮಗದುಮ್, ಸೂರಜ ಪಾಟೀಲ, ಜಯವರ್ಧನ್ ಮಿರ್ಜೆ, ಸುಧೀರ ಪಾಟೀಲ, ದೇವೇಗೌಡ, ಸತೀಶ್ ಮುಗ್ಗಣ್ಣವರ, ಅಮೀತ ಚೌಗಲೆ ಸೇರಿದಂತೆ ಅನೇಕವೈದ್ಯರು, ಜೈನ್ ಶ್ರಾವಕ ಶ್ರಾವಕೀಯರು, ಜೈನ್ ಚಾತುರ್ಮಾಸ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಮೋಹನ ಭೋಮಾಜ್ ಸ್ವಾಗತಿಸಿ, ಸಂಜಯ ಪಾಟೀಲ ನಿರೂಪಿಸಿದರು. ಎಸ್ ಜಿ ಖೋಂಬಾರೆ ವಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 