ಬೇಗ ನೆರೇಗಾ ಕೆಲಸ ಪ್ರಾರಂಭಿಸಿ ಜನರು ಗುಳೆ ಹೋಗುವುದನ್ನು ನಿಲ್ಲಿಸಿ - ಶಾಸಕ ಡಾ ಚಂದ್ರು ಲಮಾಣಿ

ಬೇಗ ನೆರೇಗಾ ಕೆಲಸ ಪ್ರಾರಂಭಿಸಿ ಜನರು ಗುಳೆ ಹೋಗುವುದನ್ನು ನಿಲ್ಲಿಸಿ - ಶಾಸಕ ಡಾ ಚಂದ್ರು ಲಮಾಣಿ Start MGNREGA work immediately and stop people from migrating for work – MLA Dr. Chandru Lamani

ಶಿರಹಟ್ಟಿ  21: ನಮ್ಮ ತಾಲೂಕಿನಲ್ಲಿ ಮಳೆ ಆಗದೆ ಇರುವ ಕಾರಣ ಜಮೀನನಲ್ಲಿ ಕೂಲಿ ಕೆಲಸ ಮಾಡುವ ಜನರಿಗೆ ಕೆಲಸವಿಲ್ಲದೆ ಅವರು ಬೇರೆ ಕಡೆ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಆದಷ್ಟು ಬೇಗನೆ ನೆರೇಗಾ ಕೆಲಸವನ್ನು ಆರಂಭಿಸಿ ಜನರು ಗುಳೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಡಾ, ಚಂದ್ರು ಲಮಾಣಿ ಅವರು ಹೇಳಿದರು.

ಅವರು ಪಟ್ಟಣದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಸೋಮವಾರ ಜರುಗಿದ ’ವಿಪತ್ತು ನಿರ್ವಹಣೆ ವಿಷಯಗಳ ಕುರಿತ ಟಾಸ್ಕ್‌ ಫೋರ್ಸ್‌ ಕಮಿಟಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಹೋದಾಗ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ಲಭ್ಯವಿರುತ್ತಿಲ್ಲ ಎಂಬ ವ್ಯಾಪಕ ದೂರುಗಳು ಕೇಳಿಬರುತ್ತಿವೆ.  

ಬಾಹ್ಯ ಒತ್ತಡಗಳಿಗೆ ಮಣಿಯದೇ ಜನಾಭಿಮುಖವಾಗಿ ಕಾರ್ಯನಿರ್ವಹಿಸಿ. ಅಧಿಕಾರಿಗಳು ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟುಕುವಂತಾಗಲು ಕಂದಾಯ ಮತ್ತು ಗ್ರಾಮೀಣ ಭಾಗದ ಅಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುವ ಸ್ಥಳೀಯ ಕೇಂದ್ರಸ್ಥಾನಗಳಲ್ಲೇ ಕಡ್ಡಾಯವಾಗಿ ಇರಬೇಕು ಎಂದು ಹೇಳಿದರು.ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮರ​‍್ಕ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಹೆಚ್ಚಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ನೀರಿನ ಸಮಸ್ಯೆಯನ್ನು ಸರಿಪಡಿಸಬೇಕು,

" ಎಂದು ಕಟ್ಟುನಿಟ್ಟಾಗಿ ಆದೇಶಿಸಿದರು.ನಂತರ ನಮ್ಮ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಪ್ರತಿ ರೈತರ ಖಾತೆಗೆ 50,000 ಪರಿಹಾರ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡಿದರು.ಈ ಸಂದರ್ಭದಲ್ಲಿ ತಶೀಲ್ದಾರ್ ರಾಘವೇಂದ್ರ ರಾವ್ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ, ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ನೀರೀಕ್ಷಕರು ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತಿದ್ದರು.