ಶ್ರೀಧರ ಹಿರೇಮಠ ಅವರಿಗೆ ಪಿಎಚ್‌.ಡಿ ಪದವಿ

ಶ್ರೀಧರ ಹಿರೇಮಠ ಅವರಿಗೆ ಪಿಎಚ್‌.ಡಿ ಪದವಿ  Sridhara Hiremath receives Ph.D. degree


ರಾಯಬಾಗ 01 : ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ಶ್ರೀಧರ ಶ್ರೀಶೈಲ ಹಿರೇಮಠ ಅವರು ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ   ವಿಶ್ವವಿದ್ಯಾಲಯದಿಂದ ಬಯೋ-ಸೈನ್ಸಸ್ ಮತ್ತು ಟೆಕ್ನಾಲಜಿ ವಿಭಾಗದಲ್ಲಿ ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಬೊಜ್ಜು ಹಾಗೂ ಅದರಿಂದ ಉಂಟಾಗುವ ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಪ್ರೊಬಯೋಟಿಕ್ಸ್‌ ಮೂಲಕ ಚಿಕಿತ್ಸಾ ಪರಿಹಾರ ಕಂಡುಕೊಳ್ಳುವ ಆಣ್ವಿಕ ರೋಗಶಾಸ್ತ್ರದ ಅಧ್ಯಯನದ ಮಹಾಪ್ರಬಂಧಕ್ಕೆ ಪದವಿ ಲಭಿಸಿದೆ. ಅವರಿಗೆ ಡಾ. ಪ್ರಗಾಸಮ್ ವಿ ಮಾರ್ಗದರ್ಶನ ನೀಡಿದ್ದರು. ಗ್ರಾಮಸ್ಥರು ಹಾಗೂ ಸ್ನೇಹಿತರು ಅಭಿನಂದಿಸಿದ್ದಾರೆ.