ಇಂದಿನಿಂದ ಭಾಗ್ಯನಗರ ದಲ್ಲಿ ಸಂಭ್ರಮ ದಿಂದ ಶ್ರೀ ಶಂಕರಾಚಾರ್ಯರ ಜಾತ್ರಾ ಮಹೋತ್ಸವ : ರಮೇಶ್ ಹ್ಯಾಟಿ

ಇಂದಿನಿಂದ ಭಾಗ್ಯನಗರ ದಲ್ಲಿ  ಸಂಭ್ರಮ ದಿಂದ ಶ್ರೀ ಶಂಕರಾಚಾರ್ಯರ ಜಾತ್ರಾ ಮಹೋತ್ಸವ : ರಮೇಶ್ ಹ್ಯಾಟಿ  Sri Shankaracharya's Jatra Mahotsav to be celebrated with enthusiasm in Bhagyanagar from today: Rame

ಕೊಪ್ಪಳ 18:  ಇಲ್ಲಿಗೆ ಸಮೀಪದ ಭಾಗ್ಯನಗರ ಪಟ್ಟಣದ ಶ್ರೀ ಶಾರದಾ ಪೀಠ ಜಗದ್ಗುರು ಶ್ರೀ ಶಂಕರಾಚಾರ್ಯರ ಮಠದಲ್ಲಿ ಶ್ರೀ ಶಾರದಾ ಮಾತೆಯ ನೂತನ ಮಂದಿರ ಉದ್ಘಾಟನೆ, ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾನ, ಕಳಸಾರೋಹಣ, ಶ್ರೀ ಶಾರದಾಂಬಾ ಶಾಲಾ ಹಾಗೂ ವಿದ್ಯಾರ್ಥಿ ಮಂದಿರದ ನೂತನ ಕೊಠಡಿಗಳು ಅನಾವರಣ ಮತ್ತು ಶ್ರೀ ಶಂಕರಾಚಾರ್ಯರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಏಪ್ರಿಲ್ 19 ರಿಂದ 21ರವರೆಗೆ ವಿಜೃಂಭಣೆಯಿಂದ ನಡೆಯಲಿವೆ ಎಂದು ಶ್ರೀ ಶಾರದಾಂಬಾ ಟ್ರಸ್ಟ್‌ ಕಾರ್ಯದರ್ಶಿ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯತಿ  ಅಧ್ಯಕ್ಷ ರಮೇಶ ಹ್ಯಾಟಿ ಹೇಳಿದರು.

ಅವರು  ಕೊಪ್ಪಳ ನಗರದ ಪತ್ರಿಕಾ ಭವನದಲ್ಲಿ  ಏರಿ​‍್ಡಸಿದ್ದ  ಸುದ್ದಿಗೋಷ್ಠಿ ಯನ್ನು ಉದ್ದೇಶಿಸಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಏ.19 ರವಿವಾರ ಬ್ರಾಹ್ಮೀ ಮುಹೂರ್ತದಲ್ಲಿ ಗುರುದೇವತಾ ಮೂರ್ತಿಗಳಿಗೆ ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ ನಂತರ ಧ್ವಜಾರೋಹಣ, ಶ್ರೀ ಅಮ್ಮನವರಿಗೆ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಏ.20 ಸೋಮವಾರ ಬೆಳಗ್ಗೆ 7 ಗಂಟೆಗೆ ನೂತನ ಶಿಲಾಮೂರ್ತಿಯನ್ನು ಶ್ರೀ ತಾಯಮ್ಮದೇವಿ ದೇವಸ್ಥಾನದಿಂದ ಶ್ರೀಮಠದವರೆಗೆ ಪೂರ್ಣಕುಂಭ, ಕಳಸಗಳ ಸಮೇತ ಭಾಗ್ಯನಗರ ಪಟ್ಟಣದಲ್ಲಿ ಸಕಲಮಂಗಲವಾಧ್ಯಗಳೊಂದಿಗೆ ಮೆರವಣಿಗೆ ನಡೆಯಲಿದೆ ಎಂದರು.  

ಏ.21 ಮಂಗಳವಾರ ಬೆಳಗ್ಗೆ 10 ಗಂಟೆಗೆ ಶ್ರೀ ಶಾರದಾಂಬಾ ಶಾಲಾ ಹಾಗೂ ವಿದ್ಯಾರ್ಥಿ ಮಂದಿರ ನೂತನ ಕೊಠಡಿ ಸಚಿವ ಶಿವರಾಜ್‌ತಂಗಡಗಿ ಅವರು ಉದ್ಟಾಟಿಸಲಿದ್ದಾರೆ. ಕಾರ್ಯಕ್ರಮದ ಘನ ಉಪಸ್ಥಿತಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಅಧ್ಯಕ್ಷತೆ ಸಂಸದ ಕೆ.ರಾಜಶೇಖರ ಹಿಟ್ನಾಳ  ವಹಿಸುವರು, ಗೌರವಾನ್ವಿತ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಜಿಡಿಎಸ್ ಮುಖಂಡ ಸಿವಿ ಚಂದ್ರಶೇಖರ, ಬಿಜೆಪಿ ಮುಖಂಡ ಡಾ.ಬಸವರಾಜ ಕ್ಯಾವಟರ್, ಹಿರಿಯ ವಕೀಲರಾದ ರಾಘವೇಂದ್ರ ಪಾನಘಂಟಿ, ಪ ಪಂ ಮುಖ್ಯಾಧಿಕಾರಿ ಸುರೇಶ ಬಬಲಾದಿ, ಹೊಸಪೇಟಿ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಿ.ಎಂ.ವೃಷಭೇಂದ್ರಯ್ಯನವರು, ಹೊಸಪೇಟೆ ಸಮಾಜ ಸೇವಕರಾದ ವೆಂಕಪ್ಪ ಹೆಚ್‌.ಎಸ್‌. ಅವರು ಭಾಗವಹಿಸಲಿದ್ದಾರೆ,

ಅತಿಥಿಗಳಾಗಿ ಭಾಗ್ಯನಗರ ಪಟ್ಟಣ ಪಂಚಾಯತಿ ಸರ್ವ ಸದಸ್ಯರು ಉಪ್ಪಸ್ಥಿರಿವರು ಎಂದು ಟ್ರಸ್ಟಿನ ಕಾರ್ಯದರ್ಶಿಯಾಗಿರುವ ಭಾಗ್ಯನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಮೇಶ ಹ್ಯಾಟಿ ವಿವರಿಸಿದರು . ಏ.21 ರಂದು ಸಂಜೆ 6 ಗಂಟೆಗೆ ನಾಡಿನ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ಮಹಾರಥೋತ್ಸವ ಜರುಗಲಿದೆ. ಈ ಮೂರು ದಿನಗಳ ಜಾತ್ರಾ ಕಾರ್ಯಕ್ರಮಗಳಿಗೆ ಸದ್ಬಕ್ತರು ಆಗಮಿಸುವಂತೆ ಅವರುಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಶಾರದಾಂಬಾ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ವನಿತಾ ಕೋರಿ, ಖಜಾಂಚಿ ಸರೋಜಾ ಬಾಕಳೆ, ಶ್ರೀ ಶಂಕರ ಯುವಕ ಸಂಘದ ಅಧ್ಯಕ್ಷ ಗಂಗಾಧರ ನೇವಾರ, ಸಹ ಕಾರ್ಯದರ್ಶಿ ಈರಣ್ಣ ಪಗಡಾಲ ಇದ್ದರು