ಶ್ರೀ ಲಿಂ.ಹಾನಗಲ್ಲ ಕುಮಾರೇಶ್ವರ 158 ನೇ ಜಯಂತಿ ಮಹೋತ್ಸವ: ಸದ್ಭಾವನಾ ಪಾದಯಾತ್ರೆಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಭಾಗಿ
Sri Lim. Hanagalla Kumareshwara's 158th Jayanti Mahotsav
ಗಂಗಾವತಿ 17 : ನಗರದ 16 ನೇ ವಾರ್ಡನಲ್ಲಿ ಬುಧುವಾರ ನಡೆದ ಶ್ರೀ ಲಿಂ.ಹಾನಗಲ್ಲ ಕುಮಾರೇಶ್ವರ 158 ನೇ ಜಯಂತಿ ಮಹೋತ್ಸವದ ಅಂಗವಾಗಿ ನಡೆದ ಸದ್ಭಾವನಾ ಪಾದಯಾತ್ರೆಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಭಾಗವಹಿಸಿದರು.
ನಗರದ ಎ.ಪಿ.ಎಮ್.ಸಿ.ಆವರಣದಲ್ಲಿರುವ ಶ್ರೀ ಚನ್ನ ಬಸವ ಸ್ವಾಮಿ ದೇವಾಸ್ಥನದಿಂದ ಆರಂಭವಾದ ಪಾದಯಾತ್ರೆ ಬಂಬು ಬಜಾರ,ಬಸವೇಶ್ವರ ನಗರದ ಮೂಲಕ ಬನ್ನಿಮರದ ಕ್ಯಾಂಪ್ ನಲ್ಲಿರುವ ಕಲಾ ಮಂದಿರದಲ್ಲಿ ಸಂಪನ್ನಗೊಂಡಿತು.ಎಲ್ಲಾ ಓಣಿಗಳಲ್ಲಿ ಮಹಿಳೆಯರು ರಂಗೋಲಿ ಹಾಕಿ ಪಾದಯಾತ್ರೆಗೆ ಮೆರಗು ತಂದರು.ಶ್ರೀ ಹಾನಗಲ್ ಕುಮಾರೇಶ್ವರ ಜಯಂತಿ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಶಿವಕುಮಾರ ದೇವರು, ಉಪಾಧ್ಯಕ್ಷರಾದ ಚಂದ್ರಶೇಖರ ಸ್ವಾಮಿ ದೇವರು ಆಶೀರ್ವಚನ ಮಾಡಿದರು.ಸುಮಾರು 50 ಕ್ಕೂ ಹೆಚ್ಚು ಸಂಖ್ಯೆಯ ಶ್ರೀಗಳು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾ ಸಭಾ ಗಂಗಾವತಿ ಘಟಕದ ಮುಖ್ಯ ಘಟಕ,ಮಹಿಳಾ ಘಟಕ, ಯುವ ಘಟಕದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಮುಖರಾದ ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿರುಪಾಕ್ಷಪ್ಪ ಸಿಂಗನಾಳ, ಗಿರೇಗೌಡ ಹೊಸ್ಕೇರಾ, ತಿಪ್ಪೆರುದ್ರಸ್ವಾಮಿ, ಮನೋಹರ ಸ್ವಾಮಿ ಹಿರೇಮಠ, ಮನೋಹರ ಗೌಡ ಹೇರೂರ,ಮಹಂತೇಶ ಗಲಗಲಿ,ಅಕ್ಕಿ ಪ್ರಕಾಶ, ಓಲಿ ರವಿ,ಪೂಜಾ ಮನೋಹರ ಸ್ವಾಮಿ,ಕವಿತಾ ಗುರುಮೂರ್ತಿ,ಪೂಜಾ ಮನೋಹರ ಸ್ವಾಮಿ,ನಂದಿನಿ ಮುದಗಲ್,ಶಿಲ್ಪಾ ಶ್ರೀನಿವಾಸ, ಸಂಧ್ಯಾ ಅಶೋಕಸ್ವಾಮಿ ಹೇರೂರ,ಕೃಪಾ ಬಸಯ್ಯ, ಪ್ರತಿಭಾ, ಸುವರ್ಣ,ಅನ್ನಪೂರ್ಣ ಸಿಂಗನಾಳ,ಮಂಜುಳಾ ಗಾಳಿ, ಸರೋಜಾ ಪಲ್ಲೆದ, ಮಂಜುಳಾ ಗಾಳಿ, ಸುಮಾ ಮಸ್ಕಿ, ವಿಮಲಾ ದೇವಿ,ಸುಜಾತ ಜಯನಗರ, ಅಮೃತಾ,ಮಧು, ಮೇಘಾ ಹಿರೆಮಠ,ಸಿಂಚನಾ,ಕಾವ್ಯ ,ಸ್ವಾತಿ ಹಿರೇಮಠ, ಸುಶೀಲಾ ಸುಧೀಂದ್ರ,ಸಂಗಯ್ಯ ಸಂಶಿಮಠ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.ಮಧ್ಯಾಹ್ನ ಜಂಗಮರ ಕಲ್ಗುಡಿ ಮತ್ತು ಹೊಸಳ್ಳಿ ಗ್ರಾಮಗಳಲ್ಲಿ ಪಾದಯಾತ್ರೆ ನಡೆಯಿತು.ಗುರುವಾರ ಹೇರೂರ ಗ್ರಾಮದಲ್ಲಿ ಸದ್ಭಾವನಾ ಯಾತ್ರೆ ನಡೆಯಲ್ಲಿದ್ದು ,ಅಲ್ಲಿಯೂ ಅದ್ಧೂರಿಯಾಗಿ ಸ್ವಾಗತಿಸಲು ತಯ್ಯಾರು ಮಾಡಿಕೊಳ್ಳಲಾಗಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 